ಭಾರತದಲ್ಲಿ ಧರ್ಮಾಧಾರಿತ ಆಡಳಿತ ನಡೆಯುತ್ತಿದೆ: ಮೋಹನ್‌ ಭಾಗವತ್‌

1:05 PM, Wednesday, March 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

mohan-bagvathಮಂಗಳೂರು: ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ವಿಚಾರ ಇಟ್ಟುಕೊಂಡು ರಾಷ್ಟ್ರಾಡಳಿತ ನಡೆಯುತ್ತಿದ್ದರೆ ನಮ್ಮ ದೇಶದಲ್ಲಿ ಧರ್ಮಾಧಾರಿತವಾಗಿ ಆಡಳಿತ ನಡೆಯುತ್ತಿದೆ. ಧರ್ಮ ಇಲ್ಲವಾದರೆ ಈ ದೇಶವೇ ಇಲ್ಲವಾಗುತ್ತದೆ. ಧರ್ಮ ಈ ದೇಶದ ಉಸಿರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.

ವಿಟ್ಲ ಸಮೀಪದ ಮೂರುಕಜೆ ಮೈತ್ರೇಯಿ ಗುರುಕುಲದಲ್ಲಿ ತೆಂಗಿನ ಸಿಂಗಾರ ಅರಳಿಸುವುದರೊಂದಿಗೆ ಅರ್ಧ ಮಂಡಲೋತ್ಸವಕ್ಕೆ ಇಂದು ಚಾಲನೆ ನೀಡಿದರು. ಧರ್ಮದ ತಳಹದಿಯಲ್ಲಿ ನಡೆಯುತ್ತಿರುವ ನಮ್ಮ ದೇಶದ ಜ್ಞಾನ ಮತ್ತು ವಿಜ್ಞಾನ ಸಮ್ಮಿಳಿತಗೊಂಡ ಧರ್ಮ ಪರಂಪರೆಯ ಆಡಳಿತವನ್ನು ಇಂದು ಎಲ್ಲಾ ದೇಶಗಳು ಅನುಸರಿಸುತ್ತಿವೆ.

ಇದರಿಂದ ಮುಂದೆ ಭಾರತ ದೇಶ ವಿಶ್ವ ಗುರುವಾಗಿ ಮೆರೆಯಲಿದೆ. ನಮ್ಮ ಗುರುಕುಲದ ಪದ್ಧತಿಯ ಆವಶ್ಯಕತೆ ಇಡೀ ವಿಶ್ವಕ್ಕೆ ಬೇಕಾಗಿದೆ. ಈ ಜಗತ್ತು ಉಳಿಯುವುದಾದರೆ ಸಂಸ್ಕಾರದ ಶಿಕ್ಷಣದ ಅಗತ್ಯತೆ ಇದೆ. ಇಂದು ದೇಶದ ಮೂಲೆ ಮೂಲೆಗಳಲ್ಲಿ ಗುರುಕುಲ ವಿದ್ಯಾಭ್ಯಾಸ ನೀಡಲು ಎಲ್ಲರ ಸಹಕಾರ ಬೇಕಾಗಿದೆ ಎಂದರು.

ಆಶೀರ್ವಚನ ನೀಡಿ ಮಾತನಾಡಿದ ಆದಿ ಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಎಲ್ಲಾ ವಿದ್ಯೆಗಳ ಗುರು ಭಾರತ ದೇಶವಾಗಿದೆ. ಧರ್ಮವನ್ನು ಜಗತ್ತಿಗೆ ನೀಡಿದವರು ನಾವು. ಅದರ ಮಹತ್ವವನ್ನು ಪಾಶ್ಚಾತ್ಯ ಸಂಸ್ಕೃತಿಯನ್ನು ಅಪ್ಪಿಕೊಂಡು ಮರೆತಿದ್ದೇವೆ. ಮತ್ತೆ ನಾವು ಗುರುಕುಲ ಪದ್ಧತಿ ಶಿಕ್ಷಣದ ಮೂಲಕ ಧರ್ಮ ಜಾಗೃತಿಯನ್ನು ಪ್ರತೀ ಮನೆಮನದಲ್ಲೂ ಮೂಡಿಸಬೇಕು ಎಂದರು.

ಆರ್ಟ್‌ ಆಫ್ ಲಿವೀಂಗ್ ಸಂಸ್ಥಾಪಕ ರವಿ ಶಂಕರ ಗುರೂಜಿ, ಹುಬ್ಬಳ್ಳಿ ನಾಗಶಾಂತಿ ಎಜುಕೇಷನಲ್ ಅಂಡ್ ಚಾರಿಟೇಬಲ್‌‌ ಅಧ್ಯಕ್ಷೆ ಅನ್ನಪೂರ್ಣ ಅಗಡಿ, ನಿಟ್ಟೆ ಸಮೂಹ ಸಂಸ್ಥೆಯ ಅಧ್ಯಕ್ಷ ಎನ್. ವಿನಯ ಹೆಗ್ಡೆ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English