ವೃಕ್ಷ ಬಿಸಿನೆಸ್ ಸೊಲ್ಯೂಷನ್ ಆರೋಪಿಗಳಿಗೆ ಜಾಮೀನು ಮಂಜೂರು; ತುರವೇ ಸದಸ್ಯರಿಂದ ಜಿಲ್ಲಾಧಿಕಾರಿ ಭೇಟಿ

12:29 AM, Thursday, March 16th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Trv Vrukshaಮಂಗಳೂರು : ಕೆ. ಎಸ್. ರಾವ್ ರೋಡ್ ಯುಟಿಲಿಟಿ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೃಕ್ಷ ಬಿಸಿನೆಸ್ ಸೊಲ್ಯೂಷನ್ ಎಂಬ ಖಾಸಗಿ ಹಣಕಾಸು ಸಂಸ್ಥೆಯು 2014 ರಲ್ಲಿ ಸಾವಿರಾರು ಬಡಮಹಿಳೆಯರಿಗೆ ಅಂದಾಜು 10 ಕೋಟಿ ರೂಪಾಯಿ ವಂಚಿಸಿದ್ದು ತುಳುನಾಡು ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹೂಡಿಕೆದಾರರು ಧರಣಿ ಸತ್ಯಾಗ್ರಹ ಸೇರಿದಂತೆ ಸತತ ಹಲವಾರು ಹೋರಾಟಗಳನ್ನು ಹಮ್ಮಿಕೊಂಡ ಪರಿಣಾಮವಾಗಿ ಮಂಗಳೂರು ಉತ್ತರ ಪೋಲೀಸ್ ಠಾಣಾಧಿಕಾರಿಗಳು ಕಂಪನಿಯ ಮಾಲಕರುಗಳಾದ ಜೀವರಾಜ ಪುರಾಣಿಕ್, ರೋಶನ್ ಪಿಂಟೋ ಮತ್ತು ವೇಣುಗೋಪಾಲ್ ರಾವ್‌ರನ್ನು ಬಂಧಿಸಿದರು. ತದನಂತರ ಹೂಡಿಕೆದಾರರ/ ತುಳುನಾಡ ರಕ್ಷಣಾ ವೇದಿಕೆಯ ಸತತ ಮನವಿಗೆ ಸ್ಪಂದಿಸಿದ ಕರ್ನಾಟಕ ಸರಕಾರವು ಈ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು ಆರೋಪಿಗಳಿಗೆ ಜಾಮೀನು ನಿರಾಕರಿಸಲ್ವಟ್ಟಿದ್ದು, ಸಿಐಡಿ ತನಿಖಾಧಿಕಾರಿಗಳು 2016 ಅಕ್ಟೋಬರ್ ತಿಂಗಳ ತನಕ ತನಿಖಾ ವರದಿಯನ್ನು ಸಲ್ಲಿಸದ ಕಾರಣ ಆರೋಪಿಗಳಿಗೆ ಜಾಮೀನು ಮಂಜೂರಾಗಿರುತ್ತದೆ.

ಹಣ ಕಳಕೊಂಡ ಬಡ ಸಾರ್ವಜನಿಕರಿಗೆ ವಂಚನೆಯಾಗಿದ್ದು ಈ ತನಕ ಪರಿಹಾರ ದೊರಕಿಲ್ಲ. ಆಗಿನ ಜಿಲ್ಲಾಧಿಕಾರಿ/ ಜಿಲ್ಲಾ ದಂಡಾಧಿಕಾರಿಯಾಗಿದ್ದ ಮಾನ್ಯ ಶ್ರೀ ಇಬ್ರಾಹಿಂರವರು ಆ ಸಂಧರ್ಭದಲ್ಲಿ ಅಧಿಕಾರಿಗಳು ಹೂಡಿಕೆದಾರರಿಗೆ ಹಣ ಸಂದಾಯ ವಾಗುವವರೆಗೆ ಆರೋಪಿಗಳಿಗೆ ಜಾಮೀನು ಸಿಗದಂತೆ ನೋಡಿಕೊಳ್ಳಲು ಮುತುವರ್ಜಿ ವಹಿಸಿದರು. ಹಾಗೂ ಆರೋಪಿಗಳ ಸ್ಥಿರ ಚರ ಸೊತ್ತುಗಳ ಪತ್ತೆ ಹಚ್ಚಿ ಜಪ್ತಿ ಮಾಡಲು ಸೂಚಿಸಿದರು. ಆದರೆ ತನಿಖಾಧಿಕಾರಿಗಳು ಈ ಬಗ್ಗೆ ಯಾವುದೇ ಹೆಚ್ವಿನ ಮಾಹಿತಿಯನ್ನು ಸಾರ್ವಜನಿಕರಿಗೆ/ ತುಳುನಾಡ ರಕ್ಷಣಾ ವೇದಿಕೆಗೆ ನೀಡಿರುವುದಿಲ್ಲ. ದೂರವಾಣಿ ಸಂಪರ್ಕಕ್ಕೂ ಪ್ರತಿಕ್ರಿಯಿಸಿರವುದಿಲ್ಲ. ಆದ್ದರಿಂದ ಅಮಾಯಕ ಹೂಡಿಕೆದಾರರಿಗೆ ಅತೀ ಶೀಘ್ರದಲ್ಲಿ ನ್ಯಾಯ ದೊರಕಿಸಿಕೊಡಬೇಕೆಂದು ತುಳುನಾಡು ರಕ್ಷಣಾ ವೇದಿಕೆಯ ಸದಸ್ಯರು ಮತ್ತು ವ್ರಕ್ಷ ಸೊಲ್ಯೂಷನ್ ನಿಂದ ವಂಚನೆಗೊಳಗಾದವರು ಜಿಲ್ಲಾಧಿಕಾರಿಗಳಿಗೆ ವನವಿ ಸಲ್ಲಿಸಿದರು.

ಈ ಸಂದರ್ಭ ಕೇಂದ್ರೀಯ ತುರಾವೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಮತ್ತು ಹರಿಕ್ರಷ್ಣ ಪುನರೂರು, ಅಬ್ದುಲ್ ರಶೀದ್ ಜೆಪ್ಪು, ಜೆ. ಇಬ್ರಾಹಿಂ, ಸಿರಾಜ್ ಅಡ್ಕರೆ, ಇಸ್ಮಾಯಿಲ್ ಶಾಫಿ, ಆನಂದ ಅಮೀನ್ ಅಡ್ಯಾರ್, ಹರೀಶ್ ಶೆಟ್ಟಿ ಶಕ್ತಿನಗರ, ತಾರನಾಥ ಜತ್ತನ್ನ, ನೇಮು ಕೊಟ್ಟಾರಿ, , ರಾಮ ಎಸ್. ಬಂಗೇರ, ಸುಜಾತ, ಶ್ರೀಕಾಂತ್ ಸಾಲಿಯಾನ್, ಕಾರ್ಮಿಕ ಘಟಕ ಮುಖಂಡರು, ಮಹಿಳಾ ಘಟಕ ಮುಖಂಡರುಗಳು ಮತ್ತು ತುಳುನಾಡು ರಕ್ಷಣಾ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು.

Trv Vruksha

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English