ಸೈಂಟ್ ಲಾರೆನ್ಸ್ ಚಾಪೆಲ್ ವಾರ್ಷಿಕೋತ್ಸವ

11:52 AM, Monday, August 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

Saint-Larence-Chapelಕುಂಬಳೆ:ಚೇವಾರು ಸಮೀಪದ ಪೆರ್ಮುದೆ ಸೈಂಟ್‌ಲಾರೆನ್ಸ್ ಚಾಪೆಲ್‌ನ ವಾರ್ಷಿಕೋತ್ಸವ ಆದಿತ್ಯವಾರ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿಖಾರ್ ಜನರಲ್ ಪೊನ್ಸಿಗ್ನೋರ್ ಫಾ.ಡೆನ್ನಿಸ್ ಮೊರಸ್ ಪ್ರಭು ದಿವ್ಯ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಕಯ್ಯಾರು ಕ್ರಿಸ್ತರಾದ ದೇವಾಲಯದ ಧರ್ಮಗುರು ಫಾ.ವಿಕ್ಟರ್ ಡಿ’ಸೋಜ ಉಪಸ್ಥಿತರಿದ್ದರು.

ಮಂಗಳೂರು ಧರ್ಮವಲಯದಲ್ಲಿ ಸೈಂಟ್ ಜೋನ್ ಮರಿಯ ವಿಯಾನ್ನಿಯವರ ಹಬ್ಬವನ್ನು ಯಾಜಕರ ದಿನವನ್ನಾಗಿ ಆಚರಿಸುತ್ತಿದ್ದು, ದಿವ್ಯ ಬಲಿ ಪೂಜೆಯಲ್ಲಿ ಯಾಜಕರಿಗಾಗಿ ವಿಶೇಷ ಪ್ರಾರ್ಥನೆ ನಡೆಯಿತು.

Saint-Larence-Chapelದಿವ್ಯ ಬಲಿ ಪೂಜೆಯ ಬಳಿಕ ಸೈಂಟ್ ಲಾರೆನ್ಸ್ ಚಾಪೆಲ್‌ನ ನೂತನ ಕಟ್ಟಡ ನಿರ್ಮಿಸುವ ಸ್ಥಳಕ್ಕೆ ಮೆರವಣಿಗೆಯಲ್ಲಿ ನಡೆಸಲಾಯಿತು. ಫಾ.ಡೆನ್ನಿಸ್ ಮೊರಸ್ ಪ್ರಭು ಬುನಾದಿ ಕಲ್ಲನ್ನು ಇರಿಸಿ ಆಶೀರ್ವದಿಸಿ ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಿದರು. ಫಾ.ವಿಕ್ಟರ್ ಡಿ’ಸೋಜ, ಪೆರ್ಮುದೆ ವಾಳೆಯ ಗುರಿಕ್ಕಾರ ವಿನ್ಸಂಟ್ ಮೊಂತೇರೊ ಮೊದಲಾದವರು ಉಪಸ್ಥಿತರಿದ್ದರು.

Saint-Larence-Chapel

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English