ಝೈಬುನ್ನಿಸಾ-ರಚನಾ ಸಾವಿನ ಪ್ರಕರಣ ಸಿಐಡಿಗೆ ವಹಿಸಲು ಆಗ್ರಹ: ಎಸ್.ಐ.ಓ. ಧರಣಿ

Tuesday, January 30th, 2018
islamic

ಮಂಗಳೂರು: ವಿದ್ಯಾರ್ಥಿನಿಯರಾದ ಝೈಬುನ್ನಿಸಾ ಹಾಗೂ ರಚನಾ ಸಾವಿನ ಪ್ರಕರಣವನ್ನು ಸಿಐಡಿಗೆ ನೀಡುವಂತೆ ಆಗ್ರಹಿಸಿ ಇಂದು ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್(ಎಸ್.ಐ.ಓ.) ಇಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿತು ಧರಣಿಯಲ್ಲಿ ಎಸ್.ಐ.ಓ. ಜಿಲ್ಲಾಧ್ಯಕ್ಷ ತಲ್ಹ ಇಸ್ಮಾಯೀಲ್, ಪತ್ರಕರ್ತ ಎ.ಕೆ.ಕುಕ್ಕಿಲ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಸದಸ್ಯೆ ರೈಯಾನ ಪಕ್ಕಲಡ್ಕ ಮೊದಲಾದವರು ಉಪಸ್ಥಿತರಿದ್ದರು.

ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌!

Saturday, January 27th, 2018
alwas

ಮಂಗಳೂರು: ಮೂಡುಬಿದ್ರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರಚನಾ (18) ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಪ್ರಕರಣ ತಿರುವು ಪಡೆದುಕೊಂಡಿದೆ. ಡೆತ್ ನೋಟ್‌ನಲ್ಲಿರುವ ಅಕ್ಷರವಾಗಲೀ, ಸಹಿಯಾಗಲೀ ತಮ್ಮ ಮಗಳದ್ದಲ್ಲ ಎಂದು ರಚನಾ ಹೆತ್ತವರು ಆರೋಪಿಸಿದ್ದಾರೆ. ಇದರಿಂದ ಪ್ರಕರಣದ ಸುತ್ತು ಅನುಮಾನ ಮೂಡಿದೆ. ಐದನೇ ಮಹಡಿಯಿಂದ ಬಿದ್ದಿದ್ದೇ ಆಗಿದ್ದರೆ ರಚನಾ ದೇಹದಲ್ಲಿ ಗಂಭೀರ ಗಾಯಗಳಾಗಬೇಕಿತ್ತು. ಆದರೆ ಅಂತಹ ಯಾವುದೇ ಗುರುತರ ಗಾಯಗಳು ಆಕೆಯ ಮೈಮೇಲೆ ಆಗಿಲ್ಲ. ಅದಲ್ಲದೆ ಆಕೆ ಸರಳುಗಳಿಲ್ಲದ ಕಿಟಕಿಯಿಂದ ಹಾರಿದ್ದಾಳೆ ಎಂದು ಹೇಳುತ್ತಾರೆ. […]

ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ

Friday, January 26th, 2018
Alvas Student

ಮಂಗಳೂರು: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಾವಣಗೆರೆ ಮೂಲದ ರಚನಾ ಎಂ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿ ರಚನಾ ಸಾವಿಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ರಚನಾ, ಡೆತ್‌ನೋಟ್‌ನಲ್ಲಿ ಅನಾರೋಗ್ಯದ ಬಗ್ಗೆ ಉಲ್ಲೇಖಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.