ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಕಲೇಶಪುರದ ಕೆಂಪುಹೊಳೆಯಿಂದ ಶಿರಾಡಿ ಗ್ರಾಮದ ಅಡ್ಡಹೊಳೆ ತನಕ ನಡೆಯುತ್ತಿರುವ ಶಿರಾಡಿ ಘಾಟಿ ರಸ್ತೆ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಧರ್ಮಸ್ಥಳ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವೀಕ್ಷಿಸಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೀರೇಂದ್ರ ಹೆಗ್ಗಡೆಯವರು ಜೂ. 2ರಂದು ಪೂರ್ಣ 13 ಕಿ.ಮೀ. ದೂರದ ತನಕ ಕಾಮಗಾರಿ ವೀಕ್ಷಿಸಿದರು. ಕಾಂಕ್ರೀಟ್ ಕಾಮಗಾರಿಗಾಗಿ ಬಳಸುವ ಜರ್ಮನ್ ಯಂತ್ರ, ಕಾಮಗಾರಿ ಸಲುವಾಗಿ ಮಿಕ್ಸಿಂಗ್ ಯಂತ್ರ ಹಾಗೂ ಯುನಿಟ್ ಕೇಂದ್ರಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಕಾಮಗಾರಿಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಮತ್ತು ಗುತ್ತಿಗೆದಾರರಿಂದ ಮಾಹಿತಿ ಪಡೆದರು.
ಹೆಗ್ಗಡೆ ಅವರು ಭೇಟಿ ನೀಡಿದ ಸಂದರ್ಭ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್‌ಗಳಾದ ಪ್ರಸನ್ನ ಕುಮಾರ್, ಮುನಿರಾಜ್ ಹಾಗೂ ಕಾಮಗಾರಿ ನಿರ್ವ ಹಣೆಯ ಓಷಿಯನ್ ಕನ್‌ಸ್ಟ್ರಕ್ಷನ್ ಸಂಸ್ಥೆಯ ನಿರ್ದೇಶಕ ಶರ್ಫುದ್ದೀನ್ ಮಾಹಿತಿ ನೀಡಿದರು.
ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ| ಹೆಗ್ಗಡೆ, ಜ. 20ರಿಂದ ಹೆದ್ದಾರಿ ಬಂದ್ ಆಗಿದ್ದು, ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಎಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಸಲಹೆ ನೀಡಿದರು.
Click this button or press Ctrl+G to toggle between Kannada and English