ಮಂಗಳೂರು: ತಾಲೂಕಿನ ಅಡ್ಯಾರ್ನಿಂದ ಹರೇಕಳಕ್ಕೆ ನೇತ್ರಾವತಿ ನದಿಗೆ ಕಿಂಡಿ ಅಣೆಕಟ್ಟು ಸೇತುವೆಯನ್ನು ಎರಡು ವರ್ಷದೊಳಗೆ ನಿರ್ಮಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜು ತಿಳಿಸಿದ್ದಾರೆ.
ಹರೇಕಳ ಅಡ್ಯಾರ್ನಲ್ಲಿ ನಿರ್ಮಿಸಲುದ್ದೇಶಿಸಿದ ಕಿಂಡಿ ಅಣೆಕಟ್ಟು ಸೇತುವೆಯ ಸಂಬಂಧ ಹರೇಕಳ ಪಾವೂರು ಕಡವಿನ ಬಳಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾಗರರೊಂದಿಗೆ ಮಾತನಾಡಿದರು. ಈ ಸೇತುವೆ ನಿರ್ಮಾಣ ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದು, ಸುಮಾರು 174 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಲಾಗಿದೆ. ಇನ್ನು, ಇದರಿಂದ ಜಮೀನು ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಅಲ್ಲದೇ, ಕಿಂಡಿ ಅಣೆಕಟ್ಟು ಮೂಲಕ ಸಂಗ್ರಹಿಸಲಾಗುವ ನೀರನ್ನು ಕೃಷಿ ಉಪಯೋಗಿ ಮತ್ತು ಕುಡಿಯಲು ಬಳಸಲಾಗುವುದು ಎಂದರು. ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕೂಡ ಜೊತೆಗಿದ್ದರು.
Click this button or press Ctrl+G to toggle between Kannada and English