ಮಂಗಳೂರು: ಬೃಹತ್ ಗಾತ್ರದ ಮೀನೊಂದು ಸಮುದ್ರ ತೀರಕ್ಕೆ ಅಪ್ಪಳಿಸಿದ ಸಂದರ್ಭದಲ್ಲಿ ಇಬ್ಬರು ಯುವಕರು ಅದನ್ನು ಸಮುದ್ರಕ್ಕೆ ಸೇರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಘಟನೆ ನಡೆದ ಸ್ಥಳದ ಬಗ್ಗೆ ತಿಳಿದು ಬಂದಿಲ್ಲ. ಆದರೆ ಮೀನುಗಾರರು ಇದು ಉಳ್ಳಾಲ ಬೀಚ್ ಆಗಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡುತ್ತಾರೆ.
ಸಮುದ್ರ ತೀರದಲ್ಲಿ ಅಪ್ಪಳಿಸಿದ ಬೃಹತ್ ಗಾತ್ರದ ಮೀನನ್ನು ಕಂಡು ಕರಾವಳಿಯಲ್ಲಿ ಮಾತನಾಡುವ ಬ್ಯಾರಿ ಭಾಷೆಯ ಸಂಭಾಷಣೆ ವಿಡಿಯೋದಲ್ಲಿದೆ. ಸಮುದ್ರ ದಂಡೆಗೆ ಬಂದು ಬಿದ್ದು ಅಸಹಾಯಕ ಸ್ಥಿತಿಯಲ್ಲಿದ್ದ ಈ ಮೀನನ್ನು ಇಬ್ಬರು ಯುವಕರು ಕೈಯಿಂದ ತಳ್ಳುವ ಮೂಲಕ ಮತ್ತೆ ಸಮುದ್ರ ತಲುಪಿಸಿದ್ದಾರೆ.
ಒಂದು ಬಾರಿ ತಳ್ಳುವ ರಭಸದಲ್ಲಿ ಮೀನು ಯುವಕನ ಮೇಲೆ ಬೀಳುವ ಹಾಗಿದ್ದಾಗ, ಮಹಿಳೆಯರು ಬ್ಯಾರಿ ಭಾಷೆಯಲ್ಲಿ ಬೊಬ್ಬಿಡುವುದೂ ಕೇಳಿಸುತ್ತದೆ. ಬರೀ ಕೈಯಲ್ಲಿ ಮೀನನ್ನು ದೂಡಿ ಮತ್ತೆ ಸಮುದ್ರಕ್ಕೆ ತಲುಪಿಸಿದ ಈ ಯುವಕರ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Click this button or press Ctrl+G to toggle between Kannada and English