ಮಂಗಳೂರು: ರಾಜ್ಯ ಸರ್ಕಾರವು ಮನ್ನಾ ಮಾಡಿದ ರೈತರ ಸಾಲದ ಹಣವನ್ನು ತಕ್ಷಣವೇ ಬ್ಯಾಂಕ್ ಗಳಿಗೆ ಪಾವತಿಸಲಿ ಎಂದು ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಆಗ್ರಹಿಸಿದ್ದಾರೆ.
ಮಂಗಳೂರಿನ ಬ್ಯಾಂಕಿನ ಕೇಂದ್ರಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರವು ಸಂಪೂರ್ಣ ಸಾಲಮನ್ನಾ ಮಾಡುತ್ತಿರುವುದು ಸ್ವಾಗತಾರ್ಹ . ಆದರೆ ಮನ್ನಾ ಮಾಡಲಾದ ಸಾಲದ ಹಣವನ್ನು ಬ್ಯಾಂಕ್ ಗೆ ತಕ್ಷಣವೆ ನೀಡಲಿ ಎಂದು ಆಗ್ರಹಿಸಿದರು.
ಎಸ್ಸಿಡಿಸಿಸಿ ಬ್ಯಾಂಕ್ ಅಧೀನದಲ್ಲಿ ಇರುವ ಬ್ಯಾಂಕ್ ಗಳಲ್ಲಿ ಕೃಷಿ ಸಾಲ ಅಂದಾಜು 2500 ಕೋಟಿ ಇರಬಹುದು. ಇದೇ ರೀತಿ ರಾಜ್ಯದ ವಿವಿಧ ಬ್ಯಾಂಕ್ ಗಳ ಪರಿಸ್ಥಿತಿ ಇದೆ. ಈ ಹಣವನ್ನು ಶೀಘ್ರ ಸರಕಾರ ನೀಡದಿದ್ದಲ್ಲಿ ಬ್ಯಾಂಕ್ ನಿಂದ ಮುಂದೆ ರೈತರಿಗೆ ಸಾಲ ನೀಡಲು ಅಸಾಧ್ಯವಾಗಲಿದೆ. ಕೃಷಿ ಗಾಗಿ ಇರುವ ಹಲವು ಬ್ಯಾಂಕ್ ಗಳಿದ್ದು ಅವುಗಳಿಗೆ ಸಕಾಲಕ್ಕೆ ಹಣ ಬರದಿದ್ದರೆ ಬ್ಯಾಂಕ್ ಅಸ್ತಿತ್ವ ಕ್ಕೆ ತೊಂದರೆಯಾಗಲಿದೆ. ಈ ಕಾರಣದಿಂದ ಶೀಘ್ರ ಹಣ ಪಾವತಿ ಯನ್ನು ಸರಕಾರ ಮಾಡಬೇಕು ಎಂದು ರಾಜೇಂದ್ರಕುಮಾರ್ ಆಗ್ರಹಿಸಿದರು.
Click this button or press Ctrl+G to toggle between Kannada and English