ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವ ಜನವರಿ 15 ರಿಂದ ನಡೆಯುತ್ತಿದ್ದು ಸಾವಿರಾರು ಭಕ್ತರು ಮಂಜುನಾಥನ ದರ್ಶನ ಪಡೆದರು. ಜಾತ್ರೋತ್ಸವದ ಅಂಗವಾಗಿ ಮಂಗಳವಾರ ಮನ್ಮಹಾರಥೋತ್ಸವ ನಡೆಯಿತು.
ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ದೇವರ ಉತ್ಸವಮೂರ್ತಿ ರಥಾರೋಹಣವಾಯಿತು. ಸಂಜೆ ಶ್ರೀಮನ್ಮಹಾರಥೋತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತಬಲಿ ಮತ್ತು ಕವಾಟ ಬಂಧನ ಜರಗಿತು.
ಜ. 23ರಂದು ಅವಭೃಥ ಉತ್ಸವ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಶ್ರೀ ಮಂಜುನಾಥ ದೇವರ ಕವಾಟೋದ್ಘಾಟನೆ ಮತ್ತು ಮಹಾಪೂಜೆ ಅನಂತರ ತುಲಾಭಾರ ಸೇವೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ, ತ್ರಿಶೂಲ ಸ್ನಾನ ನಡೆಯಲಿದೆ. ರಾತ್ರಿ 7.30ಕ್ಕೆ ಉತ್ಸವ ಬಲಿ, ಚಂದ್ರಮಂಡಲ ಉತ್ಸವ, ರಾತ್ರಿ 10.30ಕ್ಕೆ ಅವಭೃಥಸ್ನಾನ, ಧ್ವಜಾವರೋಹಣ ನಡೆಯಲಿದೆ.
Click this button or press Ctrl+G to toggle between Kannada and English