ಪೆಟ್ರೋಲ್ ಬಂಕ್ ಗೆ ನುಗ್ಗಿ ಕಂಪ್ಯೂಟರ್, ಸಿಸಿ ಕ್ಯಾಮೆರಾ ದೋಚಿದ ಕಳ್ಳರು

2:23 PM, Monday, January 25th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Vitla petropl Pumpವಿಟ್ಲ:  ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಕಳವುಗೈದ ಘಟನೆ ಭಾನುವಾರ  ತಡರಾತ್ರಿ ನಡೆದಿದೆ.

ಬಂಕ್ ನ ಕಚೇರಿಯ ಬೀಗ ಒಡೆದು ನುಗ್ಗಿದ ದರೋಡೆಕೋರರು ಕಂಪ್ಯೂಟರ್ ಮತ್ತು ಸಿಸಿ ಕ್ಯಾಮೆರಾಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ದೋಚಿದ್ದಾರೆ.

ಕಚೇರಿಯ ಎಲ್ಲಾ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿದ್ದಾರೆ. ಸುಮಾರು 2 ಲಕ್ಷದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲ ಸಮಯದ ಹಿಂದೆ ಕುದ್ದುಪದವಿನಲ್ಲಿರುವ ಎಸ್ಸಾರ್ ಕಂಪನಿಯ ಬಂಕ್ ಗೆ ಕಳ್ಳರು ನುಗ್ಗಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English