ಅನಧಿಕೃತವಾಗಿ ಸಾಗಿಸಲಾಗುತಿದ್ದ 15 ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 94 ಸಾವಿರ ರೂ. ನಗದು ಪತ್ತೆ

8:38 PM, Saturday, February 6th, 2016
Share
1 Star2 Stars3 Stars4 Stars5 Stars
(5 rating, 5 votes)
Loading...
Cash and Silver

ಮಂಜೇಶ್ವರ: ಕರ್ನಾಟಕ ಸಾರಿಗೆ ಬಸ್ಸಿನಲ್ಲಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಸಾಗಿಸಲಾಗುತಿದ್ದ ಸುಮಾರು 15ಲಕ್ಷ ರೂ. ಮೌಲ್ಯದ ಬೆಳ್ಳಿ ಹಾಗೂ 94 ಸಾವಿರ ರೂ. ನಗದನ್ನು ಮಂಜೆಶ್ವರ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ತಮಿಳ್ನಾಡು ಚೆನ್ನೈ ನಿವಾಸಿ ಮಹಾಲಿಂಗ (50) ಎಂಬಾತನನ್ನು ಸೆರೆ ಹಿಡಿಯಲಾಗಿದೆ. ಶನಿವಾರದಂದು ಬೆಳಿಗ್ಗೆ ಸುಮಾರು ಹನ್ನೊಂದು ಘಂಟೆಗೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ವಾಮಂಜೂರು ಚೆಕ್ ಪೋಸ್ಟ್ ಅಬಕಾರಿ ಪೊಲೀಸರು ಆ ದಾರಿಯಾಗಿ ಬಂದ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತಿದ್ದ ಕರ್ನಾಟಕ ಸಾರಿಗೆ ಬಸ್ಸನ್ನು ಪರಿಶೋಧಿಸಿದಾಗ ಅದರ ಹಿಂಬದಿಯ ಸೀಟಿನಲ್ಲಿ ಅಡಗಿಸಿಟ್ತ ರೀತಿಯಲ್ಲಿದ್ದ ಚೀಳವನ್ನು ಪರಿಶೋಧಿಸಿದಾಗ ಅದರಲ್ಲಿ ಸುಮಾರು 15 ಲಕ್ಷ ರೂ. ಬೆಳ್ಳಿ ಹಾಗೂ 94 ಸಾವಿರ ರೂ. ನಗದನ್ನು ವಶಪಡಿಸಲಾಗಿದೆ. ಈ ಸಂಬಂಧ ಆರೋಪಿ ಮಹಾಲಿಂಗ ಎಂಬಾತನನ್ನು ವಶಕ್ಕೆ ತೆಗೆಯಲಾಗಿದೆ. ಇನ್ನು ಆರೋಪಿಯನ್ನು ಹಾಗೂ ಮಾಲನ್ನು ಮಂಜೆಶ್ವರ ಪೊಲೀಸರಿಗೆ ಹಸ್ತಾಂತರಿಸಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English