ನಾಯಿಯನ್ನು ಬೆನ್ನಟ್ಟಿ ಮನೆಯ ಕೋಣೆಯೊಳಗೆ ನುಗ್ಗಿದ ಚಿರತೆ

5:18 PM, Sunday, March 21st, 2021
Share
1 Star2 Stars3 Stars4 Stars5 Stars
(No Ratings Yet)
Loading...

chitaಬ್ರಹ್ಮಾವರ : ಚಿರತೆಯೊಂದು ರವಿವಾರ ನಸುಕಿನ ವೇಳೆ ಮನೆಯ ಕೋಣೆ ಯೊಳಗೆ ನುಗ್ಗಿದ್ದು ಅರಣ್ಯ ಇಲಾಖೆಯವರು ಕಾರ್ಯಾಚರಣೆ ಮೂಲಕ ಚಿರತೆಯನ್ನು ರಕ್ಷಿಸಿದ್ದಾರೆ.  

ನೈಲಾಡಿ ಸಮೀಪ ಬೇಟೆ ಅರಸಿ ನಾಡಿಗೆ ಬಂದ ಚಿರತೆ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದಾಗ, ಹೆದರಿದ ನಾಯಿ ಮನೆಯ ಕೋಣೆಯೊಳಗೆ ನುಗ್ಗಿ ಸೇರಿಕೊಂಡಿತು. ನಾಯಿಯನ್ನು ಅಟ್ಟಿಸಿಕೊಂಡು ಚಿರತೆಯು ಕೋಣೆಯೊಳಗೆ ಸೇರಿಕೊಂಡಿತು. ಕೋಣೆಯೊಳಗೆ ಸದ್ದು ಕೇಳಿ ಮನೆಯವರು ಎಚ್ಚರಗೊಂಡು ಕೋಣೆಯ ಬಾಗಿಲು ಹಾಕಿದರು. ನಂತರ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಸ್ಥಳಕ್ಕೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ್, ಸಿಬ್ಬಂದಿ ರವಿ, ರವೀಂದ್ರ, ಸಂತೋಷ್ ಜೋಗಿ, ವಿಠಲ್ ನಾಯ್ಕ್, ಲಕ್ಷ್ಮಣ, ಶಿವು, ಸುದೀಪ್ ಶೆಟ್ಟಿ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದರು.

ಬೋನ್ ಇಟ್ಟು ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರದೊಂದಿಗೆ ಚಿರತೆಯನ್ನು ಹಿಡಿದರು. ಸ್ಥಳದಲ್ಲಿ ಪರಿಸರದ ನೂರಾರು ಗ್ರಾಮಸ್ಥರು ನೆರೆದಿದ್ದರು.

ಸತತ ಒಂದೂವರೆ ಗಂಟೆಯ ನಿರಂತರ ಕಾರ್ಯಾಚರಣೆ ನಡೆಸಿ ಚಿರತೆ ಯನ್ನು ರಕ್ಷಿಸಲಾಯಿತು. ಬಳಿಕ ಸಾಯಿಬರ್‌ಕಟ್ಟೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಮೀಸಲು ಅರಣ್ಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು. ಘಟನೆಯಲ್ಲಿ ನಾಯಿ ಪ್ರಾಣ ಕಳಕೊಂಡಿದೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English