ಮಂಗಳೂರು: ಪಿಎಂ ಫಂಡ್ ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗ ಮಾಡಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ವೈದ್ಯರು, ದಾದಿಯರಿಗೆ ಸರಕಾರ ಸಂಬಳ ಬಿಡುಗಡೆ ಮಾಡಿಲ್ಲ. ಸರಕಾರ ಕೋವಿಡ್ ವಿಚಾರದಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದೆ ಎಂದು ಮಾಜಿ ಸಚಿವ ಯು ಟಿ ಖಾದರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ವೈದ್ಯರು ಅವರ ಜೀವ ಪಣಕಿಟ್ಟು ಹೆಚ್ಚುವರಿ ಕೆಲಸ ಮಾಡಿರುತ್ತಾರೆ. ಕೋವಿಡ್-19 ಸೋಂಕು ನಿರ್ಮೂಲನೆಗೆ 15 ಸಾವಿರ ದುಡಿಯುವ ವರ್ಗ ಇದ್ದಾರೆ. ಇವರಿಗೆಲ್ಲ ತಕ್ಷಣ ವೇತನ ನೀಡಬೇಕು, ಕೋವಿಡ್-19 ವಾರಿಯರ್ ಎಂದರೆ ಅಷ್ಟೇ ಸಾಲಲ್ಲ. ಆಶಾ ಕಾರ್ಯಕರ್ತೆ ಯರಿಗೂ ಸರಿಯಾಗಿ ಹಣ ಬಿಡುಗಡೆ ಮಾಡಿಲ್ಲ. ಸಿಎಂ ಹೆಚ್ಚುವರಿ ಕೊಡುತ್ತೇವೆ ಅಂತಾರೇ, ಮೊದಲು ಕೊಡುವ ಸಂಬಳ ಕೊಡಿ ಎಂದಿದ್ದಾರೆ.
ಎರಡು ತಿಂಗಳು ಸಮಯ ಇಲ್ಲದೆ ವೈದ್ಯರು ಕೆಲಸ ಮಾಡಿದ್ದಾರೆ. ಸರ್ಕಾರ ತಕ್ಷಣ ವೈದ್ಯರಿಗೆ ಸಂಬಳ ನೀಡದಿದ್ರೆ ಕಾಂಗ್ರೆಸ್ ನಿಂದ ಪ್ರತಿಭಟನೆ ಮಾಡಲಾಗುವುದು ಎಂದು ಯುಟಿ ಖಾದರ್ ಎಚ್ಚರಿಸಿದರು.
Click this button or press Ctrl+G to toggle between Kannada and English