ಪಟ್ಲ ಸತೀಶ ಶೆಟ್ಟಿಯವರ ಸಮಾಜ ಮುಖಿ ಕಾರ್ಯಗಳಿಗೆ ಕಟೀಲು ದೇವಿಯ ಅನುಗ್ರಹವಿದೆ: ಕಮಲಾದೇವಿ ಅಸ್ರಣ್ಣ

Tuesday, December 11th, 2018
sathish-shetty

ಮಂಗಳೂರು: ಪಟ್ಲ ಸತೀಶ್ ಶೆಟ್ಟಿ ಯಕ್ಷಗಾನ ಭಾಗವತರಾಗಿ ಅವರು ಕೈಗೊಳ್ಳುವ ಸಮಾಜ ಮುಖಿ ಕಾರ್ಯಗಳಿಗೆ ಕಟೀಲು ಕ್ಷೇತ್ರದ ಶ್ರೀ ದೇವಿಯ ಅನುಗ್ರಹವಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಯ ಅರ್ಚಕ ಕಮಲಾದೇವಿ ಅಸ್ರಣ್ಣ ತಿಳಿಸಿದರು. ಪಟ್ಲ ಯಕ್ಷಾಶ್ರಯ ಯೋಜನೆಯಡಿ ಕುಂಜತ್ತಬೈಲ್‌ನಲ್ಲಿ ಯಕ್ಷಗಾನ ಕಲಾವಿದ ಪುರಂದರ ಶೆಟ್ಟಿ ಅವರಿಗೆ ನಿರ್ಮಿಸಿ ಕೊಟ್ಟಿರುವ ಮನೆಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು. ಪಟ್ಲ ಸತೀಶ್ ಶೆಟ್ಟಿ ಅವರು ಇಂದು ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದಾರೆ. ಪಟ್ಲ ಯಕ್ಷಾಶ್ರಯ ಯೋಜನೆಯಡಿ ಅವರು ಕೈಗೊಳ್ಳುವ […]

ಕಟೀಲು ದೇವಿ ಅವಮಾನ ಮುಂಬಯಿ ತಂಡದಿಂದ ಕಟೀಲಿನಲ್ಲಿ ಪ್ರಾರ್ಥನೆ

Friday, September 16th, 2016
mumbai

ಕಿನ್ನಿಗೋಳಿ: ಸಾಮಾಜಿಕ ಜಾಲತಾಣದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಅವಹೇಳನ ಖಂಡಿಸಿ ಮಂಗಳವಾರ ಮುಂಬಯಿಯಿಂದ ಆಗಮಿಸಿದ 66 ಮಂದಿಯ ತಂಡ ಹಾಗೂ ಕನ್ಯಾನ ಕೊಂಡೆವೂರು ನಿತ್ಯಾನಂದ ಸೇವಾಶ್ರಮ, ಬೊಲಾ°ಡು ಭಗವತೀ ಕ್ಷೇತ್ರ, ವಿಷ್ಣುಮೂರ್ತಿ ಕ್ಷೇತ್ರ ವಯನಾಡು ಕನ್ಯಾನ ಹಾಗೂ ಅಲ್ಲಿನ ವಿವಿಧ ಸಮಿತಿಗಳ 500 ಮಂದಿಯ ತಂಡ ಎಕ್ಕಾರಿನಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಗೆ ಪಾದಯಾತ್ರೆಯಲ್ಲಿ ಬಂದು ದುರ್ಗೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿತು. ಮುಂಬಯಿ ಭಕ್ತವೃಂದ ಸಮಿತಿ ಅಧ್ಯಕ್ಷ ಕೃಷ್ಣ ಉಚ್ಚಿಲ ಮಾತನಾಡಿ, ದುರ್ಗಾಪರಮೇಶ್ವರೀ ದೇವಿಗೆ […]

ಕಟೀಲು ದೇವಿಗೆ ಅವಹೇಳನ ಮಾಡಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಬೇಕು: ಐವನ್‌ ಡಿ’ಸೋಜಾ

Monday, September 12th, 2016
ivan-dsouza

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಟೀಲು ದೇವಿಗೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಶೀಘ್ರ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಬೇಕು ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದರು. ನಗರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಆತ ಪ್ರಕರಣದ ಪ್ರಮುಖ ಆರೋಪಿಗಳ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಆದುದರಿಂದ ಪೊಲೀಸ್‌ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಈ ಬಗ್ಗೆ ನಾನು ಈಗಾಗಲೇ ಮುಖ್ಯಮಂತ್ರಿ […]

ಕಟೀಲು ದೇವಿಯ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆ

Tuesday, September 6th, 2016
mass-prayers

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದನ್ನು ಖಂಡಿಸಿ ರವಿವಾರ ಭಜನ ತಂಡಗಳಿಂದ ಭಜನೆ ಹಾಗೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಎಕ್ಕಾರು ಭಜನ ತಂಡದವರು ಭಜನೆ ಮಾಡುತ್ತ ಪಾದಯಾತ್ರೆ ಮೂಲಕ ಕಟೀಲಿನ ಸರಸ್ವತೀ ಸದನಕ್ಕೆ ಆಗಮಿಸಿದ ಬಳಿಕ ಮಾಣಿಲದ ಶ್ರೀ ಮೋಹನದಾಸ ಸ್ವಾಮಿಜಿಯವರು ಭಜನೆ ಮಾಡುತ್ತ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಕನ್ಯಾನದ ಶ್ರೀ ಮಹಾಬಲ ಸ್ವಾಮೀಜಿ, ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ| ರವೀಂದ್ರನಾಥ […]

ಕಟೀಲು ದೇವಿಗೆ 4.5 ಕೋಟಿ ರೂ. ವೆಚ್ಚದ ಚಿನ್ನದ ರಥ ಸಮರ್ಪಣೆ

Tuesday, February 10th, 2015
Kateel Chariot

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ 4.5 ಕೋಟಿ ರೂ. ವೆಚ್ಚದ ಚಿನ್ನದ ರಥವನ್ನು ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ ಅವರು ದೇವಳದ ಆಡಳಿತಾಧಿಕಾರಿ ನಿಂಗಯ್ಯ ಹಾಗೂ ಆನುವಂಶಿಕ ಮೊಕ್ತೇಸರರಿಗೆ ರವಿವಾರ ಹಸ್ತಾಂತರಿಸಿದರು. ಬಳಿಕ ಮಾತನಾಡಿ, ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರ ಮನಸ್ಸು ಶ್ರೀಮಂತವಾಗಿರುವುದರಿಂದ ಇಲ್ಲಿನ ದೇವಾಲಯಗಳೂ ಶ್ರೀಮಂತವಾಗಿವೆ ಎಂದರು. ಭಕ್ತರ ದೇಣಿಗೆಯಿಂದ ಕಟೀಲು ದೇವಿಗೆ ಚಿನ್ನದ ರಥ ಸಮರ್ಪಣೆಯಾಗಿದೆ. ನಮ್ಮ ಮನಸ್ಸು ಕೂಡ ಸ್ವರ್ಣದಂತೆ ಶ್ರೀಮಂತವಾಗಲಿ ಎಂದು ಕೇಂದ್ರ […]