ಶಾಸಕ ಯು.ಟಿ.ಖಾದರ್ ಸಹೋದರ ಯು.ಟಿ. ಇಫ್ತಿಕಾರ್ ಮನೆಗೆ ಐಟಿ ದಾಳಿ

6:32 PM, Thursday, February 18th, 2021
Share
1 Star2 Stars3 Stars4 Stars5 Stars
(No Ratings Yet)
Loading...

UT Ifthikarಮಂಗಳೂರು : ಆಸ್ಪತ್ರೆ ಮತ್ತು ಅದರ ಮಾಲಕರ ಮನೆಗೆ ದಾಳಿ ನಡೆಸಿದ ಮರುದಿನವೇ  ಶಾಸಕ ಯು.ಟಿ.ಖಾದರ್ ಅವರ ಸಹೋದರ ಯು.ಟಿ. ಇಫ್ತಿಕಾರ್ ಅಲಿ ಅವರ ಮನೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ನಗರದ ಲೈಟ್‌ಹೌಸ್‌ನ ಅಪಾರ್ಟ್‌ಮೆಂಟ್ನಲ್ಲಿ ಇರುವ ಇಫ್ತಿಕಾರ್ ಅಲಿ  ಫ್ಲ್ಯಾಟ್‌ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬುಧವಾರದಿಂದ ಐಟಿ ಅಧಿಕಾರಿಗಳು ಮಂಗಳೂರಿನ‌ ಉದ್ಯಮಿಗಳಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ದಾಳಿ ಮುಂದುವರಿಸಿದ್ದು, ಅದರ ಭಾಗವಾಗಿಯೇ ಯು.ಟಿ. ಇಫ್ತಿಕಾರ್ ಮನೆಗೂ ದಾಳಿ ನಡೆದಿದೆ. ದಾಳಿಗೊಳಗಾದ ಸಂಸ್ಥೆಗಳಲ್ಲಿ ಇಫ್ತಿಕಾರ್‌ಗೆ ಪಾಲುದಾರಿಕೆ ಇತ್ತು ಎಂಬ ಶಂಕೆಯಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English