ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಯಡವನಾಡಿನ ಸೂಳೆಭಾವಿಯ ರಾಮು ತನ್ನ ಪತ್ನಿ ಗೌರಿ ಎಂಬಾಕೆಯನ್ನು ಕಳೆದ ಅಕ್ಟೋಬರ್ 12 ರಂದು ಕೊಲೆ ಮಾಡಿ ಪರಾರಿ ಆಗಿದ್ದ. ನಂತರ ಈತನನ್ನು ಬಂಧಿಸಿದ ಪೋಲೀಸರು ಸೋಮವಾರ ಕುಶಾಲನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ಕರೆತಂದಿದ್ದರು. ಈ ಸಂದರ್ಭ ಆರೋಪಿಯು ತಾನು ಮೂತ್ರ ಮಾಡಬೇಕೆಂದು ಪೋಲೀಸರಿಗೆ ತಿಳಿಸಿ ಕೈಗೆ ಹಾಕಿದ್ದ ಕೋಳ ಬಿಚ್ಚಿಸಿಕೊಂಡಿದ್ದ. ನಂತರ ಶೌಚಾಲಯದೊಳಗೆ ಹೋಗಿ ವೆಂಟಿಲೇಟರ್ ನ ಕಂಬಿ ಬಗ್ಗಿಸಿ ಅದರಿಂದ ಹೊರಗೆ ದಾಟಿ ಪರಾರಿಯಾಗಿದ್ದ .
ಈತನನ್ನು ಹುಡುಕಲು ಪೋಲೀಸರು ನಾಲ್ಕು ತಂಡವನ್ನು ರಚಿಸಿದ್ದರು. ಕುಶಾಲನಗರಕ್ಕೆ ಸಮೀಪದ ಮೂರು ಕಿಲೋಮೀಟರ್ ದೂರದಲ್ಲಿರುವ ಗುಡ್ಡೆಹೊಸೂರು ಸಮೀಪದ ತೆಪ್ಪದಕಂಡಿಯಲ್ಲಿ ಇಂದು ಬೆಳಿಗ್ಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ರಾಮುನನ್ನು ಸ್ಥಳೀಯ ನಿವಾಸಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿರುವ ರಫೀಕ್ ನೋಡಿದ್ದರು. ತಕ್ಷಣವೇ ಆತನನ್ನು ಹಿಡಿದು, ಪೊಲೀಸರಿಗೆ ಕರೆ ಮಾಡಿ ಒಪ್ಪಿಸಿದ್ದಾರೆ. ರಫೀಕ್ ಅವರ ಕಾರ್ಯವನ್ನು ಗಮನಿಸಿ ಕುಶಾಲನಗರ ಡಿವೈಎಸ್‍ಪಿ ಮುರಳೀಧರ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ರಫೀಕ್ ಅವರನ್ನು ಸನ್ಮಾನಿಸಿದ್ದಾರೆ.
Click this button or press Ctrl+G to toggle between Kannada and English