ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆ

12:48 PM, Sunday, April 10th, 2011
Share
1 Star2 Stars3 Stars4 Stars5 Stars
(No Ratings Yet)
Loading...

ವಿವಿಧ ಹಿಂದೂ ಸಂಘಟನೆಗಳಿಂದ ಮತಾಂತರದ ವಿರುದ್ಧ ಪ್ರತಿಭಟನೆಮಂಗಳೂರು: ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಇನ್ನಿತರ ಹಿಂದೂ ಸಂಘಟನೆಗಳು, ಮತಾಂತರದ ವಿರುದ್ಧ ಶನಿವಾರ ದ.ಕ ಜಿಲ್ಲಾಧಿಕಾರಿ ಕಚೇರಿಯ  ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮತಾಂತರದ ವಿರದ್ಧ ಕೂಡಲೇ ಕ್ರಮ ಜರಗಿಸುವಂತೆ ಮನವಿ ಸಲ್ಲಿಸಿತು.
ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಸತ್ಯಜಿತ್ ಸುರತ್ಕಲ್  ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ  ಬಡ ಹಿಂದೂ ಕುಟುಂಬಗಳ ಎಳೆಯ ಮಕ್ಕಳಿಗೆ ಉಚಿತ ಸೌಲಭ್ಯ ನೀಡುವ  ಆಮಿಷದ ಮೂಲಕ ಕ್ರೈಸ್ತ ಮಿಶನರಿಗಳು ಮತಾಂತರ ಕಾರ್ಯವನ್ನು ಮಾಡುತ್ತಿದೆ. ಕರಾವಳಿ ಜಿಲ್ಲೆಯಲ್ಲಿ 40ಕ್ಕೂ ಮಿಕ್ಕಿದ ಮತಾಂತರ ಕೇದ್ರಗಳು ಅಕ್ರಮವಾಗಿ ಅನಾಥಾಶ್ರಮ ನಡೆಸಿ ಮಕ್ಕಳನ್ನು ಮತಾಂತರಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಸತ್ಯಜಿತ್ ಸುರತ್ಕಲ್  ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮುಗ್ಧ ಮಕ್ಕಳನ್ನು ಮತಾಂತರಗೊಳಿಸುವ ಇಂತಹ ಕೇಂದ್ರಗಳ ವಿರುದ್ಧ ಸರಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಗುರಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗುರಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿಯವರು ಮಾತನಾಡಿ ಕ್ರೈಸ್ತ ಮಿಶನರಿಗಳು ಹಿಂದೂ ಮಕ್ಕಳನ್ನು ಮತಾಂತರ ಮಾಡುವ ಮೂಲಕ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ಬಂದಿದೆ. ಅನಾಥಾಶ್ರಮ ನಡೆಸುವ ಸೋಗಿನಲ್ಲಿ ಮುಗ್ಧ ಮಕ್ಕಳನ್ನು ಮತಾಂತರಗೊಳಿಸಿ ಕ್ರೈಸ್ತರನ್ನಾಗಿ ಪರಿವರ್ತಿಸುತ್ತಿದೆ. ಇಂತಹ ಸಂಸ್ಥೆಗಳ ವಿರುದ್ಧ ಸರಕಾರ ಮತ್ತು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕೆಂದು ಸ್ವಾಮೀಜಿ ವಿನಂತಿಸಿಕೊಂಡರು.
ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಎಂ.ಬಿ ಪುರಾಣಿಕ್ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳನ್ನು ಮುಸಲ್ಮಾನರು, ಕ್ರೈಸ್ತರು ಆಕ್ರಮಣ ಮಾಡುತ್ತಿದ್ದಾರೆ, ಸರಕಾರ ಅಲ್ಪಸಂಖ್ಯಾತರಿಗೆ ಸವಲತ್ತುಗಳನ್ನು ನೀಡಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಎಂ.ಬಿ ಪುರಾಣಿಕ್ ಆರೋಪಿಸಿದರು.
ಬ್ರಿಟಿಷರು ದೇಶವನ್ನು ಬಿಟ್ಟು ಹೋಗುವಾಗ ಕ್ರೈಸ್ತರಿಗೆ ಮತಾಂತರದ ಪೂರ್ಣ ಸ್ವಾತಂತ್ರ್ಯವನ್ನು ಬಿಟ್ಟು ಹೋಗಿದ್ದಾರೆ. ಸ್ವಾತಂತ್ರ್ಯಾ ನಂತರ ಸರಕಾರದ ಸವಲತ್ತುಗಳನ್ನು ಪಡೆದು ಅನೇಕ ಮಿಷನರಿಗಳು ಮತಾಂತರ ಕೆಲಸಗಳನ್ನು ಮಾಡುತ್ತಿದೆ ಎಂದು ಪುರಾಣಿಕ್ ಹೇಳಿದರು.
ಪ್ರತಿಭಟನಾಸಭೆಯನ್ನುದ್ದೇಶಿಸಿ ಬಿ.ಜೆ.ಪಿ ಯವ ಮೋರ್ಚಾದ ನಗರಾಧ್ಯಕ್ಷ ರಾಘವೇಂದ್ರ, ಎ.ಬಿ.ವಿ.ಪಿ ನಗರ ಕಾರ್ಯದರ್ಶಿ ವಿನಯ್ ಜಾದವ್, ಬಿಜೆಪಿ ನಗರಾಧ್ಯಕ್ಷ ಶ್ರೀಕರ ಪ್ರಭು ಮಾತನಾಡಿದರು.
ಸಭೆಯಲ್ಲಿ ಮಾಜಿ ಉಪ ಮೇಯರ್ ರಾಜೇಂದ್ರಕುಮಾರ್, ವಿಶ್ವ ಹಿಂದೂ ಪರಿಷತ್ತಿನ ಮೋನೋಹರ್ ತುಳಜಾರಾಮ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English