ಸಿಪಿಐ(ಎಂ) ಹಿರಿಯ ಸದಸ್ಯ ಶೀನ ಬಂಗೇರ ನಿಧನ

Thursday, November 2nd, 2017
sheena bangera

ಮಂಗಳೂರು: ಬಜಾಲ್ ಪ್ರದೇಶದ ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯರಾದ ಶೀನ ಬಂಗೇರ (65 ವರ್ಷ) ಅವರು ಅನಾರೋಗ್ಯದಿಂದಾಗಿ ಬಜಾಲ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದ್ದು, ಸಿಪಿಐ(ಎಂ) ಮಂಗಳೂರು ದಕ್ಷಿಣ ಸಮಿತಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ. ಎಳೆಯ ಪ್ರಾಯದಲ್ಲೇ ಕಮ್ಯೂನಿಸ್ಟ್ ಚಳುವಳಿಗೆ ಆಕರ್ಷಿತರಾಗಿ, ಅಂದು ಬಜಾಲ್ ಪ್ರದೇಶದಲ್ಲಿ ಸಕ್ರೀಯವಾಗಿದ್ದ ರೈತ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ್ದ ಶೀನ ಬಂಗೇರರವರು, ಎಡಪಂಥೀಯ ವಿಚಾರಧಾರೆಯ ಶಿಸ್ತಿನ ಸಿಪಾಯಿಯಾಗಿದ್ದರು. ತುರ್ತುಪರಿಸ್ಥಿತಿಯ ಕಾಲಾವಧಿಯಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲೆ ನಿಷೇಧವಿದ್ದಾಗಲೂ ಬಜಾಲ್‌ನಲ್ಲಿ ದುಡಿಯುವ ವರ್ಗದ ಚಳುವಳಿಗೆ ಅಪಾರ […]

ಸಿಪಿಐ(ಎಂ) ಹಿರಿಯ ಸದಸ್ಯರಾದ ರಾಜೆಂದ್ರ ಅತ್ತಾವರ ನಿಧನ

Thursday, November 2nd, 2017
rajendra attavara

ಮಂಗಳೂರು :ಸಿಪಿಐ(ಎಂ) ಪಕ್ಷದ ಹಿರಿಯ ಸದಸ್ಯರಾದ ರಾಜೇಂದ್ರ ಅತಾವರ (63)ರವರು ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದು, ಅವರ ನಿಧನಕ್ಕೆ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿಯು ಅತೀವ ಸಂತಾಪ ವ್ಯಕ್ತಪಡಿಸಿದೆ. ಎಳೆಯ ಪ್ರಾಯದಲ್ಲೇ ಕಮ್ಯೂನಿಸ್ಟ್ ಚಳುವಳಿಯಿಂದ ಆಕರ್ಷಿತಗೊಂಡು, ಅಂದಿನ ಸಿಪಿಐ(ಎಂ) ಜಿಲ್ಲಾ ಮುಖಂಡರಾದ ಬಿ. ನಾರಾಯಣರವರ ಮೊದಲ ಸುಪುತ್ರರಾದ ರಾಜೇಂದ್ರರವರು ರೈತ ಕಾರ್ಮಿಕರ ಹಲವಾರು ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಬಡವರ, ಶೋಷಿತರ ಪರವಾಗಿ ಅತೀವ ಕಾಳಜಿ ಹೊಂದಿದ್ದ ರಾಜೇಂದ್ರರವರು ತನ್ನ ಕೊನೆಯ ಉಸಿರು ಇರುವವರೆಗೂ […]

ಸಿಪಿಐ ಜಿಲ್ಲಾ ಸಮ್ಮೇಳನದ ಲೊಗೋ ಬಿಡುಗಡೆ

Wednesday, November 1st, 2017
CPI

ಮಂಗಳೂರು: ಭಾರತ ಕಮ್ಯನಿಸ್ಟ್ ಪಕ್ಷ (ಸಿಪಿಐ) ಇದರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ 23 ನೇ ಸಮ್ಮೇಳನವು 2017 ಡಿಸೆಂಬರ್24 ರಿಂದ 26 ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ. ಸಮ್ಮೇಳನದ ಲೊಗೋವನ್ನು ಇಂದು ಪಕ್ಷದ ಕಛೇರಿಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಬಿಡುಗಡೆಗೊಳಿಸಿದರು. ಕರಾವಳಿ ಜಿಲ್ಲೆಗಳು ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಇಲ್ಲಿ ಜಾತಿ ಬೇಧವಿಲ್ಲದೆ ಜನರು ಜೀವನ ನಡೆಸುತ್ತಿದ್ದಾರೆ. ವ್ಯಾಪಾರ ವಹಿವಾಟಿನಲ್ಲಿಯೂ ಒಬ್ಬರಿಗೊಬ್ಬರು ಸಹಕರಿಸಿ ವ್ಯವಹರಿಸುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಸ್ತಿಯನ್ ಮತ್ತಿತರ ಧರ್ಮ ಬಾಂಧವರು ಶಾಂತಿ ಸಾಮರಸ್ಯವನ್ನು ಬಯಸುವ ಶಾಂತಿಪ್ರಿಯರಾಗಿದ್ದಾರೆ. ಆದರೆ ಕೆಲವೊಂದು […]

ಕಮ್ಯುನಿಸ್ಟರ ಮೇಲೆ ಧಾಳಿ-ಸಂಘ ಪರಿವಾರದ ಹತಾಶೆಯ ಸಂಕೇತ :ಸುನೀಲ್‌ಕುಮಾರ್ ಬಜಾಲ್

Tuesday, October 17th, 2017
jalligudde

ಮಂಗಳೂರು: ಕಳೆದ 3 ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರಮೋದಿ ನೇತೃತ್ವದ ಸರಕಾರವು ಹೆಜ್ಜೆ ಹೆಜ್ಜೆಗೂ ಜನ ವಿರೋಧಿಯಾಗಿ ವರ್ತಿಸುತ್ತಿದೆ. ಸರಕಾರದ ತಪ್ಪುಗಳನ್ನು ಎಳೆಎಳೆಯಾಗಿ ಬಿಡಿಸಿ ಜನರ ಮಧ್ಯೆ ಜಾಗೃತಿ ಮೂಡಿಸುವ ಕೆಲಸವನ್ನು ಸಿಪಿಐ(ಎಂ) ದೇಶಾದ್ಯಂತ ಜನಾಂದೋಲನದ ಮೂಲಕ ನಡೆಸುತ್ತಿದೆ. ಇದರಿಂದ ಕಂಗೆಟ್ಟ ಬಿಜೆಪಿ ಸಂಘ ಪರಿವಾರವು ದೇಶಾದ್ಯಂತ ಕಮ್ಯುನಿಸ್ಟರ ಮೇಲೆ ಧಾಳಿ, ಕೊಲೆ, ಅಪಪ್ರಚಾರಗಳು, ಕಚೇರಿಗಳ ಧ್ವಂಸ ಮುಂತಾದ ದುಷ್ಕೃತ್ಯಗಳನ್ನು ಮಾಡುತ್ತಿದ್ದು, ಇದು ಸಂಘ ಪರಿವಾರದ ಹತಾಶೆಯ ಸಂಕೇತವಾಗಿದೆ ಎಂದು ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ […]