ಕಾಪು ಕ್ಷೇತ್ರದ ಜನಪ್ರಿಯ ನಾಯಕ ಲಾಲಾಜಿ ಮೆಂಡನ್‌

2:24 PM, Friday, May 11th, 2018
Share
1 Star2 Stars3 Stars4 Stars5 Stars
(No Ratings Yet)
Loading...

lalaji-mendonಕಾಪು: ತುಳುನಾಡಿನ ಜನತೆ ಸಜ್ಜನರು, ಆತ್ಮಾಭಿಮಾನಿಗಳು. ನಾವು ಸಮಾಜಕ್ಕೆ ನಮ್ಮಿಂದಾಗುವ ಕೊಡುಗೆಗಳನ್ನು ಸದಾ ನೀಡುತ್ತಿರುತ್ತಾರೆ ಎಂದು ನಂಬಿದವರು ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಮೆಂಡನ್‌.

ಅತ್ಯಂತ ಸಜ್ಜನ, ಉತ್ತಮ ಸ್ವಭಾವದ ರಾಜಕಾರಣಿ ಎಂದೇ ಲಾಲಾಜಿ ಮೆಂಡನ್ ಅವರನ್ನು ಗುರುತಿಸಲಾಗುತ್ತದೆ. ಈ ಬಾರಿ ಮತ್ತೆ ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಅವರೇ ಆಗಿದ್ದಾರೆ.

ಕಾಪು ವಿಧಾನಸಭಾ ಕ್ಷೇತ್ರ ಈ ಬಾರಿ ಉಡುಪಿ ಜಿಲ್ಲೆಯ ಪೈಕಿ ಜಿದ್ದಿನ ಕಣ. ಕಾಂಗ್ರೆಸ್ನಿಂದ ವಿನಯಕುಮಾರ್ ಸೊರಕೆ, ಬಿಜೆಪಿಯಿಂದ ಲಾಲಾಜಿ ಮೆಂಡನ್ ಕಣದಲ್ಲಿದ್ದಾರೆ. ಈ ಬಾರಿ ಇಬ್ಬರಿಗೂ ನೆಕ್ ಟೂ ನೆಕ್ ಫೈಟ್ ಇದೆ ಎನ್ನಲಾಗುತ್ತದೆ. ಏಖೆಂದರೆ ಕಳೆದ ಐದು ಚುನಾವಣಗಳಲ್ಲಿ ಕೂಡ ಗೆಲುವಿನ ಅಂತರ ತೀರಾ ಕಡಿಮೆ.

ಕಳೆದ ಬಾರಿ ಒಂದೂವರೆ ಸಾವಿರ ಮತಗಳಿಂದ ಲಾಲಾಜಿ ಮೆಂಡನ್ ಅವರು ಶಾಸಕ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು. ಈ ಬಾರಿ ರಾಜಕೀಯ ಮರುಜೀವದ ಪಣ ತೊಟ್ಟಿದ್ದಾರೆ.

1994 ಮತ್ತು 1999ರಲ್ಲಿ ವಸಂತ ಸಾಲ್ಯಾನ್ ವಿರುದ್ಧ ಅಲ್ಪ ಮತಗಳಿಂದ ಸೋತಿದ್ದ ಬಿಜೆಪಿಯ ಲಾಲಾಜಿ ಮೆಂಡನ್ 2004ರಲ್ಲಿ ಸಾಲ್ಯಾನ್ ರಿಗೆ ಕೇವಲ 1ಸಾವಿರ ಮತಗಳಿಂದ ಸೋಲುಣಿಸಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ದಕ್ಕಿಸಿಕೊಟ್ಟರು.ವಿಶೇಷ ಎಂದರೆ 2008ರಲ್ಲೂ ಇಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್ ಕಾಂಗ್ರೆಸಿನ ವಸಂತ ವಿಸಾಲ್ಯಾನ್ ರನ್ನು ಸೋಲಿಸಿದರಾದರೂ, ಗೆಲುವಿನ ಅಂತರ ಮಾತ್ರ ಮತ್ತೆ ಕೇವಲ 1 ಸಾವಿರ ಚಿಲ್ಲರೆ ಮತಗಳಷ್ಟೇ ಇತ್ತು. ಸೋತರೂ ಸಾಲ್ಯಾನ್ ಪ್ರಭಾವ ಕ್ಷೇತ್ರದಲ್ಲಿ ತಗ್ಗಿರಲಿಲ್ಲ.2013ರಲ್ಲಿ ಇಲ್ಲಿ ಕಾಂಗ್ರೆಸ್ ವಸಂತ ಸಾಲಿಯಾನ್ ಗೆ ಟಿಕೆಟ್ ನೀಡದೆ ಅನುಭವಿ ರಾಜಕಾರಣಿ ವಿನಯ್ ಕುಮಾರ್ ಸೊರಕೆಯವರಿಗೆ ಟಿಕೆಟ್ ನೀಡಿತ್ತು.

ಎರಡು ಅವಧಿ ಶಾಸಕರಾಗಿ ಆಯ್ಕೆ ಆಗಿದ್ದ ಲಾಲಾಜಿ ಮೆಂಡನ್ ಅವರು ಜನರ ಒಡನಾಟದಲ್ಲೇ ಇರುವವರಾಗಿದ್ದು,ರಾಜ್ಯದ ಇತರ ಜಿಲ್ಲೆಗಳ ಶಾಸಕರಿಗಿಂತ ತುಂಬಾ ಭಿನ್ನವಾದ ವ್ಯಕ್ತಿತ್ವ ಹೊಂದಿದವರು. ತಾನು ಶಾಸಕನಾಗಿದ್ದ ಅವಧಿಯಲ್ಲಿ ಮಾಡಿರುವ  ಅಭಿವೃದ್ಧಿ ಕೆಲಸಗಳು ತನ್ನ ಕೈ ಹಿಡಿಯಲಿವೆ ಎಂಬುದು ಅವರ ಭರವಸೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English