ಮೊದಲ ಬಾರಿಗೆ ಮಂಗಳೂರು ಮೂಲದ ಯಜ್ಞೇಶ್ ಶೆಟ್ಟಿಯಿಂದ ಹಾಲಿವುಡ್ ಚಿತ್ರ ನಿರ್ದೇಶನ

11:11 AM, Friday, October 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

yajneesh-shettyಮಂಗಳೂರು: ಬಾಲಿವುಡ್, ಟಾಲಿವುಡ್ ಅಥವಾ ಇತರ ಭಾಷೆಗಳ ನಿರ್ದೇಶಕ, ನಿರ್ಮಾಪಕರು ಕನ್ನಡ ಸಿನಿಮಾ ಮಾಡಿದ ಉದಾಹರಣೆಗಳಿವೆ. ಆದರೆ ಇದೇ ಮೊದಲ ಬಾರಿಗೆ ಮಂಗಳೂರು ಮೂಲದ ಯಜ್ಞೇಶ್ ಶೆಟ್ಟಿ ಎಂಬುವವರು ಹಾಲಿವುಡ್ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ.

ಮಂಗಳೂರು ಚೀತಾ ಎಂದೆ ಹೆಮ್ಮೆಯಿಂದ ಕರೆಯಿಸಿಕೊಳ್ಳುವ ಬಾಲಿವುಡ್ನ ಫೈಟ್ ಮಾಸ್ಟರ್, ಮಾರ್ಷಲ್ ಆರ್ಟಿಸ್ಟ್ ಚೀತಾ ಯಜ್ಞೇಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರವೊಂದರ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಯಜ್ಞೇಶ್ ಬಾಲಿವುಡ್ ಬಹುತೇಕ ಮೇರು ನಟರಿಗೆ ಫೈಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸಿದವರು. ಬಾಲಿವುಡ್ ಮಾತ್ರವಲ್ಲ ಹಾಲಿವುಡ್ಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಲಿವುಡ್ನಲ್ಲಿ ಪ್ರಖ್ಯಾತವಾದ ‘ಲೈಫ್ ಆಪ್ ದಿ ಪೈ’ ಸಿನಿಮಾದಲ್ಲಿ ಯಜ್ಞೇಶ್ ತರಬೇತಿ ನೀಡಿದ್ದ ಅವರ ಶಿಷ್ಯ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ತಾವೇ ಸ್ವತಃ ಹಾಲಿವುಡ್ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ.

‘ಹಿ ಈಸ್ ಬ್ಯಾಕ್’ ಎಂಬ ಹಾಲಿವುಡ್ ಚಿತ್ರಕ್ಕೆ ದುಬೈನ ಬುರ್ಜ್ ಖಲೀಫಾದಲ್ಲಿ ಸೆಪ್ಟೆಂಬರ್ 19 ರಂದು ಈಗಾಗಲೇ ಮುಹೂರ್ತ ಜರುಗಿದೆ. ಮಾರ್ಷಲ್ ಆರ್ಟ್ ದೊರೆ ಬ್ರೂಸ್ ಲೀ ಗೌರವಾರ್ಥ ಈ ಹಾಲಿವುಡ್ ಸಿನಿಮಾ ನಿರ್ದೇಶನಕ್ಕಿಳಿದಿರುವ ಚೀತಾ ಯಜ್ಞೇಶ್ ಶೆಟ್ಟಿ, ಈ ಸಿನಿಮಾಗೆ 2019 ರಲ್ಲಿ ಶೂಟಿಂಗ್ ಆರಂಭಿಸಿ ಅದೇ ವರ್ಷ ವಿಶ್ವಾದ್ಯಂತ ಬಿಡುಗಡೆಗೊಳಿಸಲು ಯೋಜಿಸಿದ್ದಾರೆ.

ಚಿತ್ರದಲ್ಲಿ ಅಪ್ಘಾನಿಸ್ಥಾನದ ಅಬ್ ಲೀ ನಾಯಕನಾಗಿ, ರಷ್ಯಾದ ಮಾಜಿ ಅಧ್ಯಕ್ಷರ ಪುತ್ರಿ ನಾಯಕಿಯಾಗಿ ನಟಿಸಲಿದ್ದಾರೆ. ಸುಮಾರು 80-100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಈ ಚಿತ್ರವನ್ನು ಸುರೇಶ್ ಶರ್ಮ, ಸುರೇಶ್ ಬಾಬು ಮಲ್ಗೆ ಮತ್ತು ಹಾಲಿವುಡ್ ಕಂಪನಿಯೊಂದು ನಿರ್ಮಾಣ ಮಾಡುತ್ತಿದೆ. ಅಮರ್ ಜಿತ್ ಶೆಟ್ಟಿ ಕೋ ಪ್ರೊಡ್ಯೂಸರ್ ಆಗಿದ್ದಾರೆ.

ಮಂಗಳೂರಿನ ಹಲವಾರು ಮಂದಿ ಬಾಲಿವುಡ್ನಲ್ಲಿ ಮಿಂಚುತ್ತಿದ್ದು, ಹಿಂದಿ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಮಂಗಳೂರಿನಿಂದ ಬಾಲಿವುಡ್ ಸಿನಿಮಾಕ್ಕೆ ಅಗ್ರ ಕೊಡುಗೆ ನೀಡಿದ ಚೀತಾ ಯಜ್ಞೇಶ್ ಶೆಟ್ಟಿ ಹಾಲಿವುಡ್ ಸಿನಿಮಾ ನಿರ್ದೇಶನ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English