ಬಿಲ್ಲವರ ಅಸೋಷಿಯೇಶನ್ ಮುಂಬಯಿ, 166ನೇ ಶ್ರೀ ನಾರಾಯಣ ಗುರುಜಯಂತಿ ಆಚರಣೆ

4:59 PM, Saturday, September 5th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

billavaMumbai ಮುಂಬಯಿ : ಮಹಾನಗರದ ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲೊಂದಾದ ಬಿಲ್ಲವರ ಅಸೋಷಿಯೇಶನ್ ಮುಂಬಯಿ, ಇದರ ವತಿಯಿಂದ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ಶ್ರೀ ನಾರಾಯಣ ಗುರುಗಳ 166 ಜಯಂತಿಯನ್ನು ಸೆ. 2ರಂದು ಆಚರಿಸಲಾಯಿತು.

ನಾರಾಯಣ ಗುರುಗಳ ನಾಮಸ್ಮರಣೆ, ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಮಧ್ಯಾಹ್ನ ನಡೆದ ಮಹಾಪೂಜೆಯನ್ನು ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಶಾಂತಿಯವರು ನೆರವೇರಿಸಿದರು.

billava Mumbaiಬಿಲ್ಲವರ ಅಸೋಷಿಯೇಶನ್ ನ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಯವರ ಅಧ್ಯಕ್ಷರೆಯಲ್ಲಿ ನಡೆದ ಈ ಸರಳ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕಿನ ನೂತನ ಕಾರ್ಯಾಧ್ಯಕ್ಷ ಉಪ್ಪೂರು ಶಿವಾಜಿ ಪೂಜಾರಿ, ಬ್ಯಾಂಕಿನ ಸಿ.ಇ.ಓ. ಹಾಗೂ ಎಂ.ಡಿ. ವಿದ್ಯಾನಂದ ಎಸ್ ಕರ್ಕೇರ ಮತ್ತು ಜಂಟಿ ಎಂ.ಡಿ. ದಿನೇಶ್ ಸಾಲ್ಯಾನ್ ಇವರನ್ನು ಸಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಬಿಲ್ಲವರ ಅಸೋಷಿಯೇಶನ್ ನ ಉಪಾಧ್ಯಕ್ಷರುಗಳಾದ ಶಂಕರ್ ಡಿ ಪೂಜಾರಿ, ಹರೀಶ್ ಜಿ. ಅಮೀನ್, ದಯಾನಂದ ಆರ್ ಪೂಜಾರಿ, ಶ್ರೀನಿವಾಸ ಕರ್ಕೇರ, ಜೊತೆ ಕಾರ್ಯದರ್ಶಿ ಹರೀಶ್ ಡಿ ಸಾಲ್ಯಾನ್, ಅಕ್ಷಯ್ ಎ ಪೂಜಾರಿ, ರಾಜೇಶ್ ಜೆ ಬಂಗೇರ, ಮೋಹನ್ ಡಿ ಪೂಜಾರಿ, ಭಾರತ್ ಬ್ಯಾಂಕಿನ ನಿರ್ದೇಶಕರಾದ ಎಲ್ ವಿ ಅಮೀನ್, ಜ್ಯೋತಿ ಎಸ್ ಸುವರ್ಣ, ಗಂಗಾಧರ ಜೆ ಪೂಜಾರಿ, ಭಾಸ್ಕರ್ ಸಾಲ್ಯಾನ್. ಸೂರ್ಯಕಾಂತ್ ಸುವರ್ಣ, ಅಸೋಷಿಯೇಶನಿನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಉಳ್ಳಾಲ್, ಮಾಜಿ ಕಾರ್ಯಾಧ್ಯಕ್ಷ ಶಕುಂತಳಾ ಕೋಟ್ಯಾನ್, ಯುವ ವಿಭಾಗದ ಕಾರ್ಯಾಧ್ಯಕ್ಷ ನಾಗೇಶ್ ಕೋಟ್ಯಾನ್, ಮಾಜಿ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರು, ಗುರುನಾರಾಯಣ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಅಶೋಕ್ ಸಸಿಹಿತ್ತ್ಲು, ಭಾರತ್ ಬ್ಯಾಂಕಿನ ಮಹಾ ಪ್ರಭಂಧಕರುಗಳಾದ ವಾಸುದೇವ ಸಾಲ್ಯಾನ್, ವಿಶ್ವನಾಥ ಸುವರ್ಣ, ಮಹೇಶ್ ಕೋಟ್ಯಾನ್, ಡಿ.ಜಿ.ಎಮ್. ಜನಾರ್ಧನ ಪೂಜಾರಿ, ನಿವೃತ್ತ ಅಧಿಕಾರಿ ಶೋಭಾ ದಯಾನಂದ್ ಹಾಗೂ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೊರೋನಾದಿಂದಾಗಿ ಸರಕಾರದ ಆಜ್ನೆಯಂತೆ ಸರಳ ರೀತಿಯಲ್ಲಿ ಸಮಾರಂಭವನ್ನು ಆಚರಿಸಲಾಗಿದ್ದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಬಿಲ್ಲವರ ಅಸೋಷಿಯೇಶನ್ ಮುಂಬಯಿಯ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿಯವರು ಕೊರೋನಾ ಮಹಾಮಾರಿಯಿಂದಾಗಿ ಜನರಿಗೆ ಆಗುತ್ತಿರುವ ಮಿತಿಮೀರಿದ ತೊಂದರೆಯಿಂದ ಆದಷ್ಟು ಬೇಗನೆ ಮುಕ್ತಿ ದೊರಕಲಿ ಎಂದು ನಾವು ಪ್ರಾರ್ಥಿಸೋಣ ಎಂದರು.

ವರದಿ : ಈಶ್ವರ ಎಂ ಐಲ್
ಚಿತ್ರ : ದಿನೇಶ್ ಕುಲಾಲ್

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English