ಕಲಬುರಗಿ: ಮೈತ್ರಿ ಸರ್ಕಾರಕ್ಕೆ ಯಾವುದೇ ಕಂಟಕ ಎದುರಾಗಿಲ್ಲ. ಐದು ವರ್ಷ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಸುವ ಜವಾಬ್ದಾರಿ ಮಾಜಿ ಸಿಎಂ ಸಿದ್ದರಾಮಯ್ಯ ಹೆಗಲಿಗಿದ್ದು, ಬಿಜೆಪಿಯವರು ಸುಮ್ಮನೆ ವ್ಯರ್ಥ ಕಸರತ್ತು ಮಾಡುತ್ತಿದ್ದಾರೆಂದು ಸಿಎಂ ಕುಮಾರಸ್ವಾಮಿ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಸಿಎಂ, ಕಳ್ಳನ ಮನಸ್ಸು ಹುಳ್ಳು ಹುಳ್ಳುಗೆ ಎನ್ನುವಂತೆ ಬಿಜೆಪಿಯವರ ಮನಸ್ಥಿತಿಯಾಗಿದೆ. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ, ನೀಡುತ್ತಿದ್ದಾರೆ ಎಂದು ಸುಮ್ಮನೇ ಇಲ್ಲದ ಸುದ್ದಿಯನ್ನು ಸೃಷ್ಟಿಸಿ ಹರಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರು ವಿಲನ್ ಅಲ್ಲ. ಸಮ್ಮಿಶ್ರ ಸರ್ಕಾರಕ್ಕೆ ವಿಲನ್ ಆಗಿರೋರು ಯಾರು ಎನ್ನೋದು ನೀವೇ ವಿಚಾರ ಮಾಡಿ ಎಂದು ಪರೋಕ್ಷವಾಗಿ ಬಿಎಸ್ವೈ ವಿರುದ್ಧ ಹರಿಹಾಯ್ದರು.
ಬಿಜೆಪಿಯವರು ಎಷ್ಟೇ ಕಸರತ್ತು ಮಾಡಿದರು ವ್ಯರ್ಥವಾಗುವುದೇ ಹೊರತು ಅದರಿಂದ ಯಾವುದೇ ಪ್ರತಿಫಲವಿಲ್ಲ. ಸುಮ್ಮನೆ ಕುರಲಾಗದೆ ಇಲ್ಲದೊಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಸಿಎಂ ಬಿಜೆಪಿಯವರ ಕಾಲೆಳೆದರು.
ಇಂದು ಗಾಣಗಾಪುರ ದತ್ತಾತ್ರೇಯ ದೇವರ ದರ್ಶನ ಪಡೆದಿದ್ದು, ರಾಜ್ಯದಲ್ಲಿ ಜನರ ಆರೋಗ್ಯ, ಮಳೆ, ಬೆಳೆ ಚೆನ್ನಾಗಿರಲಿ ಎಂದು ಬೇಡಿಕೊಂಡಿದ್ದಾಗಿ ಹೇಳಿದರು.
Click this button or press Ctrl+G to toggle between Kannada and English