ಕಾರಿನಲ್ಲಿ ಮಲಗಿದ್ದವನನ್ನು ಎಬ್ಬಿಸಲು ಆ್ಯಂಬುಲೆನ್ಸ್‌ ಬರಬೇಕಾಯಿತು!

11:26 AM, Wednesday, January 31st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

omni-carಮಂಗಳೂರು: ಕಾರಿನಲ್ಲಿ ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಲು ಆ್ಯಂಬುಲೆನ್ಸ್‌ ಬರಬೇಕಾಯಿತು!ಇಂಥದ್ದೊಂದು ಕುತೂಹಲಕಾರಿ ಘಟನೆಗೆ ಹಂಪನಕಟ್ಟೆ ಪರಿಸರ ಸಾಕ್ಷಿಯಾಯಿತು.

ಅಪರಿಚಿತನೊಬ್ಬ ತನ್ನ ಆಮ್ನಿ ಕಾರಿನಲ್ಲಿ ನಿದ್ರಿಸಿದ್ದರು. ಸಾರ್ವಜನಿಕರು ಅವರನ್ನು ಎಬ್ಬಿಸಲು ವಿಫ‌ಲರಾದಾಗ, ಕೊನೆಗೆ ಏನಾ ದರೂ ಅನಾಹುತ ಸಂಭವಿಸಿರಬಹುದೇ ಎಂಬ ಆತಂಕದಿಂದ ಆ್ಯಂಬುಲೆನ್ಸ್‌ ಕರೆಸಿದರು.

ಹಂಪನಕಟ್ಟೆಯ ವಿ.ವಿ. ಕಾಲೇಜಿನ ಮುಂಭಾಗದಲ್ಲಿ ಸೋಮವಾರ ಸಂಜೆ 3 ಗಂಟೆಯ ಸುಮಾರಿಗೆ ಕೆಎ 13 ನೋಂದಣಿಯ ಮಾರುತಿ ಆಮ್ನಿ ಕಾರಿನ ಡ್ರೈವರ್‌ ಸೀಟಲ್ಲಿ ವ್ಯಕ್ತಿಯೊಬ್ಬ ಮಲಗಿದ್ದ. ಸ್ಟೇರಿಂಗ್‌ ಹಿಡಿದು ಮಲಗಿದ್ದ ಆತನ ಬಾಯಿಂದ ನೊರೆ ಬರುತ್ತಿತ್ತು. ಕಾರಿನ ಮುಂಬದಿಯ ಗಾಜು ತೆರೆದುಕೊಂಡಿತ್ತು ಹಾಗೂ ಸೀಟಿನಲ್ಲಿ ಹಾಗೂ ಮುಂದಿನ ಡ್ಯಾಷ್‌ನಲ್ಲಿ ಎರಡು ಮೊಬೈಲ್‌ಗ‌ಳು ಇದ್ದವು.

ಸ್ಥಳೀಯರು ಆತಂಕಗೊಂಡು ವ್ಯಕ್ತಿ ಯನ್ನು ಎಬ್ಬಿಸಲು ಪ್ರಯತ್ನಿಸಿದರೂ ಆತ ಸ್ಪಂದಿಸದಿದ್ದಾಗ ಆತಂಕ ಹೆಚ್ಚಾಗುತ್ತದೆ. ಜತೆಗೆ ಆಮ್ನಿಯಲ್ಲಿ ಗುಕೋಸ್‌ನ ಖಾಲಿ ಬಾಟಲಿಯೂ ಕಂಡು ಬರುತ್ತದೆ. ಈತ ಅನಾರೋಗ್ಯದಿಂದಿದ್ದಾನೆ ಮತ್ತು ಆಸ್ಪತ್ರೆಗೆ ಬಂದವನಿಗೆ ಏನೋ ಹೆಚ್ಚು ಕಡಿಮೆ ಆಗಿದೆ ಎಂದು ಭಾವಿಸಿ 108 ಆ್ಯಂಬುಲೆನ್ಸ್‌ಗೂ ಕರೆ ಮಾಡುತ್ತಾರೆ. ಸುಮಾರು ಒಂದು ಗಂಟೆ ಕಾದರೂ ಆ್ಯಂಬುಲೆನ್ಸ್‌ ಬರುವುದಿಲ್ಲ. ವಿಚಾರವನ್ನು ಜಿಲ್ಲಾ ಆರೋಗ್ಯಾಧಿಕಾರಿ ಗಮನಕ್ಕೆ ತಂದಾಗ ಅವರು ವೆನಾಕ್‌ಗೆ ತಿಳಿಸಲು ಹೇಳುತ್ತಾರೆ. ಆ ಹೊತ್ತಿಗೆ ಬಂದ ಖಾಸಗಿ ಆ್ಯಂಬುಲೆನ್ಸ್‌ನ ಚಾಲಕನು ಆತನನ್ನು ಎಬ್ಬಿಸಿದಾಗ ಎಲ್ಲರಿಗೂ ಆಶ್ಚರ್ಯ.

ತಾನು ಮನೆಯವರನ್ನು ಆಸ್ಪತ್ರೆಗೆ ಕರೆತಂ ದಿದ್ದು, ಪಾರ್ಕಿಂಗ್‌ ಮಾಡಿದಲ್ಲೇ ನಿದ್ದೆ ಬಂತು ಎಂದು ಹೇಳುತ್ತಾ ಆತ ಕಾರು ಸ್ಟಾರ್ಟ್‌ ಮಾಡಿ ಹೊರಟೇಬಿಟ್ಟ!

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English