ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಕಂಪ್ಯೂಟರ್ ಕಲಿಯಲು ಡಿಜಿಟಲ್ ಬಸ್

Wednesday, November 15th, 2023
M-Friends

ಮಂಗಳೂರು : ಶಿಕ್ಷಣದಲ್ಲಿ ನವ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಕಲಿಯಲು ಪ್ರಾಥಮಿಕ ಹಂತದಲ್ಲೇ ಕಂಪ್ಯೂಟರ್ ಕಲಿಕೆಯು ಪ್ರಸ್ತುತ ಕಾಲಘಟ್ಟದ ಅನಿವಾರ್ಯತೆಯಾಗಿದೆ. ಗ್ರಾಮೀಣ ಮತ್ತು ಹಳ್ಳಿಗಾಡು ಪ್ರದೇಶದ ಮಕ್ಕಳು ಅದರಲ್ಲೂ ಸರಕಾರೀ ಶಾಲಾ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಮಂಗಳೂರಿನ ಪ್ರಸಿದ್ಧ ಸೇವಾ ಸಂಸ್ಥೆಯಾದ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ (ರಿ) ತನ್ನ ದಶಮಾನೋತ್ಸವದ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ನೂತನ ತಂತ್ರಜ್ಞಾನದ ಡಿಜಿಟಲ್ ಬಸ್ ಒಂದನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುತ್ತಿದೆ. “ಕ್ಲಾಸ್ ಆನ್ ವ್ಹೀಲ್ಸ್” […]

ಪೆಟ್ರೋಲ್ ಬಂಕ್ ಗೆ ನುಗ್ಗಿ ಕಂಪ್ಯೂಟರ್, ಸಿಸಿ ಕ್ಯಾಮೆರಾ ದೋಚಿದ ಕಳ್ಳರು

Monday, January 25th, 2021
Vitla petropl Pump

ವಿಟ್ಲ:  ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಕಳವುಗೈದ ಘಟನೆ ಭಾನುವಾರ  ತಡರಾತ್ರಿ ನಡೆದಿದೆ. ಬಂಕ್ ನ ಕಚೇರಿಯ ಬೀಗ ಒಡೆದು ನುಗ್ಗಿದ ದರೋಡೆಕೋರರು ಕಂಪ್ಯೂಟರ್ ಮತ್ತು ಸಿಸಿ ಕ್ಯಾಮೆರಾಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ದೋಚಿದ್ದಾರೆ. ಕಚೇರಿಯ ಎಲ್ಲಾ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿದ್ದಾರೆ. ಸುಮಾರು 2 ಲಕ್ಷದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲ ಸಮಯದ ಹಿಂದೆ ಕುದ್ದುಪದವಿನಲ್ಲಿರುವ […]

ವಿಟ್ಲ ಉಪ ನೋಂದಣಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಂಜೀವ ಮಠಂದೂರು

Friday, September 11th, 2020
vitla Subregister

ಬಂಟ್ವಾಳ:  ವಿಟ್ಲ ಉಪನೋಂದಣಿ ಕಚೇರಿಗೆ ದಿಢೀರನೆ ಭೇಟಿ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವಿಟ್ಲ ಉಪ ನೋಂದಣಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದಿದೆ. ಸಾರ್ವಜನಿಕರ ನಿರಂತರ ದೂರಿನ ಹಿನ್ನೆಲೆಯಲ್ಲಿ  ವಿಟ್ಲ ಉಪ ನೋಂದಣಿ  ಕಚೇರಿಗೆ ಭೇಟಿ ನೀಡಿದ ಶಾಸಕರು ಉಪನೋಂದಣಾಧಿಕಾರಿ ಪ್ರೇಮಾ  ಅವರನ್ನು  ನೀವು ಬೆಳಿಗ್ಗೆ 11 ಗಂಟೆಗೆ ಕರ್ತವ್ಯ ಹಾಜರಾಗುತ್ತಿದ್ದೀರಿ, ಪ್ರತಿನಿತ್ಯ ಜನರು ತಮ್ಮ ಕೆಲಸಕ್ಕೆ ಕಾಯಬೇಕು. ಕೆಲವರು ಕೆಲಸ ನಡೆಯದೇ ಹಿಂತಿರುಗುತ್ತಿದ್ದಾರೆ. ಜನರೊಂದಿಗೆ ದರ್ಪದಿಂದ ವರ್ತಿಸುತ್ತಿದ್ದೀರಿ ಎಂಬ ದೂರು ಬರುತ್ತಿದೆ. ನಾನು […]