ಹೈದರಾಬಾದ್ : ಭಾರತದ ಪ್ರತಿಯೊಬ್ಬ ನಾಗರೀಕನೂ ಹಿಂದುವೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ಧಾರೆ. ಇಂದು ಹೈದರಾಬಾದ್‍ನಲ್ಲಿ ಆರ್ಎಸ್ಎಸ್ನ ಕಾರ್ಯಾಗಾರದಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್, ಭಾರತದ ಎಲ್ಲಾ 130 ಕೋಟಿ ಜನರೂ ಹಿಂದೂಗಳೇ. ಯಾವುದೇ ಭಾಷೆ ಮಾತಾಡಲಿ; ಯಾವುದೇ ದೇವರನ್ನಾದರೂ ನಂಬಲಿ; ಭಾರತದಲ್ಲಿ ಯಾವುದೇ ಮೂಲೆಯಲ್ಲಾದರೂ ನೆಲೆಸಿರಲಿ ಎಲ್ಲರೂ ಹಿಂದುಗಳೇ ಎಂಬ ಸಂದೇಶ ಸಾರಿದ್ದಾರೆ.
ಭಾರತದ ಜಲ, ಕಾಡು, ಪ್ರಾಣಿ, ಮಣ್ಣನ್ನು ಹಿಂದೂ ಪ್ರೀತಿಸುತ್ತಾನೆ. ನಿಜವಾದ ಭಾರತೀಯ ಎಲ್ಲವನ್ನು ಸ್ವೀಕರಿಸುತ್ತಾನೆ. ಅತೀ ದೊಡ್ಡ ಮಾನವಸಂಸ್ಕೃತಿಯನ್ನು ಸ್ವೀಕರಿಸುತ್ತಾನೆ. ಅಂಥವರು ಎಲ್ಲರೂ ಭಾರತದ ಹಿಂದುಗಳಾಗಿರುತ್ತಾರೆ ಎಂದು ಮೋಹನ್ ಭಾಗವತ್
ನಮ್ಮ ಭಾರತ ಸಾಂಪ್ರದಾಯಿಕ ಹಿಂದೂ ದೇಶ. ಇಲ್ಲಿ ಹಿಂದುತ್ವವಿದೆ. ವೈವಿಧ್ಯತೆಯಲ್ಲಿ ಏಕತೆ ಕಾಣುತ್ತೇವೆ. ಇದು ನಮ್ಮ ರಾಷ್ಟ್ರದ ಪ್ರಸಿದ್ಧ ವಾಕ್ಯವೂ ಹೌದು. ಭಾರತ ಇದಕ್ಕಿಂತ ಒಂದು ಹೆಜ್ಜೆ ಮುಂದಿದೆ. ಭಾರತೀಯರು ಯಾವುದೇ ಧರ್ಮ ಮತ್ತು ಜಾತಿ ಬಗ್ಗೆ ಯೋಚಿಸದೆ ಕೇವಲ ಹಿಂದೂ ಸಮಾಜದ ಭಾಗವಾಗಿದ್ದಾರೆ ಎಂದು ಬಣ್ಣಿಸಿದರು.
ಆರ್ಎಸ್ಎಸ್ 130 ಕೋಟಿ ಪ್ರಜೆಗಳನ್ನು ಒಂದೇ ದೃಷ್ಟಿಯಲ್ಲಿ ನೋಡುತ್ತದೆ. ನಮ್ಮ ಸಂಘವೂ ಅವರ ಉನ್ನತಿಯನ್ನೇ ಬಯಸುತ್ತದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಹಿಂದು ಬಾಂಧವ ಆಗಿದ್ದಾನೆ. ಭಾರತದ ಸಂಸ್ಕೃತಿಯನ್ನು ನಂಬುವವನು ಹಿಂದೂ ಆಗಿರುತ್ತಾನೆ ಎಂದರು.
Click this button or press Ctrl+G to toggle between Kannada and English