ಮಂಗಳೂರು : ಈ ಬಾರಿಯ ಚುನಾವಣೆ ಸಚಿವ ರಮಾನಾಥ ರೈ ಅವರ ಕೊನೆಯ ಬಯಲಾಟ. ರಮಾನಾಥ ರೈ ಮಹಿಷಾಸುರನಾದರೆ, ಜನರು ದೇವಿಯ ರೂಪದಲ್ಲಿ ಅವರನ್ನು ಮುಗಿಸಲಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ವಾಗ್ದಾಳಿ ನಡೆಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಿಲ್ಲವ ಸಮುದಾಯದವರಿಗೆ ಟಿಕೆಟ್ ನೀಡಲಿ ಎಂದು ಸಚಿವ ರಮಾನಾಥ ರೈ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಬಿಲ್ಲವರ ಬಗ್ಗೆ ಮಾತನಾಡುವ ನೈತಿಕತೆ ರಮಾನಾಥ ರೈಗಿಲ್ಲ ಎಂದು ಕಿಡಿ ಕಾರಿದರು.
ರಮಾನಾಥ್ ರೈ ಧರ್ಮಸ್ಥಳಕ್ಕೆ ಆಣೆ-ಪ್ರಮಾಣಕ್ಕೆ ಬರಲಿ: ಹರಿಕೃಷ್ಣ ಬಂಟ್ವಾಳ ಸವಾಲ್ ರಮಾನಾಥ ರೈ ಅವರಿಗೆ ತಾಕತ್ತಿದ್ದರೆ ಬಂಟ್ವಾಳದಲ್ಲಿ ಬಿಲ್ಲವರಿಗೆ ಸೀಟು ಕೊಡಿಸಲಿ ಎಂದು ಸವಾಲು ಹಾಕಿದರು. ಮುಸ್ಲಿಮರ ಕೃಪೆಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಈ ವರೆಗೆ ಗೆದ್ದಿದ್ದೇನೆ ಎಂದಿದ್ದ ರಮಾನಾಥ ರೈ ಈ ಬಾರಿ ಮುಸ್ಲಿಂ ಸಮುದಾಯದ ಒಬ್ಬರಿಗೆ ಬಂಟ್ವಾಳ ದಿಂದ ಸ್ಪರ್ಧಿಸಲು ಸೀಟು ಬಿಟ್ಟು ಕೊಡಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರಿಗೆ ಕಣ್ಣೀರು ಹಾಕಿಸಿದ್ದು ಸಚಿವ ರಮಾನಾಥ ರೈ ಎಂದು ಆರೋಪಿಸಿದ ಅವರು, ಈ ವರೆಗೆ ಲೋಕಸಭಾ ಚುನಾವಣೆಯಲ್ಲಿ ಪೂಜಾರಿಯನ್ನು ಸೋಲಿಸಿದ್ದು ಕೂಡ ರಮಾನಾಥ ರೈ ಎಂದು ಅವರು ಆರೋಪ ಮಾಡಿದರು.
Click this button or press Ctrl+G to toggle between Kannada and English