ಮಹಾತ್ಮಾ ಗಾಂಧೀಜಿಯವರು ಕಟ್ಟಾ ಹಿಂದೂವಾದಿಯಾಗಿದ್ದರು : ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​

1:07 PM, Tuesday, February 18th, 2020
Share
1 Star2 Stars3 Stars4 Stars5 Stars
(No Ratings Yet)
Loading...

RSS

ನವದೆಹಲಿ : ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿ ಕಟ್ಟಾ ಹಿಂದೂವಾದಿಯಾಗಿದ್ದರು ಎಂದು ಆರ್ಎಸ್ಎಸ್ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಎನ್ಸಿಇಆರ್ಟಿಯ ಮಾಜಿ ನಿರ್ದೇಶಕ ಜೆ.ಎಸ್.ರಜಪೂತ್ ಅವರ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ಗಾಂಧೀಜಿ ಭಾರತವನ್ನು ಅರಿತುಕೊಳ್ಳುವ ಸಲುವಾಗಿ ಪೂರ್ತಿ ದೇಶವನ್ನು ಸುತ್ತಿದರು. ಅವರು ಹಿಂದೂ ಎಂದು ಹೇಳಿಕೊಳ್ಳಲು ಎಂದೂ ಅಂಜುತ್ತಿರಲಿಲ್ಲ. ನಾನು ಕಟ್ಟಾ ಸನಾತನೀ ಹಿಂದೂ ಎಂದು ಅವರು ಹೇಳಿಕೊಂಡಿದ್ದರು. ಹಾಗೆಯೇ ಬೇರೆ ಧರ್ಮಗಳನ್ನೂ ಗೌರವಿಸುತ್ತಿದ್ದರು.” ಎಂದು ಹೇಳಿದರು.

ಗಾಂಧೀಜಿಯನ್ನು ಇಂದಿನವರಿಗೆ ಹೋಲಿಕೆ ಮಾಡುತ್ತಾ ಮಾತನಾಡಿದ ಆರ್ಎಸ್ಎಸ್ನ ಮುಖ್ಯಸ್ಥ, “ಗಾಂಧೀಜಿಯವರ ಹಲವು ಚಳವಳಿಗಳು ಸರಿಯಿರಲಿಲ್ಲ. ಸರಿಯಾದ ಉದ್ದೇಶವಿತ್ತಾದರೂ ಸರಿಯಾದ ಮಾರ್ಗವನ್ನು ಅವರು ಅನುಸರಿಸಲಿಲ್ಲ. ಅಂತಹ ತಪ್ಪಿನ ಹೊಣೆಯನ್ನು ಅವರು ಹೊರುತ್ತಿದ್ದರು ಮತ್ತು ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದರು. ಆದರೆ ಈಗ ಹಾಗೆ ಉಳಿದಿಲ್ಲ. ಅಧಿಕಾರಿ ವರ್ಗದವರು ಹೋರಾಟ ನಡೆಸುತ್ತಾರೆ. ಅವರ ಹೋರಾಟಕ್ಕೆ ಯಾರೋ ಕಾರ್ಯಕರ್ತರು ಜೈಲು ಅನುಭವಿಸಬೇಕಾಗುತ್ತದೆ. ಆದರೆ ಅಂತಹ ತಪ್ಪಿನ ಹೊಣೆಯನ್ನು ಯಾವುದೇ ಅಧಿಕಾರಿಯಾಗಲೀ ಅಥವಾ ರಾಜಕಾರಣಿಯಾಗಲೀ ಹೊರುವುದಿಲ್ಲ. ಪಶ್ಚಾತ್ತಾಪವನ್ನೂ ಪಡುವುದಿಲ್ಲ” ಎಂದು ಹೇಳಿದರು.

ಗಾಂಧೀಜಿ ಕಂಡ ಭಾರತದ ಕನಸು ನನಸಾಗುತ್ತದೆ. ಈಗಿನ ಯುವಜನತೆ ಈಗಲ್ಲದಿದ್ದರೂ ಇನ್ನು 20 ವರ್ಷ ಬಿಟ್ಟಾದರೂ ಅದನ್ನು ನೆರವೇರಿಸುತ್ತದೆ ಎಂದು ಅವರು ಹೇಳಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English