ಮಂಗಳೂರು: ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಚನಾ (18) ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಕರಣ ತಿರುವು ಪಡೆದುಕೊಂಡಿದೆ.
ಡೆತ್ ನೋಟ್‌ನಲ್ಲಿರುವ ಅಕ್ಷರವಾಗಲೀ, ಸಹಿಯಾಗಲೀ ತಮ್ಮ ಮಗಳದ್ದಲ್ಲ ಎಂದು ರಚನಾ ಹೆತ್ತವರು ಆರೋಪಿಸಿದ್ದಾರೆ. ಇದರಿಂದ ಪ್ರಕರಣದ ಸುತ್ತು ಅನುಮಾನ ಮೂಡಿದೆ.
ಐದನೇ ಮಹಡಿಯಿಂದ ಬಿದ್ದಿದ್ದೇ ಆಗಿದ್ದರೆ ರಚನಾ ದೇಹದಲ್ಲಿ ಗಂಭೀರ ಗಾಯಗಳಾಗಬೇಕಿತ್ತು. ಆದರೆ ಅಂತಹ ಯಾವುದೇ ಗುರುತರ ಗಾಯಗಳು ಆಕೆಯ ಮೈಮೇಲೆ ಆಗಿಲ್ಲ. ಅದಲ್ಲದೆ ಆಕೆ ಸರಳುಗಳಿಲ್ಲದ ಕಿಟಕಿಯಿಂದ ಹಾರಿದ್ದಾಳೆ ಎಂದು ಹೇಳುತ್ತಾರೆ. ಆದರೆ ಕಾಲೇಜಿನಲ್ಲಿ ಸರಳುಗಳಿಲ್ಲದ ಕಿಟಕಿ ಅಳವಡಿಸಿರುವುದನ್ನೂ ಪ್ರಶ್ನಿಸಿ ರಚನಾ ಪೋಷಕರು ಮೂಡುಬಿದ್ರೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮೂಲತಃ ಚಿತ್ರದುರ್ಗದವಳಾದ ರಚನಾ ಸಾವಿನ ಸುದ್ದಿ ಬಂದ ಕೂಡಲೇ ಆಕೆಯ ಹೆತ್ತವರು ಮೂಡುಬಿದ್ರೆಗೆ ಆಗಮಿಸಿದ್ದರು.
Click this button or press Ctrl+G to toggle between Kannada and English