ಮಂಗಳೂರು: ನರಭಕ್ಷಕರಾಗಿ, ಗೋಮುಖ ವ್ಯಾಘ್ರರಂತೆ ದಲಿತರ ಚರ್ಮ ಸುಲಿಯುತ್ತಿರುವ ಸಂಘ ಪರಿವಾರಕ್ಕೆ ದಲಿತರ ಮೇಲೆ ಹಲ್ಲೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಕಾಂಗ್ರೆಸ್ ಹಿರಿಯ ಮುಖಂಡೆ ಮೋಟಮ್ಮ ಪ್ರಶ್ನಿಸಿದ್ದಾರೆ.
ದೇಶಾದ್ಯಂತ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಪ್ರಶ್ನಿಸಿದ ಮೋಟಮ್ಮ, ಧರ್ಮ, ಜಾತಿ, ಭಾಷೆ ಎಲ್ಲವನ್ನೂ ಬದಿಗಿಟ್ಟು ಎಲ್ಲರನ್ನೂ ಸಮನಾಗಿ ರಕ್ಷಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮರೆತಿದೆ. ದಲಿತರ ಮೇಲಿನ ದೌರ್ಜನ್ಯದ ಪ್ರಕರಣಗಳು ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ನಮ್ಮಿಂದ ನಡೆಯಬೇಕಿದೆ ಎಂದರು.
ದಲಿತರ ದೌರ್ಜನ್ಯದ ವಿರೋಧವಾಗಿ ಪ್ರಧಾನಿ ಮೋದಿ ನೀಡಿರುವ ಹೇಳಿಕೆ ದೌರ್ಜನ್ಯ ಎಸಗುತ್ತಿರುವವರ ಮೇಲೆ ಪ್ರಭಾವ ಬೀರಬೇಕು ಅಲ್ಲದೆ ದಲಿತರ ಆಹಾರ ಪದ್ದತಿಯನ್ನು ಹತ್ತಿಕ್ಕುವ ಅಧಿಕಾರ ಸಂಘಪರಿವಾರಕ್ಕೆ ಇಲ್ಲ ಎಂಬುವುದನ್ನು ಅವರು ತಿಳಿದುಕೊಳ್ಳಬೇಕು ಎಂದರು.
ಶಾಸಕರಾದ ಜೆ.ಆರ್.ಲೋಬೊ ಅವರ ನಾಯಕತ್ವದಲ್ಲಿ ನಡೆದ ಈ ಸಭೆಯಲ್ಲಿ ಕಾಂಗ್ರೆಸ್ ಮುಂದಾಳುಗಳಾದ ಐವನ್ ಡಿ’ಸೋಜಾ, ಮಿಥುನ್ ರೈ, ಇಬ್ರಾಹಿಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಪದ್ಮನಾಭ ನರಿಂಗಾನ, ಶಶಿಧರ ಹೆಗ್ಡೆ, ಅಪ್ಪಿ, ವಿಶ್ವಾಸ್‍ದಾಸ್, ಬಾಲಕೃಷ್ಣ ಶೆಟ್ಟಿ, ಆಶಿತ್ ಪಿರೇರಾ, ಮೆರಿಲ್ ರೇಗೋ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English