ಸಿಪಿಐ(ಎಂ) ಹಿರಿಯ ಸದಸ್ಯ ಶೀನ ಬಂಗೇರ ನಿಧನ

2:18 PM, Thursday, November 2nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

sheena bangeraಮಂಗಳೂರು: ಬಜಾಲ್ ಪ್ರದೇಶದ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯರಾದ ಶೀನ ಬಂಗೇರ (65 ವರ್ಷ) ಅವರು ಅನಾರೋಗ್ಯದಿಂದಾಗಿ ಬಜಾಲ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದು, ಸಿಪಿಐ(ಎಂ) ಮಂಗಳೂರು ದಕ್ಷಿಣ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

ಎಳೆಯ ಪ್ರಾಯದಲ್ಲೇ ಕಮ್ಯೂನಿಸ್ಟ್ ಚಳುವಳಿಗೆ ಆಕರ್ಷಿತರಾಗಿ, ಅಂದು ಬಜಾಲ್ ಪ್ರದೇಶದಲ್ಲಿ ಸಕ್ರೀಯವಾಗಿದ್ದ ರೈತ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ್ದ ಶೀನ ಬಂಗೇರರವರು, ಎಡಪಂಥೀಯ ವಿಚಾರಧಾರೆಯ ಶಿಸ್ತಿನ ಸಿಪಾಯಿಯಾಗಿದ್ದರು. ತುರ್ತುಪರಿಸ್ಥಿತಿಯ ಕಾಲಾವಧಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲೆ ನಿಷೇಧವಿದ್ದಾಗಲೂ ಬಜಾಲ್‌ನಲ್ಲಿ ದುಡಿಯುವ ವರ್ಗದ ಚಳುವಳಿಗೆ ಅಪಾರ ಕೊಡುಗೆ ನೀಡಿದ್ದರು. ಆ ಸಂದರ್ಭದಲ್ಲಿ ಯುವಕರನ್ನು ದೈಹಿಕವಾಗಿ ಬಲಾಢ್ಯಗೊಳಿಸಲು ಶ್ರಮಿಸುತ್ತಿದ್ದ ಜನತಾ ವ್ಯಾಯಾಮ ಶಾಲೆಯ ಮೇಲೆ ದಾಳಿ ನಡೆದಾಗಲೂ ಅದರ ರಕ್ಷಣೆಗಾಗಿ ಅವಿತರವಾಗಿ ದುಡಿದವರಲ್ಲಿ ಶೀನ ಬಂಗೇರ ಒಬ್ಬರು.

ವ್ಯಾಯಾಮ ಶಾಲೆಗೆ ಕಟ್ಟಡದ ಸಮಸ್ಯೆ ತಲೆದೋರಿದಾಗ ತಮ್ಮ ಮನೆಯ ಅರ್ಧ ಭಾಗವನ್ನೇ ವ್ಯಾಯಾಮ ಶಾಲೆಯ ಕಚೇರಿಗಾಗಿ ಕಳೆದ 40  ವರ್ಷಗಳಿಂದಲೂ ಉಚಿತವಾಗಿ ನೀಡಿರುವ ಶೀನ ಬಂಗೇರರವರು ನಿಜಕ್ಕೂ ತ್ಯಾಗ ಜೀವಿ. ಇದು ಅವರು ಯುವಕರ ಮೇಲೆ ಹಾಗೂ ಪಕ್ಷದ ಮೇಲೆ ಇಟ್ಟಿರುವ ಅಗಾಧ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಅವರ ನಿಧನವು ಬಜಾಲ್ ಪ್ರದೇಶದ ಕಾರ್ಮಿಕ ವರ್ಗದ ಚಳುವಳಿಗೆ ಭಾರೀ ನಷ್ಟವುಂಟಾಗಿದೆ ಎಂದು ಸಿಪಿಐ(ಎಂ) ಮಂಗಳೂರು ದಕ್ಷಿಣ ಸಮಿತಿಯು ತಮ್ಮ ಭಾವಪೂರ್ಣ ಶ್ರದ್ಧಾಂಜಲಿಯನ್ನು ತಿಳಿಸಿದೆ.

ಮೃತರು ಪತ್ನಿ, ಒಂದು ಗಂಡು, ಎರಡು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English