ಸ್ನೇಹಿತನ ಪುತ್ರನ ಮೇಲೆ ಹಲ್ಲೆ…. ವಿಚಾರಿಸಲು ಹೋದವನಿಗೆ ಚೂರಿ ಇರಿದ ದುಷ್ಕರ್ಮಿ

2:39 PM, Wednesday, April 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ajmalಮಂಗಳೂರು: ನಗರದಲ್ಲಿ ‘ಚೂರಿ ಇರಿತ’ದ ಮತ್ತೊಂದು ಪ್ರಕರಣ ನಡೆದಿದೆ. ಇಬ್ಬರ ನಡುವಿನ ಗಲಾಟೆ ಚೂರಿಯಿಂದ ಇರಿಯುವ ಮೂಲಕ ಅಂತ್ಯವಾಗಿದೆ. ಈ ಘಟನೆ ಮಂಗಳವಾರ ತಡರಾತ್ರಿ ಕೊಣಾಜೆ ಠಾಣಾ ವ್ಯಾಪ್ತಿಯ ನಾಟೆಕಲ್ ಎಂಬಲ್ಲಿ ನಡೆದಿದೆ.

ಕಿನ್ಯಾ ಹಿದಾಯತ್ ನಗರದ ನಿವಾಸಿ ಇಬ್ರಾಹಿಂ ಖಲೀಲ್ ಯಾನೆ ಅಬೂಬಕರ್ ಸಿದ್ದೀಖ್ ಚೂರಿಯಿಂದ ಇರಿತಕ್ಕೆ ಒಳಗಾದ ವ್ಯಕ್ತಿ. ನಾಟೆಕಲ್ ನಿವಾಸಿ ಅಜ್ಮಲ್ ಎಂಬಾತ ಚೂರಿಯಿಂದ ಇರಿದವ.

ಖಲೀಲ್‌ ಸ್ನೇಹಿತನ ಮಗನಿಗೆ ಅಜ್ಮಲ್‌ ಕಿರುಕುಳ ನೀಡಿದ್ದ ಎನ್ನಲಾಗುತ್ತಿದೆ. ಶಾಲೆಗೆ ತೆರಳುತ್ತಿದ್ದ ವೇಳೆ 14 ವಯಸ್ಸಿನ ಬಾಲಕ, ತಾನು ಕರೆದರೂ ತನ್ನ ಬಳಿ ಬರದಿದ್ದಿದ್ದಕ್ಕೆ ಆತನ ಮೇಲೆ ಅಜ್ಮಲ್‌ ಹಲ್ಲೆ ಮಾಡಿದ್ದನಂತೆ. ಈ ಘಟನೆಯನ್ನು ಹಲ್ಲೆಗೊಳಗಾದ ಬಾಲಕ ಪೋಷಕರ ಬಳಿಕ ನಿವೇದಿಸಿಕೊಂಡಿದ್ದ. ಬಾಲಕನ ತಂದೆ ತನ್ನ ಸ್ನೇಹಿತ ಖಲೀಲ್‌ಗೆ ಈ ವಿಚಾರವಾಗಿ ತಿಳಿಸಿ, ಅಜ್ಮಲ್‌ನನ್ನು ವಿಚಾರಿಸುವಂತೆ ತಿಳಿಸಿದ್ದ ಎನ್ನಲಾಗುತ್ತಿದೆ.

ಖಲೀಲ್‌ ಈ ವಿಚಾರವಾಗಿ ಅಜ್ಮಲ್‌ಗೆ ಫೋನಾಯಿಸಿದ್ದ. ಇಬ್ಬರ ನಡುವೆ ವಾಗ್ವಾದ ನಡೆದು, ತಾಕತ್ತಿದ್ದರೆ ಎದುರಿಗೆ ಬಂದು ಮಾತನಾಡುವಂತೆ ಅಜ್ಮಲ್ ಸವಾಲು ಹಾಕಿದ್ದನಂತೆ. ಅದರಂತೆ ನಾಟೆಕಲ್‌ನಲ್ಲಿ ಪರಸ್ಪರ ಎದುರಾಗಿದ್ದಾರೆ. ಈ ವೇಳೆಯೂ ಇವರಿಬ್ಬರ ನಡುವೆ ಜಗಳವಾಗಿದೆ. ಖಲೀಲ್ ಮರದ‌ ತುಂಡಿನಿಂದ ಅಜ್ಮಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಪ್ರತಿಯಾಗಿ ಅಜ್ಮಲ್ ಚೂರಿಯಿಂದ ಖಲೀಲ್ ಸೊಂಟದ ಭಾಗಕ್ಕೆ ಚುಚ್ಚಿದ್ದಾನೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English