ಕನ್ನಡದ ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕೊರೋನಾಗೆ ಬಲಿ

Tuesday, April 27th, 2021
Ramu

ಬೆಂಗಳೂರು:  ಕನ್ನಡದ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ರಾಮು ಕೊರೋನಾಗೆ ಬಲಿಯಾಗಿದ್ದಾರೆ ಅವರು ಗೋಲಿಬಾರ್, ಎಕೆ 47, ಸಿಂಹದ ಮರಿಯಂತ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ಮಿಸಿದ್ದರು. ನಟಿ ಮಾಲಾಶ್ರೀ ಅವರ ಪತಿ ರಾಮು ಅವರ ಆರೋಗ್ಯದಲ್ಲಿ ಏರು ಪೇರು ಉಂಟಾದ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 52 ವರ್ಷದ ರಾಮು ಅವರಿಗೆ ಒಂದು ವಾರದ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ರಾಮು […]

ಮಡಿಕೇರಿ: ಕೊಲೆ ಆರೋಪಿಯೊಬ್ಬನನ್ನು ಪೋಲೀಸರಿಗೆ ಹಿಡಿದುಕೊಟ್ಟ ವ್ಯಕ್ತಿ ಗೆ ಸನ್ಮಾನ 

Wednesday, October 30th, 2019
Rafeeq

ಮಡಿಕೇರಿ:  ಸೋಮವಾರಪೇಟೆ ತಾಲೂಕಿನ ಯಡವನಾಡಿನ ಸೂಳೆಭಾವಿಯ ರಾಮು ತನ್ನ ಪತ್ನಿ ಗೌರಿ ಎಂಬಾಕೆಯನ್ನು ಕಳೆದ ಅಕ್ಟೋಬರ್‌ 12 ರಂದು ಕೊಲೆ ಮಾಡಿ ಪರಾರಿ ಆಗಿದ್ದ. ನಂತರ ಈತನನ್ನು ಬಂಧಿಸಿದ ಪೋಲೀಸರು ಸೋಮವಾರ ಕುಶಾಲನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು  ಪಡಿಸಲು ಪೊಲೀಸರು  ಕರೆತಂದಿದ್ದರು. ಈ ಸಂದರ್ಭ ಆರೋಪಿಯು ತಾನು ಮೂತ್ರ ಮಾಡಬೇಕೆಂದು ಪೋಲೀಸರಿಗೆ ತಿಳಿಸಿ ಕೈಗೆ ಹಾಕಿದ್ದ ಕೋಳ ಬಿಚ್ಚಿಸಿಕೊಂಡಿದ್ದ. ನಂತರ ಶೌಚಾಲಯದೊಳಗೆ ಹೋಗಿ  ವೆಂಟಿಲೇಟರ್‌ ನ ಕಂಬಿ ಬಗ್ಗಿಸಿ ಅದರಿಂದ ಹೊರಗೆ  ದಾಟಿ ಪರಾರಿಯಾಗಿದ್ದ . ಈತನನ್ನು ಹುಡುಕಲು  […]