ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ತೆರಳುತ್ತಿದ್ದ ಮಹಿಳೆವರ್ವೋಳ ಬ್ಯಾಗ್ನಲ್ಲಿ ಎಂಟು ಜಿಂಕೆ ಕೊಂಬುಗಳು ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
15 ದಿನಗಳ ಹಿಂದೆ ಅಮೆರಿಕದ ಪ್ರಜೆಯಾಗಿರುವ ಕಾರ್ಕಳ ತಾಲೂಕಿನ ಹಿರ್ಗಾನದ ಮಹಿಳೆ ಅಮೆರಿಕಕ್ಕೆ ತೆರಳುವ ವೇಳೆ ತಮ್ಮ ಮನೆಯಲ್ಲಿ ಅಲಂಕಾರಿಕ ವಸ್ತುವಾಗಿ ಇಟ್ಟುಕೊಳ್ಳಲು ಈ ಕೊಂಬುಗಳನ್ನು ಬ್ಯಾಗ್ನೊಳಗೆ ಇಟ್ಟುಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ಅವರ ಬ್ಯಾಗ್ ಅನ್ನು ವಿಮಾನಯಾನ ಸಂಸ್ಥೆಯ ಲಗೇಜು ಸ್ಕಾನರ್ನಲ್ಲಿ ತಪಾಸಣೆ ನಡೆಸಿದಾಗ ಜಿಂಕೆಯ ಕೊಂಬುಗಳು ಸಿಕ್ಕಿದ್ದವು.
ಸದ್ಯ ಇದನ್ನು ಅರಣ್ಯ ಇಲಾಖೆಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English