ಪಣಜಿ : ಇಂದು ಒಂದೆಡೆ ಹಿಂದವೀ ಸ್ವರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸುತ್ತಿರುವಾಗಲೇ ಗೋವಾ ರಾಜ್ಯದ ಉಚ್ಚ ಮಾಧ್ಯಮಿಕ ಪಠ್ಯಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಛತ್ರಪತಿ ಸಂಭಾಜಿ ಮಹಾರಾಜರ ಅವಮಾನವನ್ನು ಮಾಡುವ ಲೇಖನ ಇರುವುದು ಬಹಿರಂಗವಾಗಿದೆ, ಇದು ಅತ್ಯಂತ ಖೇದಕರವಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಇದನ್ನು ತೀವ್ರ ಶಬ್ಧಗಳಲ್ಲಿ ಖಂಡಿಸುತ್ತದೆ. ನಮ್ಮ ರಾಜರ ಬಗೆಗಿನ ಈ ರೀತಿಯ ಸುಳ್ಳು ಇತಿಹಾಸವನ್ನು ಯಾವುದೇ ಹಿಂದೂ ಸಹಿಸುವುದಿಲ್ಲ. ಈ ಇತಿಹಾಸದ ಪುಸ್ತಕವನ್ನು ಸರಕಾರ ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ಎಲ್ಲಾ ಶಿವಾಜಿಪ್ರೇಮಿಗಳು ರಸ್ತೆಯಲ್ಲಿಳಿದು ತೀವ್ರವಾಗಿ ಪ್ರತಿಭಟನೆಯನ್ನು ಮಾಡುವರು, ಎಂದು ಹಿಂದೂ ಜನಜಾಗೃತಿ ಸಮಿತಿಯ ಗೋವಾ ರಾಜ್ಯ ಸಮನ್ವಯಕರಾದ ಡಾ. ಮನೋಜ ಸೋಲಂಕಿಯವರು ಎಚ್ಚರಿಕೆಯನ್ನು ನೀಡಿದ್ದಾರೆ.
ಗೋವಾ ಸರಕಾರವು 11 ನೇ ತರಗರತಿಯ ಇತಿಹಾಸದ ಪಠ್ಯಪುಸ್ತಕಕ್ಕೆ ಒಂದು ಪುರವಣಿಯನ್ನು ‘ಗೋವಾದ ಇತಿಹಾಸ’ ಈ ಹೆಸರಿನಲ್ಲಿ ಜೋಡಿಸಲಾಗಿದೆ. ಅದರಲ್ಲಿ ಗೋವಾದಲ್ಲಿಯ ಬಾರ್ದೆಶ ತಾಲೂಕಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ದಾಳಿಯನ್ನು ಮಾಡಿ ಸತತ ಮೂರು ದಿನ ಗ್ರಾಮವನ್ನು ಲೂಟಿಗೈದರು, ಬೆಂಕಿ ಹಚ್ಚಿದರು, ಸಣ್ಣ ಮಕ್ಕಳನ್ನು ಹಾಗೂ ಮಹಿಳೆಯರನ್ನು ಬಂಧನದಲ್ಲಿರಿಸಿದರು ಹಾಗೂ ಅದರಲ್ಲಿ ಕೆಲವರನ್ನು ಕೊಂದರು, ಹೀಗೆ ಸುಳ್ಳು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಗೌರವವನ್ನು ಹಾಳು ಮಾಡುವ ಲೇಖನವನ್ನು ಮಾಡಿದ್ದಾರೆ. ‘ಪರಸ್ತ್ರೀ ತಾಯಿಯ ಸಮಾನ’ ಈ ಧರ್ಮದ ವಚನಕ್ಕನುಸಾರ ವರ್ತಿಸುವ ಹಾಗೂ ಶತ್ರುವಿನ ಸ್ತ್ರೀಯರನ್ನೂ ಗೌರವದಿಂದ ಮರಳಿಕಳುಹಿಸಿದ ಛತ್ರಪತಿ ಶಿವಾಜಿ ಮಹಾರಾಜರ ಚರಿತ್ರೆಯ ಮೇಲೆ ಈ ರೀತಿಯ ಕೆಸರೆರಚುವುದು, ಇದೊಂದು ದೊಡ್ಡ ಅಪರಾಧವೇ ಆಗಿದೆ. ಆದ್ದರಿಂದ ಇಂತಹ ಬರಹವನ್ನು ಬರೆಯುವ ಲೇಖಕ ಹಾಗೂ ಅದನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ ಅಧಿಕಾರಿಗಳ ಮೇಲೆ ಅಪರಾಧವನ್ನು ದಾಖಲಿಸಿ ಅವರ ಮೇಲೆ ತಕ್ಷಣ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು, ಎಂಬ ಬೇಡಿಕೆಯನ್ನು ಡಾ. ಸೋಲಂಕಿ ಇವರು ಈ ಸಮಯದಲ್ಲಿ ಬೇಡಿಕೆಯನ್ನು ಮಾಡುದರು. ಈ ರೀತಿ ಇದೇ ಮೊದಲನೇ ಬಾರಿಯಾಗಿರದೇ ೨೦೦೮ ರಲ್ಲಿ ಇದೇ ರೀತಿಯ ಎನ್.ಸಿ.ಈ.ಆರ್.ಟಿ.ಯ ಪಠ್ಯಪುಸ್ತಕದಲ್ಲಿ ಛ. ಶಿವಾಜಿ ಮಹಾರಾಜರ ಅವಮಾನವನ್ನು ಮಾಡಲಾಗಿತ್ತು, ಅದರ ವಿರುದ್ಧ ತೀವ್ರ ಪ್ರತಿಭಟನೆಯನ್ನು ಮಾಡಿದ್ದರಿಂದ ಸರಕಾರವು ಆ ಪುಸ್ತಕವನ್ನು ಹಿಂಪಡೆಯಿತು. ಸರಕಾರ ಈಗಲೂ ಈ ಪುಸ್ತಕದ ಪುರವಣಿಯನ್ನು ಹಿಂಪಡೆಯದೇ ಇದ್ದಲ್ಲಿ, ಪುನಃ ಅದೇ ಪ್ರತಿಭಟನೆಯ ಪುರಾವೃತ್ತಿಯಾಗಲಿದೆ, ಎಂದೂ ಡಾ. ಸೋಲಂಕಿಯವರು ತಿಳಿಸಿದ್ದಾರೆ.
ಈ ಪ್ರಕರಣದ ಕೂಡಲೇ ಕ್ರಮಕೈಗೊಳ್ಳಬೇಕು, ಅದಕ್ಕಾಗಿ ಇಂದು ಮಧ್ಯಾಹ್ನ ೧೨ ಗಂಟೆಗೆ ಗೋವಾ ರಾಜ್ಯ ಶಿಕ್ಷಣ ಸಂಚಾಲಕರಾದ ವಂದನಾ ರಾವ ಇವರನ್ನು ಶಿವಾಜಿಪ್ರೇಮಿ ಸಂಘಟನೆಗಳ ನಿಯೋಗವು ಭೇಟಿಯಾಗಿ ಮನವಿಯನ್ನು ನೀಡಿತು. ಈ ಸಮಯದಲ್ಲಿ ಶಿಕ್ಷಣ ಸಂಚಾಲಕರು ‘ಇದು ಅತ್ಯಂತ ಗಂಭೀರದ ವಿಷಯವಾಗಿದೆ. ಮುಂಬರುವ ಪಠ್ಯಕ್ರಮದಲ್ಲಿ ಈ ಅಂಶವನ್ನು ಕೂಡಲೇ ತೆಗೆಯುವೆವು, ಅದೇರೀತಿ ಇತರ ಯಾವುದೇ ಪಠ್ಯಕ್ರಮದಲ್ಲಿ ಈ ರೀತಿಯಲ್ಲಿ ಕಂಡುಬಂದಲ್ಲಿ ಕೂಡಲೇ ನಮಗೆ ತಿಳಿಸಿರಿ, ಅದರ ಮೇಲೆಯೂ ಕ್ರಮಕೈಗೊಳ್ಳುವೆವು’, ಎಂದು ಆಶ್ವಾಸನೆಯನ್ನು ನೀಡಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತ್ಯವಿಜಯ ನಾಯಿಕ್, ಸನಾತನ ಸಂಸ್ಥೆಯ ಸೌ. ಶುಭಾ ಸಾವಂತ ಹಾಗೂ ಸೌ. ಶಾಂತಿ ಮಾಮಲೆದರ, ‘ಸ್ವರಾಜ್ಯ ಗೋಮಂತಕ’ನ ಮುಖ್ಯಸ್ಥ ಶ್ರೀ. ಪ್ರಶಾಂತ ವಾಳಕೆ ಹಾಗೂ ಶ್ರೀ. ಮಹೇಶ ಶಿರಗಾವಕರ, ಗೋಮಾಂತಕ ದೇವಸ್ಥಾನ ಮಹಾಸಂಘದ ಶ್ರೀ. ಭಾಯಿ ಪಂಡಿತ, ಶಿವಾಜಿಪ್ರೇಮಿ ಶ್ರೀ. ಮಯುರೇಶ ಕುಷ್ಟೆ, ಪರ್ವರಿಯ ಧರ್ಮಪ್ರೇಮಿ ಶ್ರೀ. ಕೇಶವ ಚೋಡನಕರ, ಅದೇರೀತಿ ಶ್ರೀ. ಜಯೇಶ ಥಾಳಿ, ಶ್ರೀ. ದಯಾನಂದ ಗಾವಕರ, ಶ್ರೀ. ಅಂಕುಶ ನಾಯಿಕ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English