ಮೊದಲ ಬಾರಿಗೆ ಮಂಗಳೂರು ಮೂಲದ ಯಜ್ಞೇಶ್ ಶೆಟ್ಟಿಯಿಂದ ಹಾಲಿವುಡ್ ಚಿತ್ರ ನಿರ್ದೇಶನ

Friday, October 5th, 2018
yajneesh-shetty

ಮಂಗಳೂರು: ಬಾಲಿವುಡ್, ಟಾಲಿವುಡ್ ಅಥವಾ ಇತರ ಭಾಷೆಗಳ ನಿರ್ದೇಶಕ, ನಿರ್ಮಾಪಕರು ಕನ್ನಡ ಸಿನಿಮಾ ಮಾಡಿದ ಉದಾಹರಣೆಗಳಿವೆ. ಆದರೆ ಇದೇ ಮೊದಲ ಬಾರಿಗೆ ಮಂಗಳೂರು ಮೂಲದ ಯಜ್ಞೇಶ್ ಶೆಟ್ಟಿ ಎಂಬುವವರು ಹಾಲಿವುಡ್ ಸಿನಿಮಾವೊಂದನ್ನು ನಿರ್ದೇಶಿಸಲು ಹೊರಟಿದ್ದಾರೆ. ಮಂಗಳೂರು ಚೀತಾ ಎಂದೆ ಹೆಮ್ಮೆಯಿಂದ ಕರೆಯಿಸಿಕೊಳ್ಳುವ ಬಾಲಿವುಡ್ನ ಫೈಟ್ ಮಾಸ್ಟರ್, ಮಾರ್ಷಲ್ ಆರ್ಟಿಸ್ಟ್ ಚೀತಾ ಯಜ್ಞೇಶ್ ಶೆಟ್ಟಿ ಅವರ ನಿರ್ದೇಶನದಲ್ಲಿ ಹಾಲಿವುಡ್ ಚಿತ್ರವೊಂದರ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಯಜ್ಞೇಶ್ ಬಾಲಿವುಡ್ ಬಹುತೇಕ ಮೇರು ನಟರಿಗೆ ಫೈಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸಿದವರು. […]

ಮಹಿಳೆಯರ ಭದ್ರತೆಯ ಬಗ್ಗೆ ಪುಸ್ತಕ ಬರೆದ ಯಜ್ಞೇಶ್ ಶೆಟ್ಟಿ

Tuesday, December 12th, 2017
yajnesh-shetty

ಮಂಗಳೂರು: ಮಹಿಳೆಯರ ಭದ್ರತೆಯ ಬಗ್ಗೆ ಖ್ಯಾತ ಮಾರ್ಷಲ್ ಆರ್ಟ್ಸ್ ತರಬೇತುದಾರರಾದ ಚೀತ ಯಜ್ಞೇಶ್ ಶೆಟ್ಟಿ ಪುಸ್ತಕವೊಂದನ್ನು ಬರೆದಿದ್ದಾರೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಮಹಿಳೆ ತನ್ನನ್ನು ತಾನು ಹೇಗೆ ರಕ್ಷಣೆ ಮಾಡಿಕೊಳ್ಳಬಹುದು ಎಂಬ ಬಗ್ಗೆ `ವುಮೆನ್ ಸೇಫ್ಟಿ’ ಪುಸ್ತಕದಲ್ಲಿ ತಿಳಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ ಯಜ್ಞೇಶ್ ಶೆಟ್ಟಿ, ಮುಂಬೈ ಹಾಗೂ ಬ್ಯಾಂಕಾಕ್‌‌ನಲ್ಲಿ ಪುಸ್ತಕ ಬಿಡುಗಡೆಗೊಳ್ಳಲಿದೆ. ದೇಶಾದ್ಯಂತ ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರಗಳನ್ನು ತೆರೆದಿರುವ ಯಜ್ಞೇಶ್, ಲೈಂಗಿಕ ಕಿರುಕುಳ ಸೇರಿದಂತೆ ಅನೇಕ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಲು ಮಹಿಳೆಯರು ಮಾರ್ಷಲ್ ಆರ್ಟ್ಸ್ […]