ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದರೆ 1 ಲಕ್ಷ ರೂಪಾಯಿ ಕೊಡುವುದಾಗಿ ಪ್ರತಿಭಾ ಕುಳಾಯಿ ಘೋಷಣೆ

Monday, February 8th, 2021
Prathiba Kulai

ಮಂಗಳೂರು :  ಬಿಲ್ಲವ ಮುಖಂಡ ಬಿ.ಜನಾರ್ದನ ಪೂಜಾರಿಯವರ ಕಾಲು ಹಿಡಿದು ಕ್ಷಮೆಯಾಚಿಸಬೇಕು, ವೀರ ಪುರುಷ ಕೋಟಿ ಚೆನ್ನಯ್ಯರನ್ನು ಅವಹೇಳನ ಮಾಡಿದ್ದಕ್ಕೆ ಮೂರು ದಿನದಲ್ಲಿ ತಪ್ಪು ಕಾಣಿಕೆ ಹಾಕಬೇಕು ಎಂದು ಫೇಸ್ಬುಕ್ ಲೈವ್ನಲ್ಲಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿಗೆ ಹೇಳಿದ್ದಾರೆ. ಅಲ್ಲದೆ  ಬಿಲ್ಲವ ಸಮುದಾಯದ ನಾಯಕ ಜನಾರ್ದನ ಪೂಜಾರಿ ಹಾಗೂ ಕೋಟಿ-ಚೆನ್ನಯರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿಯುವ ಬಿಲ್ಲವ ಸಮುದಾಯದವರಿಗೆ 1 ಲಕ್ಷ ರೂ. […]

ಸ್ವಚ್ಛ ಭಾರತ ಮಿಷನ್ ಅಡಿ ಸ್ವಚ್ಛ ಸರ್ವೇಕ್ಷಣ- 2019

Friday, December 21st, 2018
nazeer

ಮಂಗಳೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವಚ್ಛ ಭಾರತ ಮಿಷನ್ ಅಡಿ ಸ್ವಚ್ಛ ಸರ್ವೇಕ್ಷಣ- 2019 ರಲ್ಲಿ ಮಂಗಳೂರು ಮಹಾನಗರ ಪಾಲಿಕೆ ಭಾಗವಹಿಸಲಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಪಾಲಿಕೆಯ ಸದಸ್ಯರು, ಸಾರ್ವಜನಿಕರ ನಡುವೆ ಸಂವಾದ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪಾಲಿಕೆಯ ಆಯುಕ್ತ ಮೊಹಮ್ಮದ್ ನಜೀರ್ ಮಾತನಾಡಿ, ಮಂಗಳೂರಿನ ಘನತ್ಯಾಜ್ಯ ವಿಲೇವಾರಿ ಮಾಡಲು ಅನುಷ್ಠಾನಗೊಂಡಿರುವ ವಿಷಯಗಳ ಬಗ್ಗೆ ಚರ್ಚಿಸಲು ನಾವು ಕಳೆದ ಒಂದು ತಿಂಗಳಿನಿಂದ ಪ್ರತಿ ವಾರ ಮಹಾನಗರ ಪಾಲಿಕೆಯ ಪ್ರತಿನಿಧಿಗಳು, […]

ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಮೇಲೆ ಹಾಕಲಾಗಿದ್ದ ಕೇಸ ವಜಾ..!

Monday, October 8th, 2018
case

ಮಂಗಳೂರು: ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರರ ಮೇಲೆ ಹಾಕಲಾಗಿದ್ದ ಕೇಸನ್ನು ಮಂಗಳೂರು ನ್ಯಾಯಾಲಯ ವಜಾಗೊಳಿಸಿದೆ. ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಸೇರಿದಂತೆ 23 ಮಂದಿಯ ಮೇಲಿನ ಕೇಸ್ ವಜಾ ಆಗಿದೆ. ಪಂಪ್ವೆಲ್ನಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಯ ವೇಳೆ ಹಾಕಲಾಗಿದ್ದ ಪ್ರಕರಣವನ್ನು ಮಂಗಳೂರು ನ್ಯಾಯಾಲಯ ವಜಾಗೊಳಿಸಿದೆ. ಎತ್ತಿನಹೊಳೆ ಯೋಜನೆ ವಿರೋಧಿಸಿ ಹಿಂದೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆದಿತ್ತು. ಈ ಸಂದರ್ಭದಲ್ಲಿ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಹಿಂದೂ ಜಾಗರಣಾ ವೇದಿಕೆ ಮುಖಂಡ ಸತ್ಯಜಿತ್ ಸುರತ್ಕಲ್, ಮಂಗಳೂರು ಮನಪಾ ಸದಸ್ಯೆ […]

ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ

Thursday, May 3rd, 2018
join-congress

ಮಂಗಳೂರು: ಕೇಂದ್ರದ ಬಿಜೆಪಿ ಸರಕಾರದ ಆಡಳಿತ ನೀತಿ, ಡಿಮಾನಿಟೈಸೇಶನ್, ಉದ್ಯೋಗ ಕಡಿತ, ಆರ್ಥಿಕ ಪ್ರಗತಿ ಕುಂಟಿತ, ಅಭಿವೃದ್ಧಿಯಲ್ಲಿ ಹಿನ್ನಡೆ ಮುಂತಾದ ಸಮಸ್ಯೆಗಳಿಂದ ಯುವ ಜನತೆ ನಿರುದ್ಯೋಗದ ಭೀತಿ ಎದುರಿಸುತ್ತಿದ್ದಾರೆ. ಇದರಿಂದಾಗಿ ಮತ್ತೆ ಕಾಂಗ್ರೆಸ್ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕರಕ್ಕೆ ಬರಬೇಕು ಎಂಬ ಉದ್ದೇಶದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೊದಿನ್ ಬಾವಾ ಹೇಳಿದರು. ಚೊಕ್ಕಬೆಟ್ಟುವಿನಲ್ಲಿ ಆಯೋಜಿಸಲಾದ ಕಾಂಗ್ರೆಸ್ ಸಭೆಯಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಮಾತನಾಡಿದರು. ಕೇಂದ್ರ […]

ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ : ಪ್ರತಿಭಾ ಕುಳಾಯಿ

Monday, April 16th, 2018
prathiba-speach

ಮಂಗಳೂರು : ಉನ್ನಾವೋ, ಕಥುವಾ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿದ ಪ್ರತಿಭಾ ಕುಳಾಯಿ ಅವರು ತುಂಬಾ ಹೆಣ್ಮಕ್ಕಳು ಈ ದೇಶದಲ್ಲಿ ಅತ್ಯಾಚಾರಕ್ಕೊಳಗಾಗಿದ್ದಾರೆ.ನಾನು ಭಾರತೀಯ ಮಹಿಳೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಹಿಂದೂ, ಆದರೆ ಬಿಜೆಪಿ ಹಿಂದೂ ಅಲ್ಲ. ವಿಶ್ವದಲ್ಲಿ ಗಂಡು, ಹೆಣ್ಣು ಜಾತಿ ಮಾತ್ರ ಇರುವುದು. ನನಗೆ, ನಮಗೆ ಖಂಡಿತಾ ಜಾತಿ ಇಲ್ಲ. ಭಾರತ ಮಾತೆ ಅನ್ನುವವರು ಮಹಿಳೆಯರಿಗೆ ರಕ್ಷಣೆ ಕೊಡುತ್ತಿಲ್ಲ. ಸ್ವತಃ ನಾನು ಕೂಡಾ ಹಿಂಸೆ ಅನುಭವಿಸಿದ್ದೇನೆ. ಅದಕ್ಕಾಗಿ ಯಾರು ರಕ್ಷಣೆ […]

ನನ್ನ ಮಗಳ ಹೆಸರಿಗೆ ಕಥುವಾ ಸಂತ್ರಸ್ತ ಬಾಲಕಿಯ ಹೆಸರು ಜೋಡಣೆ: ಪ್ರತಿಭಾ ಕುಳಾಯಿ

Monday, April 16th, 2018
congress-mangaluru

ಮಂಗಳೂರು: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸುವ ಜತೆಗೆ, ಸಂತ್ರಸ್ತ ಬಾಲಕಿಯ ಹೆಸರನ್ನು ನನ್ನ ಮಗಳ ಹೆಸರಾದ ಪೃಥ್ವಿ ಜತೆ ಸೇರಿಸಿ ಕರೆಯುತ್ತೇನೆ ಎಂದು ಕಾಂಗ್ರೆಸ್‌ನ ಮಹಿಳಾ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್‌ನ ಮಹಿಳಾ ಘಟಕದ ಸದಸ್ಯರು ಹಾಗೂ ಪುತ್ರಿ ಜತೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾನು ಹಿಂದೂವಾಗಿದ್ದರೂ ಬಿಜೆಪಿಯ ಹಿಂದೂಗಳೆದುರು ನಾನೂ ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆಪಡುವ ಪರಿಸ್ಥಿತಿ ಎದುರಾಗಿದೆ ಎಂದರು. […]

ನೀತಿ ಸಂಹಿತೆ ನೆಪದಲ್ಲಿ ಅಧಿಕಾರಿಗಳಿಂದ ಅತಿರೇಕದ ವರ್ತನೆ: ಐವನ್ ವಿರೋಧ

Monday, April 16th, 2018
ivan-desouza

ಮಂಗಳೂರು: ಮಾದರಿ ನೀತಿ ಸಂಹಿತೆಯ ನೆಪದಲ್ಲಿ ದ.ಕ. ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಧಿಕಾರಿಗಳು ಅತಿರೇಕದ ವರ್ತನೆ ತೋರುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಹೇಳಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಬಿದಿರೆಯಲ್ಲಿ ಇತ್ತೀಚೆಗೆ ಅಂಬೇಡ್ಕರ್ ದಿನಾಚರಣೆ ಸಂದರ್ಭ ಸಂಘಟನೆಯೊಂದು ಈ ಹಿಂದೆ ವೈದ್ಯರಿಂದ ತಪಾಸಣೆಗೊಳಪಟ್ಟು ಕನ್ನಡಕಕ್ಕೆ ಸೂಚನೆ ನೀಡಿದ್ದವರಿಗೆ ಕನ್ನಡ ವಿತರಿಸಲು ಮುಂದಾದಾಗ ಅಧಿಕಾರಿಗಳು ಅಡ್ಡಿ ಪಡಿಸಿದ್ದಾರೆ. ಮದುವೆ ಸಮಾರಂಭ, ಚಿನ್ನ ಖರೀದಿ, […]

ಕೇಂದ್ರ ಕಾನೂನು ಸಚಿವ, ಯಡಿಯೂರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಪ್ರತಿಭಾ ಕುಳಾಯಿ

Wednesday, April 4th, 2018
prathibha-kulai

ಮಂಗಳೂರು: ತನ್ನ ಭಾವಚಿತ್ರ ಹಾಗೂ ಹೆಸರು ಬಳಸಿ ಮಾನಸಿಕ ಹಿಂಸೆ, ಮಾನಹಾನಿ ಮಾಡಿದ್ದಾರೆಂದು ಆರೋಪಿಸಿ ಕೇಂದ್ರ ಕಾನೂನು ಸಚಿವ ಹಾಗೂ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಸಹಿತ ವಿರುದ್ಧ ಮೂವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಹಿಳಾ ಕಾಂಗ್ರೆಸ್ ಮುಖಂಡೆ, ಕಾರ್ಪೊರೇಟರ್ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ. ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷದ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ನನಗೆ ಸಂಬಂಧಪಡದ ವಿಷಯದಲ್ಲಿ ನನ್ನ ಭಾವಚಿತ್ರ ಹಾಗೂ ಹೆಸರು ಬಳಸಿ ಮಾನಹಾನಿ […]

ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಭೆ

Saturday, March 31st, 2018
congress

ಮಂಗಳೂರು: ಕ್ಷೇತ್ರದ ಉಸ್ತುವಾರಿ ದೇವಿಪ್ರಸಾದ್ ಶೆಟ್ಟಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು. ಶಾಸಕ ಮೊದಿನ್ ಬಾವಾ ಅವರು ಮಾತನಾಡಿ ಕಾಂಗ್ರೆಸ್ ಸರಕಾರ ಮಾಡುದ ಉತ್ತಮ ಕೆಲಸ ಕಾರ್ಯಗಳನ್ನು ಮತದಾರರಿಗೆ ತಿಳಿ ಹೇಳುವ ಮೂಲಕ ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರು ಕೆಲಸ ಮಾಡ ಬೇಕು ಎಂದರು. ದೀಪಕ್ ಪೂಜಾರಿ, ಮುಖಂಡರಾದ ಕೆ.ಸದಾಶಿವ ಶೆಟ್ಟಿ,ಪುರುಷೋತ್ತಮ್ ಚಿತ್ರಾಪುರ, ಅಶೋಕ್ ಶೆಟ್ಟಿ, ಮಹಾಬಲ ಮಾರ್ಲ,ಕವಿತಾ ಸನಿಲ್, ಕುಮಾರ್ ಮೆಂಡನ್, ಪ್ರತಿಭಾ ಕುಳಾಯಿ,ಶಕುಂತಳಾ ಕಾಮತ್‌ ಮತ್ತಿತರರು ಭಾಗವಹಿಸಿದ್ದರು.

ಹಳೆ ಮಾರುಕಟ್ಟೆ ಧರಾಶಾಹಿ ಕಾಮಗಾರಿ ಆರಂಭ

Thursday, March 22nd, 2018
surathkal

ಸುರತ್ಕಲ್: ಇಲ್ಲಿ ಹೊಸ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗಾಗಿ ಹಳೆ ಮಾರುಕಟ್ಟೆ ಧರಾಶಾಹಿ ಕಾಮಗಾರಿ ಆರಂಭಿಸಲಾಗಿದೆ. ಗುರುವಾರ ಪೊಲೀಸ್ ಬಿಗಿಭದ್ರತೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದ್ದು, ಪಾಲಿಕೆ ಕಂದಾಯ ಡಿ ಸಿ ಗಾಯತ್ರಿ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಾಮಾಗಾರಿ ಆರಂಭದ ವೇಳೆ ಸ್ಥಳಕ್ಕಾಗಮಿಸಿದ ಶಾಸಕ ಮೊಯಿದೀನ್ ಬಾವಾ ಬಂದ ಸಂದರ್ಭ ವ್ಯಾಪಾರಿಗಳ ತೀವ್ರ ಆಕ್ರೋಶ ಹೊರ ಹಾಕಿದರು. ಕಾರ್ಪೋರೇಟರ್‌ ಪ್ರತಿಭಾ ಕುಳಾಯಿ ಅವರು ಕಾಮಗಾರಿ ಆರಂಭದ ವೇಳೆ ಹಾಜರಿದ್ದರು.