ಮಂಗಳೂರು : ಶರವು ಶ್ರೀಮಹಾಗಣಪತಿ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಸೆಪ್ಟೆಂಬರ್ 13 ಗುರುವಾರ ಚೌತಿ ಮಹಾ ಗಣಪತಿ ಹೋಮ, 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಮಹಾಪೂಜೆ ಮತ್ತು ರಥೋತ್ಸವ ಜರಗಲಿರುವುದು. ಗುರುವಾರ ಬೆಳಗ್ಗಿನಿಂದ ರಾತ್ರಿಯ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಕಾರ್ಯಕ್ರಮ
ತಾ. 13-09-18: ಗುರುವಾರ ಸೂರ್ಯೋದಯಕ್ಕೆ ಊಷಕಾಲ ಪೂಜೆ
ಬೆಳಿಗ್ಗೆ ಘಂಟೆ 7:30 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಕಳ್ಪೋಕ್ತ ಪೂಜೆ
ಬೆಳಿಗ್ಗೆ ಘಂಟೆ 9:30 ಕ್ಕೆ ಆಗ್ನಿ ಜನನ, ಚೌತಿ ಮಹಾಗಣಪತಿ ಹೋಮದ ಆರಂಭ
ಬೆಳಿಗ್ಗೆ ಘಂಟೆ 11:30 ಕ್ಕೆ ಮಹಾಗಣಪತಿ ಹೋಮದ ಪೂರ್ಣಾಹುತಿ
ಬೆಳಿಗ್ಗೆ ಘಂಟೆ 11:45ಕ್ಕೆ 5000 ತೆಂಗಿನ ಕಾಯಿಯ ಪಲ್ಲ ಪೂಜೆ
ಬೆಳಿಗ್ಗೆ ಘಂಟೆ 12:00 ಕ್ಕೆ ಮಹಾಪೂಜೆ
ಬೆಳಿಗ್ಗೆ ಘಂಟೆ 12:30 ಕ್ಕೆ ರಥೋತ್ಸವ
ಸಾಯಂ. ಘಂಟೆ 5.00 ರಿಂದ ಚೌತಿ ಮಹಾ ಗಣಪತಿ ಹೋಮದ ಸೇವಾ ಪ್ರಸಾದ ವಿತರಣೆ ರಾತ್ರಿ ಗಂಟೆ 9:30 ಕ್ಕೆ ಮಹಾ ಪೂಜೆ, ಪ್ರಸಾದ ವಿತರಣೆ
ಸಾಯಂಕಾಲ ಘಂಟೆ 5.00 ರಿಂದ ಶ್ರೀ ಶರಭೇಶ್ವರ ಕೃಪಾಪೋಷಿತ ಯಕ್ಷಗಾನ ಸಂಘ, ಶರವು ಇವರಿಂದ ”ಯಕ್ಷಗಾನ ತಾಳಮದ್ದಳೆ”
ಈ ಕಾರ್ಯಕ್ರಮಗಳಿಗೆ ಬಂದು ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶರವು ರಾಘವೇಂದ್ರ ಶಾಸ್ತ್ರಿ ಮತ್ತು ಅನುವಂಶಿಕ ಅರ್ಚಕರು ಈ ಮೂಲಕ ತಿಳಿಸಿದ್ದಾರೆ .
Click this button or press Ctrl+G to toggle between Kannada and English