ಹುಬ್ಬಳ್ಳಿ: ಹುಬ್ಬಳ್ಳಿ-ಕಾರವಾರ ರಸ್ತೆಯ ಚಾಟ್ನಿ ಕಾಂಪ್ಲೆಕ್ಸ್ ಬಳಿ ಅಕ್ಟೋಬರ್ 01 ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪವರ್ ಟಿವಿ ಕ್ಯಾಮರಾಮನ್ ಸುನೀಲ್ ಪಾಚಂಗೆ (28) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಆರಂಭದಲ್ಲಿ ಟಿ.ವಿ.9 ಸುದ್ದಿ ಸಂಸ್ಥೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದ ಸುನೀಲ್, ನಂತರ ಪವರ್ ಟಿ.ವಿ ಯಲ್ಲಿ ಕ್ಯಾಮರಾಮನ್ ಆಗಿ ಕೆಲಸಕ್ಕೆ ಸೇರಿದ್ದರು. ಹುಬ್ಬಳ್ಳಿಯ ಸಿದ್ಧಾರೂಡ ಮಠದ ಇಂದ್ರಪ್ರಸ್ಥ ನಗರದಲ್ಲಿ ವಾಸವಿದ್ದ ಅವರು ತಾಯಿ ಉಮಾ ಗೋಪಾಲ್ ಪಾಚಂಗೆ, ಸಹೋದರ ವಿನಾಯಕ ಪಾಚಂಗೆ ಅವರನ್ನು ಅಗಲಿದ್ದಾರೆ.
ಸುನಿಲ್ ಅವರ ತಲೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು. ವೈದ್ಯರು ಸಾಕಷ್ಟು ಪ್ರಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರು ಮೃತಪಟ್ಟಿದ್ದಾರೆ ಎಂದು ಕಿಮ್ಸ್ ವೈದ್ಯರು ತಿಳಿಸಿದ್ದಾರೆ.
ಹುಬ್ಬಳ್ಳಿ ಕಾರ್ಯನಿರತ ಪತ್ರಕರ್ತ ಸಂಘ ಸಹ ಮೃತರ ಕುರಿತಾಗಿ ಶೋಕ ವ್ಯಕ್ತಪಡಿಸಿದೆ.
Click this button or press Ctrl+G to toggle between Kannada and English