ಮಂಗಳೂರು: ‘ನಿಮ್ಮದು ಅವಾಚ್ಯ ಭಾಷೆ, ನನ್ನದು ಮನುಷ್ಯ ಭಾಷೆ’ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದರು. ಮೋದಿ ಆಯ್ತು ಈಗ ಯೋಗಿಗೆ ಗುರಿ ಇಟ್ಟ ಪ್ರಕಾಶ್ ರೈ ಮಂಗಳೂರಿನ ಲೇಡಿಹಿಲ್ ಮೈದಾನದಲ್ಲಿ ಕರಾವಳಿ ಉತ್ಸವಕ್ಕೆ ದೀಪ ಬೆಳಗಿಸಿ, ತೆಂಗಿನ ಮರದ ಸಿರಿಯನ್ನು ಬಿಡಿಸಿ ಪ್ರಕಾಶ್ ರೈ ಚಾಲನೆ ನೀಡಿ ಮಾತನಾಡಿದರು. ಪ್ರಕಾಶ್ ರೈ ಲೀಗಲ್ ನೋಟಿಸ್ ಗೆ ಉತ್ತರ ಕೊಟ್ಟ ಸಿಂಹ “ಕರಾವಳಿ ಅಂದರೆನೇ ಉತ್ಸವ. ಕರಾವಳಿ ಉತ್ಸವವೆಂದು ವಿಶೇಷವಾಗಿ ಹೇಳಬೇಕಿಲ್ಲ. ಕರಾವಳಿಯ ಜನರು ಸಮುದ್ರದಂತೆ.
ಕೊಟ್ಟಷ್ಟು ಇನ್ನಷ್ಟು ಕೊಡುವವರು. ಪ್ರಕೃತಿಯ ಜತೆ ಹೇಗೆ ಬಾಳಬೇಕೆಂದು ತೋರಿಸುವ ನಾಡು ಕರಾವಳಿ. ದೈವತ್ವದೊಂದಿಗೆ ಪರಿಸರವನ್ನು ಉಳಿಸುವ ಆಚಾರವನ್ನು ಕರಾವಳಿಯ ಹಿರಿಯರು ತೋರಿಸಿಕೊಟ್ಟಿದ್ದಾರೆ,” ಎಂದು ಪ್ರಕಾಶ್ ರೈ ಕರಾವಳಿಯ ಜನರನ್ನು ಹೊಗಳಿದರು. ಪ್ರಕಾಶ್ ರಾಜ್ ಆಗಿ ಎತ್ತರಕ್ಕೇರಿದ್ದೇನೆ “ಕೆಲವರಿಗೆ ನಾನು ಉತ್ತರ ಕೊಡಬೇಕಿದೆ,” ಎಂದು ಹೇಳಿದ ಪ್ರಕಾಶ್ ರೈ, “ನಾನು ನನ್ನ ಮಣ್ಣಿನಲ್ಲಿ, ನನ್ನ ಕರಾವಳಿಯಲ್ಲಿ ನಿಂತಿದ್ದೇನೆ.
ನನ್ನ ಹೆಸರು ಪ್ರಕಾಶ್ ರೈ; ಸಿನಿಮಾದಲ್ಲಿ ಪ್ರಕಾಶ್ ರಾಜ್. ಮಲಯಾಳಂ, ತಮಿಳು, ತೆಲುಗಿನಲ್ಲಿ ಪ್ರಕಾಶ್ ರಾಜ್ ಆಗಿ ಎತ್ತರಕ್ಕೇರಿದ್ದೇನೆ,” ಎಂದರು. ನಿಮಗೇನು ಸಮಸ್ಯೆ? “ನನ್ನ ಬಗ್ಗೆ ಪ್ರತಾಪ್ ಸಿಂಹ ಪ್ರಶ್ನೆ ಮಾಡುತ್ತಾರೆ. ಪ್ರಕಾಶ್ ರೈ ಇದೇ ಕನ್ನಡನಾಡಿನ ಮಗ. ಇದೇ ಜಿಲ್ಲೆಯ ಸಾಲೆತ್ತೂರಿನ ಮಂಜುನಾಥ ರೈ ಎಂಬವರ ಮಗ. ಕರಾವಳಿಯ ಕಡಲಿನ ಮಗನೆಂಬ ಹೆಮ್ಮೆಯಿದೆ. ನಾನು ಪ್ರಕಾಶ್ ರಾಜ್ ಬಳಸಿದ್ರೆ ನಿಮಗೇನು ಸಮಸ್ಯೆ,” ಎಂದು ಪ್ರಶ್ನಿಸಿದ್ದಾರೆ. ನಿಮ್ಮದು ಅವಾಚ್ಯ ಭಾಷೆ “ಇವರು ರಜನಿಕಾಂತ್, ರಾಜ್ ಕುಮಾರ್, ವಿಷ್ಣುವರ್ಧನ್ ಮೂಲ ಹೆಸರನ್ನು ಪ್ರಶ್ನಿಸುತ್ತೀರಾ? ನನಗಿಂತ ನೀವು ಕನ್ನಡಿಗರಲ್ಲ.
ನಿಮಗೆ ಭಾಷೆ ಗೊತ್ತಿಲ್ಲ; ನಿಮ್ಮದು ಅವಾಚ್ಯ ಭಾಷೆ. ನನ್ನದು ಮನುಷ್ಯ ಭಾಷೆ,” ಎಂದು ಹರಿಹಾಯ್ದಿದ್ದಾರೆ. ನೀವು ಅನ್ನ ತಿನ್ನುತ್ತೀರಾ? “ಪ್ರತಾಪ್ ಸಿಂಹ ಹೆಸರಲ್ಲಿ ಸಿಂಹದ ಹೆಸರಿದೆ. ಹಾಗಾದ್ರೆ ನೀವು ಪ್ರಾಣಿಯೇ? ನೀವು ಅನ್ನ ತಿನ್ನುತ್ತೀರಾ, ಬೇಟೆಯಾಡುತ್ತೀರಾ?,” ಎಂದು ಸಂಸದ ಪ್ರತಾಪ್ ಸಿಂಹಗೆ ಪ್ರಕಾಶ್ ರೈ ಟಾಂಗ್ ನೀಡಿದ್ದಾರೆ.
Click this button or press Ctrl+G to toggle between Kannada and English