ಕುಟುಂಬಸ್ಥರು ಮುಂದೆ ಬಾರದಿದ್ದಲ್ಲಿ ಜಿಲ್ಲಾಡಳಿತದಿಂದಲೇ ಸಾವನ್ನಪ್ಪಿದ ಸೋಂಕಿತರ ಅಂತಿಮ ಸಂಸ್ಕಾರ

Thursday, June 3rd, 2021
R Ashoka

ಬೆಂಗಳೂರು : ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಸಂಸ್ಕಾರ ಮಾಡಲು ಕೆಲ ಕುಟುಂಬಸ್ಥರು ಮುಂದೆ ಬರದಿರುವ ಹಿನ್ನೆಲೆಯಲ್ಲಿ ಅಂತಹ ವ್ಯಕ್ತಿಗಳ ಮೃತದೇಹವನ್ನು ಆಯಾ ಧರ್ಮದ ವಿಧಿವಿಧಾನದಂತೆ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಿ ಅಂತಿಮ ವಿಧಿವಿಧಾನಗಳನ್ನು ಆಯಾಯ ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ನೆರವೇರಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಈಗಾಗಲೇ ಕಂದಾಯ ಸಚಿವ ಆರ್ ಅಶೋಕ್ ಅವರು ಖುದ್ದು ನೇತೃತ್ವವಹಿಸಿ ಸುಮಾರು ಐದು ನೂರಕ್ಕೂ ಹೆಚ್ಚು ಅಸ್ಥಿಗಳನ್ನ ಕಾವೇರಿ ನದಿ ತೀರದಲ್ಲಿ ವಿಸರ್ಜನೆ ಮಾಡಿದ್ದರು. ಈ ವೇಳೆಯೇ ಸೋಂಕಿನಿಂದ […]

ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದೆ ತಡರಾತ್ರಿಯವರೆಗೆ ನಿಲ್ಲಿಸಿದ ಶಾಸಕರನ್ನೂ ಕೂಡಲೇ ಬಂಧಿಸಬೇಕು

Friday, April 24th, 2020
Harish Kumar

ಬೆಳ್ತಂಗಡಿ: ಬಂಟ್ವಾಳದ ಕಸಬಾ ದಲ್ಲಿ ಕೋವಿಡ್ನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದೆ ತಡರಾತ್ರಿಯವರೆಗೆ ಜಿಲ್ಲಾಡಳಿತವನ್ನು ತಡೆದ ಶಾಸಕರನ್ನೂ ಕೂಡಲೇ ಬಂಧಿಸಬೇಕೆಂದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ. ಮೃತದೇಹವನ್ನು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಬೇಕು. ಅಲ್ಲಿ ಯಾವುದೇ ರೀತಿಯಲ್ಲಿ ಸೋಂಕು ಹರಡುವ ಸಾಧ್ಯತೆಗಳಿಲ್ಲ. ಆದರೂ ಉದ್ದೇಶಪೂರ್ವಕವಾಗಿ ಬೇಜವಾಬ್ದಾರಿಯಿಂದ ಶಾಸಕರೇ ಮುಂದೆ ನಿಂತು ಅಂತ್ಯಕ್ರಿಯೆ ಮಾಡುವುದನ್ನುಮಂಗಳೂರು ಉತ್ತರ ಶಾಸಕರು ತಡೆದಿದ್ದಾರೆ. ಇದು ಬಹಳ ಬೇಸರದ ವಿಚಾರವಾಗಿದೆ. ಇದು ಕೊರೊನಾ ವಿರುದ್ಧದ ಹೋರಾಟಕ್ಕೆ ದೊಡ್ಡ ಹಿನ್ನಡೆಯಾಗಿದೆ. […]

ಮಂಗಳೂರು : ನಿವೃತ್ತ ಜಿಲ್ಲಾ ರೋಟರಿ ಗವರ್ನರ್​​ ಸೂರ್ಯಪ್ರಕಾಶ್ ಭಟ್ ನಿಧನ

Thursday, January 9th, 2020
surya-prakash

ಮಂಗಳೂರು : ನಿವೃತ್ತ ಜಿಲ್ಲಾ ರೋಟರಿ ಗವರ್ನರ್ ಸೂರ್ಯಪ್ರಕಾಶ್ ಭಟ್ (62) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತೀವ್ರ ಮಧುಮೇಹ ರೋಗದಿಂದ ಬಳಲುತ್ತಿದ್ದ ಸೂರ್ಯಪ್ರಕಾಶ್ ಭಟ್ ಎರಡು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೋಮಾ ತಲುಪಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. ಸೂರ್ಯಪ್ರಕಾಶ್ ಭಟ್ 1989ರಲ್ಲಿ ಮಂಗಳೂರು ರೋಟರಿ ಕ್ಲಬ್ ಸೇರ್ಪಡೆಗೊಂಡಿದ್ದು, ಸಕ್ರಿಯ ರೋಟರಿಯನ್ ಆಗಿ ಸೇವೆ ಸಲ್ಲಿಸಿದ್ದರು. 1995-96ರ […]

ಕುಟುಂಬದ ಆಸರೆಯಾಗಿದ್ದ ಯುವಕ ಆತ್ಮಹತ್ಯೆ

Thursday, August 25th, 2016
Vijaya

ಉಪ್ಪಳ: ಕುಟುಂಬಕ್ಕೆ ಏಕಾಸರೆಯಾಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಬಾಯಾರುಪದವು ಸಮೀಪದ ಕನಿಯಾಲ ಚಾಕಟೆಗುಳಿಯಲ್ಲಿ ಬುಧವಾರ ನಡೆದಿದೆ. ಕನಿಯಾಲ ಚಾಕಟೆಗುಳಿ ನಿವಾಸಿ ಸಿ.ಎಚ್ ಪ್ರಭಾಕರ ಬಾಗಿ ದಂಪತಿ ಪುತ್ರ ಸಿ.ಎಚ್ ವಿಜಯ (33) ಆತ್ಮಹತ್ಯೆಗೆ ಶರಣಾದ ಯುವಕ. ಹಲವು ವರ್ಷಗಳಿಂದ ಸೀತಾಂಗೋಳಿ ಸಮೀಪದ ಮರದ ಮಿಲ್ಲಿನಲ್ಲಿ ಕಾರ್ಮಿಕರಾಗಿ ಇವರು ದುಡಿಯುತ್ತಿದ್ದರು. ಶಾಂತ ಸ್ವಭಾವಿಯಾಗಿದ್ದ ವಿಜಯ್ ಎಲ್ಲರ ಜೊತೆ ಸ್ನೇಹ ಭಾಂದವ್ಯವನ್ನು ಹೊಂದಿದ್ದರು ಎನ್ನಲಾಗಿದೆ. ಮೃತ ಯುವಕ ವಿಜಯ ವಯೋವೃದ್ದೆ ತಾಯಿ, ತಂದೆ ಹಾಗೂ ಮೂವರು ಸಹೋದರಿಯರನ್ನು […]

ಅಂತ್ಯ ಸಂಸ್ಕಾರದ ವೇಳೆ ಕಣ್ ಬಿಟ್ಟ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವು

Sunday, August 24th, 2014
infant died

ಮಂಗಳೂರು : ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಮಗುವಿನ ಬಾಯಿಗೆ ಕೊನೆಯ ಗುಟುಕು ಹಾಲು ಹಾಕುವ ಸಂದರ್ಭ ಮಗು ಕಣ್ ಬಿಟ್ಟು ಹಾಲು ಚಪ್ಪರಿಸಿ ಮೈ ಅಲ್ಲಾಡಿಸಿ ಪೋಷಕರಿಗೆ ಅಚ್ಚರಿ ಮೂಡಿಸಿ ಸಂತಸವನ್ನು ತಂದಿತ್ತು. ಮಗುವನ್ನು ಕೂಡಲೇ ಮಂಗಳೂರಿನ ಎಸ್ ಸಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ತಂದೆ ವೈದ್ಯರ ವಿರುದ್ದ ದೂರನ್ನು ನೀಡಿದ್ದರು. ಆದರೆ ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿರುವ ಸುದ್ದಿ ಬಂದಿದೆ. ಸ್ವಾತಂತ್ರ್ಯೋತ್ಸವ (ಅ.15) ದಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗೌರಿ […]