ಮಡಿಕೇರಿಯಲ್ಲಿ ಜೀವ ವಿಮಾ ನಿಗಮದ ಪ್ರತಿನಿಧಿಗಳ ಪ್ರತಿಭಟನೆ

11:16 AM, Wednesday, January 22nd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

LIC-Protest

ಮಡಿಕೇರಿ : ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಸೇವಾ ತೆರಿಗೆಯನ್ನು ರದ್ದುಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೀವವಿಮಾ ನಿಗಮದ ಪ್ರತಿನಿಧಿಗಳ ಒಕ್ಕೂಟದ ಮಡಿಕೇರಿ ಖಾಖೆ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಎಲ್‌ಐಸಿ ಪ್ರಧಾನ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಪ್ರತಿನಿಧಿಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಪ್ರತಿನಿಧಿಗಳ ಮತ್ತು ಪಾಲಿಸಿದಾರರ ಹಿತಕ್ಕಾಗಿ ಜಿಲ್ಲೆಯಾದ್ಯಂತ ಮೂರು ದಿನಗಳ ಕಾಲ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಅದರಂತೆ ಎಜೆಂಟ್ ರೆಸ್ಟ್ ಡೇ ಘೋಷಣೆಯೊಂದಿಗೆ ಧರಣಿ ನಡೆಸಲಾಗುತ್ತಿದೆ ಎಂದರು.

ಸೇವಾ ತೆರಿಗೆಯನ್ನು ರದ್ದುಗೊಳಿಸಬೇಕು, ಪ್ರತಿನಿಧಿಗಳ ಗುಂಪುವಿಮೆ ಮತ್ತು ಗ್ರಾಜ್ಯುವಿಟಿ ಹೆಚ್ಚಿಸಬೇಕು, ನೀಡುವ ಸೌಲಭ್ಯ ಹೆಚ್ಚಿಸಬೇಕು ಮತ್ತು ಕ್ಲಬ್ ಸಿಬ್ಬಂದಿಗಳ ಪಾಲಿಸಿಗಳ ಮಿತಿಯನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸಿದರು.

ಒಕ್ಕೂಟದ ಕಾರ್ಯದರ್ಶಿ ಸಿ.ಯು.ಭೀಮಯ್ಯ, ಖಜಾಂಚಿ ಬಿ.ಕೆ.ಸವಿತ, ಮಾಜಿ ಅಧ್ಯಕ್ಷ ಎಂ.ಕೆ.ನಾಚಪ್ಪ, ಕೆ.ಆರ್.ಬೆಳ್ಯಪ್ಪ, ವೈ.ಡಿ.ಮೋಹನ್, ನಿರ್ದೇಶಕರಾದ ಎಸ್.ಸಿ.ಸತೀಶ್, ಪ್ರೇಮ್‌ಕುಮಾರ್, ಕವಿತ, ರೋಹಿನಾ, ನವೀನ್ ಕುಮಾರ್ ಮತ್ತಿತರ ಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English