ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ : ಪ್ರತಿಭಾ ಕುಳಾಯಿ

5:38 PM, Monday, April 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

prathiba-speachಮಂಗಳೂರು : ಉನ್ನಾವೋ, ಕಥುವಾ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿದ ಪ್ರತಿಭಾ ಕುಳಾಯಿ ಅವರು ತುಂಬಾ ಹೆಣ್ಮಕ್ಕಳು ಈ ದೇಶದಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾರೆ.ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಹಿಂದೂ, ಆದರೆ ಬಿಜೆಪಿ ಹಿಂದೂ ಅಲ್ಲ. ವಿಶ್ವದಲ್ಲಿ ಗಂಡು, ಹೆಣ್ಣು ಜಾತಿ ಮಾತ್ರ ಇರುವುದು. ನನಗೆ, ನಮಗೆ ಖಂಡಿತಾ ಜಾತಿ ಇಲ್ಲ. ಭಾರತ ಮಾತೆ ಅನ್ನುವವರು ಮಹಿಳೆಯರಿಗೆ ರಕ್ಷಣೆ ಕೊಡುತ್ತಿಲ್ಲ. ಸ್ವತಃ ನಾನು ಕೂಡಾ ಹಿಂಸೆ ಅನುಭವಿಸಿದ್ದೇನೆ. ಅದಕ್ಕಾಗಿ ಯಾರು ರಕ್ಷಣೆ ಕೊಡುತ್ತಾರೆ ಅವರಿಗೆ ಮತ ಕೊಡಿ ಎಂದು ಮಂಗಳೂರಲ್ಲಿ ಕಾಂಗ್ರೆಸ್ ಮಹಿಳಾ ರಾಜ್ಯ ಕಾರ್ಯದರ್ಶಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಭೇಟಿ ಬಚಾವೋ ಅಂತಾರೆ ,ಆದರೆ ಮೋದಿ ತನ್ನ ಪತ್ನಿಗೆ ಹಿಂಸೆ ಕೊಟ್ಟವರು. ಪತ್ನಿಯನ್ನೇ ದೂರ ಇಟ್ಟವರು ಪ್ರಧಾನಿ ಮೋದಿ. ಯು ಪಿ ಸಿಎಂ ಯೋಗಿ ಜೋಗಿಯಾಗಿದ್ದಾರೆ. ಮೋದಿ, ಯೋಗಿಗೆ ಹೆಣ್ಮಕ್ಕಳ ನೋವು ಅರ್ಥವಾಗಲ್ಲ. ನನ್ನ ಮನೆ ಎದುರು ಬಿಜೆಪಿ ಹಿಂದೂ ಕಾರ್ಯಕರ್ತರು ಎಂದು ಕರೆಸಿಕೊಳ್ಳುತ್ತಿರುವವರಿಂದ ದಾಂಧಲೆ ನಡೆದಿದೆ ಎಂದು ಮಂಗಳೂರಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English