ಮಡಿಕೇರಿ : ಭಾರತೀಯ ಜೀವವಿಮಾ ನಿಗಮದ (ಎಲ್‌ಐಸಿ) ಸ್ಪಲ್ವ ಪಾಲನ್ನು ಐಪಿಒ ಮೂಲಕ ಷೇರು ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಭಾರತೀಯ ಜೀವವಿಮಾ ನಿಗಮ ಮಡಿಕೇರಿ ಶಾಖೆಯ ಸಿಬ್ಬಂದಿಗಳ ಪ್ರತಿಭಟನೆ ಎರಡನೇ ದಿನವೂ ನಡೆಯಿತು.
ನಗರದ ಎಲ್‌ಐಸಿ ಪ್ರಧಾನ ಕಚೇರಿ ಎದುರು ಒಂದು ಗಂಟೆ ಕಾಲ ಕರ್ತವ್ಯ ಸ್ಥಗಿತಗೊಳಿಸಿ ಪ್ರತಿಭಟಿಸಿದ ಸಿಬ್ಬಂದಿ ವರ್ಗ ಹಾಗೂ ಪ್ರತಿನಿಧಿಗಳು ಎಲ್‌ಐಸಿ ಖಾಸಗೀಕರಣ ಮಾಡದಂತೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ)ದ ಷೇರು ಮಾರಾಟ ಮಾಡುವ ಪ್ರಸ್ತಾಪ ಮಾಡಿದ್ದು, ಇದನ್ನು ತಕ್ಷಣ ಕೈಬಿಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೀವವಿಮಾ ನೌಕರರ ಒಕ್ಕೂಟದ ಅಧ್ಯಕ್ಷ ಶಶಿಕಿರಣ್, ಕಾರ್ಯದರ್ಶಿ ಎಂ.ಎಂ.ಪ್ರವೀಣ್, ಅಭಿವೃದ್ಧಿ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ನಟರಾಜ್, ಜೀವವಿಮಾ ನಿಗಮದ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಚಾಮ, ನಿರ್ದೇಶಕ ಪ್ರೇಮ್ ಕುಮಾರ್, ಎಸ್.ಸಿ.ಸತೀಶ್ ಮತ್ತಿತರ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English