ಮಂಗಳೂರು : ಅತ್ತಾವರದಲ್ಲಿರುವ ಬಬ್ಬುಸ್ವಾಮಿ ದೈವಸ್ಥಾನ ದಲ್ಲಿ ದುಷ್ಕರ್ಮಿಗಳು ಪ್ರವೇಶಿಸಿ ದೇವರ ಹುಂಡಿಯಲ್ಲಿ “ಪ್ರಭು ಏಸು ಕ್ರಿಸ್ತನು ಮಾತ್ರ ಆರಾಧನೆ ಹೊಂದಲು ಸೂಕ್ತ ವ್ಯಕ್ತಿ”, “ಹಿಂದೂಗಳನ್ನು ಸಾಯಿಸಬೇಕು” ಎಂಬ ಬರಹಗಳಿರುವ ನಕಲಿ ನೋಟುಗಳನ್ನು ಹಾಕಿರುವಂತಹ ಆಘಾತಕಾರಿ ಘಟನೆ ನಡೆದಿದೆ. ಹಿಂದೂಗಳ ಧಾರ್ಮಿಕ ಭಾವನೆಗೆ ನೋಯಿಸುವ ದುರುದ್ದೇಶದಿಂದಲೇ ಈ ರೀತಿ ದುಷ್ಕೃತ್ಯ ಮಾಡಲಾಗಿದೆ, ಯಾವುದೇ ಚರ್ಚ್ ಅಥವಾ ಮಸೀದಿಯಲ್ಲಿ ಇಂತಹ ಘಟನೆಗಳು ನಡೆದಿದ್ದಲ್ಲಿ ಸರ್ಕಾರವು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುತ್ತದೆ ಮತ್ತು ಮಾಧ್ಯಮಗಳು ಧ್ವನಿ ಎತ್ತುತ್ತವೆ. ಈ ಸಂದರ್ಭದಲ್ಲಿಯೂ ಸರ್ಕಾರವು ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡು ಹಿಂದೂಗಳ ಧಾರ್ಮಿಕ ಭಾವನೆಯ ಗೌರವವನ್ನು ಕಾಪಾಡಬೇಕು ಎಂಬುದು ಹಿಂದೂಗಳ ಆಶಯವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ.
ಈ ಘಟನೆಯ ಹಿಂದೆ ಎರಡು ಪಂಥಗಳ ನಡುವೆ ಶತ್ರುತ್ವ ನಿರ್ಮಾಣ ಮಾಡುವ ಷಡ್ಯಂತ್ರವಿದೆ ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಈ ರೀತಿಯಲ್ಲಿ ಹಿಂದೂ ದೇವತೆಗಳ ಅಪಮಾನ ಮಾಡಿ, ಹಿಂದೂ ಧಾರ್ಮಿಕ ಭಾವನೆಗೆ ನೋವುಂಟು ಮಾಡುವುದು ಭಾರತೀಯ ದಂಡ ಸಂಹಿತೆ 2950 ಪ್ರಕಾರ ಅಪರಾಧವಾಗಿದೆ. ಕೂಡಲೇ ಸಿಸಿ ಟಿವಿ ಕ್ಯಾಮೆರಾ ಇತ್ಯಾದಿ ಮಾಧ್ಯಮಗಳಿಂದ ಅಪರಾಧಿಗಳನ್ನು ಹುಡುಕಿ, ಕಠಿಣ ಶಿಕ್ಷೆ ನೀಡಬೇಕು, ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಬೇಕು ಮತ್ತು ಸರಕಾರವು ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಜರುಗಿಸಬೇಕು ಎಂದು ಸಮಿತಿಯು ಆಗ್ರಹಿಸಿದೆ.
Click this button or press Ctrl+G to toggle between Kannada and English