ಹೆತ್ತವಳು ತಾಯಿ
ಅವಳನ್ನ ನೂರುಕಾಲ ನೀ ಕಾಯಿ,
ನಮಗುಸಿರು ನೀಡಿದಳು ತಾಯಿ
ಅವಳುಸಿರು ಇರೊವರೆಗೂ ನೀ ಕಾಯಿ. // 1//
ಒಂಬತ್ತು ತಿಂಗಳು ಹೆತ್ತು ಹೊತ್ತು
ಸಲುವಿ, ಸಾಕಿದಳು ತಾಯಿ,
ತೊಂಭತ್ತು ವರುಷ ಅವಳನ್ನ
ಪ್ರೀತಿ, ಪ್ರೇಮದಿ ನೀ ಕಾಯಿ. //2//
ಹೆತ್ತವಳು ತಾಯಿ
ಕೈ ತುತ್ತು ನೀಡಿದ ತಾಯಿ,
ಅವಳನ್ನ ನೀನು ಮರೆಯದಿರು
ಮೂರೊತ್ತು ಅನ್ನ ನೀಡುತಿರು. //3//
ನಮಗೆ ಜನ್ಮವ ಕೊಟ್ಟು
ತಾ ಮರುಜನ್ಮ ಪಡೆದಳು ತಾಯಿ,
ಅವಳನ್ನ ಅವಮಾನಿಸದೆ ನೋಯಿಸದೆ
ನೂರುಕಾಲ ಸುಖದಿ ನೀ ಕಾಯಿ. // 4//
ಹೆತ್ತವಳು ತಾಯಿ
ಕಾಮಧೇನಿನ ಸಹನೆಯುಳ್ಳ ತಾಯಿ,
ಅವಳು ತ್ಯಾಗಕ್ಕೆ ಮಹಾತಾಯಿ
ಅವಳನ್ನ ನೂರುಕಾಲ ನೀ ಕಾಯಿ. //5//
ರಚನೆ:
ಮಂಜುನಾಥ ಗುತ್ತೇದಾರ.
ಸಾ//ದೇವಸೂಗೂರು.
ತಾ//ಜಿ//ರಾಯಚೂರು.
Click this button or press Ctrl+G to toggle between Kannada and English