ಕರಾವಳಿಯಲ್ಲಿ ರಾಜಕೀಯಕ್ಕಾಗಿ ಸೌಹಾರ್ದ ಕದಡಲಾಗುತ್ತಿದೆ: ಕುಮಾರಸ್ವಾಮಿ

11:06 AM, Friday, December 29th, 2017
Share
1 Star2 Stars3 Stars4 Stars5 Stars
(No Ratings Yet)
Loading...

kumaraswamyಮಂಗಳೂರು: ಕರಾವಳಿಯಲ್ಲಿ ರಾಜಕೀಯಕ್ಕಾಗಿ ಸೌಹಾರ್ದ ಕದಡಲಾಗುತ್ತದೆ. ವ್ಯಾಪಕ ಅಭಿವೃದ್ಧಿಗೆ ಇಲ್ಲಿ ಉತ್ತಮ ಅವಕಾಶ ಇದೆ. ಆದರೆ, ಭಯದ ವಾತಾವರಣ ನಿರ್ಮಾಣ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜನವರಿ 9ರಂದು ಮಂಗಳೂರಿನಲ್ಲಿ ಕಡಲ ತಡಿಗೆ ಜೆಡಿಎಸ್‌ನ ಸೌಹಾರ್ದ ನಡಿಗೆ ಎನ್ನುವ ಸಮಾವೇಶ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಹರು ಮೈದಾನದಲ್ಲಿ ಬೃಹತ್ ಐತಿಹಾಸಿಕ ಸಭೆ ನಡೆಯಲಿದೆ. ಜೆ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ಒಮ್ಮೆ ಸಭೆ ನಡೆದಿತ್ತು ಎಂದು ಹೇಳಿದರು.

ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ನನಗೆ ಅನುಮಾನ ಮೂಡುತ್ತದೆ. ಸರಣಿ ಹತ್ಯೆಗಳು ನಡೆದಾಗ ನಿಷೇಧಾಜ್ಞೆ ಜಾರಿ ಮಾಡುತ್ತಾರೆ. ಇದರಿಂದ ಬಡ ಕುಟುಂಬಗಳ ಪರಿಸ್ಥಿತಿ ಸಂಕಷ್ಟದಾಯಕವಾಗುತ್ತದೆ. ಹತ್ಯೆಗಳಿಗೆ ರಾಜಕೀಯ ಬಣ್ಣವನ್ನು ಕೊಡಲಾಗುತ್ತದೆ. ಐಜಿ ಕಾರನ್ನು ಸುಡುತ್ತಾರೆ ಎಂದರೆ ಜನರಿಗೆ ಇಲ್ಲಿನ ಪೊಲೀಸ್ ಬಗ್ಗೆ ಎಷ್ಟು ಭಯ ಇದೆ ಎಂದು ಗೊತ್ತಾಗುತ್ತದೆ ಎಂದು ಲೇವಡಿ ಮಾಡಿದರು.

ಸರ್ಕಾರ ಗಂಭೀರ ವೈಫಲ್ಯ ಅನುಭವಿಸುತ್ತಿದೆ. ಸಿಎಂಗೆ ಕಾನೂನು ಸುವ್ಯವಸ್ಥೆಯ ಅಗತ್ಯವಿಲ್ಲ. ಅಭಿವೃದ್ಧಿ ಹೆಸರಲ್ಲಿ ಪ್ರಚಾರ ಆರಂಭಿಸಿದ್ದಾರೆ. 8 ವರ್ಷಗಳ ಹಿಂದಿನ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ಮಾಡುತ್ತಾರೆ. ಎತ್ತಿನಹೊಳೆ ಹೆಸರಲ್ಲಿ ಹಣ ಲೂಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಆರೋಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English