ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ರವಿವಾರ ಭಜನ ತಂಡಗಳಿಂದ ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಎಕ್ಕಾರು ಭಜನ ತಂಡದವರು ಭಜನೆ ಮಾಡುತ್ತ ಪಾದಯಾತ್ರೆ ಮೂಲಕ ಕಟೀಲಿನ ಸರಸ್ವತೀ ಸದನಕ್ಕೆ ಆಗಮಿಸಿದ ಬಳಿಕ ಮಾಣಿಲದ ಶ್ರೀ ಮೋಹನದಾಸ ಸ್ವಾಮಿಜಿಯವರು ಭಜನೆ ಮಾಡುತ್ತ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕನ್ಯಾನದ ಶ್ರೀ ಮಹಾಬಲ ಸ್ವಾಮೀಜಿ, ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ| ರವೀಂದ್ರನಾಥ ಪೂಂಜಾ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ತಂತ್ರಿ ವೇದವ್ಯಾಸ ತಂತ್ರಿ, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ವಿವಿಧ ಸಂಘಟನೆಗಳ ಮುಖಂಡರಾದ ಶರಣ್ ಪಂಪುವೆಲ್, ಜಗದೀಶ ಶೇಣವ, ಆನಂದ ಶೆಟ್ಟಿ ಅಡ್ಯಾರ್, ಜಿತೇಂದ್ರ ಕೊಟ್ಟಾರಿ, ಕಾಂಗ್ರೆಸ್ ನಾಯಕ ಮಿಥುನ್ ರೈ, ಭುಜಬಲಿ ಧರ್ಮಸ್ಥಳ, ರಾಮಕೃಷ್ಣ ಉಡುಪ, ಶ್ರೀನಿವಾಸ ರಾವ್, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಭಾಸ್ಕರದಾಸ ಎಕ್ಕಾರು, ಉಮಾನಾಥ ಕೋಟ್ಯಾನ್, ಯುಗಪುರುಷದ ಭುವನಾಭಿರಾಮ ಉಡುಪ, ಮೋನಪ್ಪ ಶೆಟ್ಟಿ ಎಕ್ಕಾರು, ಕೊರಿಯರ್ ಸುಬ್ರಹ್ಮಣ್ಯ ಭಟ್, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನ ಜಯರಾಮ ಮುಕ್ಕಾಲ್ದಿ, ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನದ ನಿತಿನ್ ಹೆಗ್ಡೆ ಕಾವರ ಮನೆ, ಉಳೆಪಾಡಿ ದೇಗುಲದ ಧರ್ಮದರ್ಶಿ ಮೋಹನ್‌ದಾಸ್ ಸುರತ್ಕಲ್, ಜಿ.ಪಂ. ಮಾಜಿ ಸದಸ್ಯ ಈಶ್ವರ ಕಟೀಲು, ಸೋಂದಾ ಭಾಸ್ಕರ ಭಟ್, ರತ್ನಾಕರ ಶೆಟ್ಟಿ, ಕಿರಣ್ ಶೆಟ್ಟಿ ಕೊಡೆತ್ತೂರು, ಕೊಡೆತ್ತೂರು ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸುಧೀರ್ ಶೆಟ್ಟಿ, ಅತ್ತೂರು ಗುತ್ತು ಪ್ರಸನ್ನ ಶೆಟ್ಟಿ, ಸುದರ್ಶನ್ ಮೂಡಬಿದಿರೆ, ಹರೀಶ್ ಪೂಂಜ, ಸುಖೇಶ್ ಶೆಟ್ಟಿ ಶಿರ್ತಾಡಿ, ಕಾಂಗ್ರೆಸ್ ನಾಯಕ್ ಧನಂಜಯ ಮಟ್ಟು, ಕುಡ್ತಿಮಾರು ಗುತ್ತು ಗಿರೀಶ್ ಶೆಟ್ಟಿ, ದೇವಸ್ಥಾನದ ಪ್ರಬಂಧಕ ವಿಜಯ ಕುಮಾರ್ ಶೆಟ್ಟಿ ಹಾಗೂ ಪರಿಸರದ ಗ್ರಾಮಗಳ ಭಕ್ತರು ಉಪಸ್ಥಿತರಿದ್ದರು.
ಕಟೀಲು ತಾಯಿಯನ್ನು ಅವಹೇಳನ ಮಾಡಿದವರಿಗೆ ತಾಯಿಯೇ ಬುದ್ಧಿ ಕಲಿಸಬೇಕು. ಈ ಬಗ್ಗೆ ಪ್ರತಿ ದೇವಸ್ಥಾನದಲ್ಲಿ ಪ್ರಾರ್ಥನೆ ನಡೆ ಯಲಿ ಎಂದು ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಹೇಳಿದರು.
ಸಂಸದ ನಳಿನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಗಣೇಶ ಹಬ್ಬ ಹಾಗೂ ಇನ್ನಿತರ ಕಾರ್ಯಗಳು ನಡೆಯುತ್ತಿರುವುದರಿಂದ ಅಲ್ಲಿಯೂ ಪ್ರಾರ್ಥನೆ ಮಾಡಬೇಕು ಹಾಗೂ ಮತಾಂಧ ಶಕ್ತಿಗಳ ಹೇಯ ಕೃತ್ಯವನ್ನು ಖಂಡಿಸುವ ಮೂಲಕ ಯಾರು ಈ ಕೃತ್ಯಗೈದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹೇರಲಾಗುವುದು ಎಂದರು.
ಶಾಸಕ ಅಭಯಚಂದ್ರ ಜೈನ್ ಮಾತನಾಡಿ, ಕಟೀಲು ದೇವಿಯ ಅವಹೇಳನದಿಂದ ಭಕ್ತ ಸಮುದಾಯಕ್ಕೆ ನೋವಾಗಿದೆ. ಸರಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದೆ. ವಿಘ್ನ ಸಂತೋಷಿಗಳಿಗೆ ದೇವಿಯೇ ಸದ್ಬುದ್ಧಿ ಕರುಣಿಸಲಿ ಎಂದು ಹೇಳಿದರು.
Click this button or press Ctrl+G to toggle between Kannada and English