ಕುಟುಂಬದ ಆಸರೆಯಾಗಿದ್ದ ಯುವಕ ಆತ್ಮಹತ್ಯೆ

12:25 PM, Thursday, August 25th, 2016
Share
1 Star2 Stars3 Stars4 Stars5 Stars
(No Ratings Yet)
Loading...

Vijayaಉಪ್ಪಳ: ಕುಟುಂಬಕ್ಕೆ ಏಕಾಸರೆಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಬಾಯಾರುಪದವು ಸಮೀಪದ ಕನಿಯಾಲ ಚಾಕಟೆಗುಳಿಯಲ್ಲಿ ಬುಧವಾರ ನಡೆದಿದೆ.

ಕನಿಯಾಲ ಚಾಕಟೆಗುಳಿ ನಿವಾಸಿ ಸಿ.ಎಚ್ ಪ್ರಭಾಕರ ಬಾಗಿ ದಂಪತಿ ಪುತ್ರ ಸಿ.ಎಚ್ ವಿಜಯ (33) ಆತ್ಮಹತ್ಯೆಗೆ ಶರಣಾದ ಯುವಕ. ಹಲವು ವರ್ಷಗಳಿಂದ ಸೀತಾಂಗೋಳಿ ಸಮೀಪದ ಮರದ ಮಿಲ್ಲಿನಲ್ಲಿ ಕಾರ್ಮಿಕರಾಗಿ ಇವರು ದುಡಿಯುತ್ತಿದ್ದರು. ಶಾಂತ ಸ್ವಭಾವಿಯಾಗಿದ್ದ ವಿಜಯ್ ಎಲ್ಲರ ಜೊತೆ ಸ್ನೇಹ ಭಾಂದವ್ಯವನ್ನು ಹೊಂದಿದ್ದರು ಎನ್ನಲಾಗಿದೆ. ಮೃತ ಯುವಕ ವಿಜಯ ವಯೋವೃದ್ದೆ ತಾಯಿ, ತಂದೆ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.

ದಿನಗಳ ಹಿಂದೆ ಸಹ ಕಾರ್ಮಿಕನ ಜೊತೆಯಲ್ಲಿ ನಡೆದ ಕಲಹ ಆತ್ಮಹತ್ಯೆಗೆ ಕಾರಣ ಎಂದು ಸಂಶಯಿಸಲಾಗಿದೆ. ಕಳೆದ ಶನಿವಾರ ಸೀತಾಂಗೋಳಿ ಮಿಲ್ಲಿನಲ್ಲಿ ಕೆಲಸಕ್ಕಿದ್ದ ಸಹ ಕಾರ್ಮಿಕ ವಿಜಯನನ್ನು ವಿನಾ ಕಾರಣ ಥಳಿಸಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.

ತದನಂತರ ಪೋಲಿಸರ ಮಧ್ಯಸ್ಥಿಕೆಯಲ್ಲಿ ಇತ್ತಂಡಗಳ ಮಧ್ಯೆ ಸಂಧಾನ ಏರ್ಪಡಿಸಲು ತೀರ್ಮಾನಿಸಲಾಗಿತ್ತು. ಈ ಮಧ್ಯೆ ವಿಜಯ ಬೆದರಿಕೆಯ ಕಾರಣ ಆತ್ಮಹತ್ಯೆಗೈದಿರಬಹುದೆಂದು ಸಂಶಯಿಸಲಾಗಿದೆ. ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದ್ದು, ಬುಧವಾರ ಸಂಜೆ ಚಾಕಟೆಗುಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English