ಭಾರತದ ಎಲ್ಲಾ ಮುಸ್ಲಿಮರ ಪೂವರ್ಜರು ಹಿಂದುಗಳೇ, ನಾವೆಲ್ಲರೂ ಹಿಂದೂಗಳ ಸಂತಾನ : ಮೌಲಾನಾ ತಾರೀಕ್ ಜಮೀಲ್

8:00 AM, Saturday, April 3rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

maulana-tariq-jameelಪಾಕಿಸ್ತಾನದ ಪ್ರಖ್ಯಾತ ಮೌಲಾನಾ ಹಾಗು ಬಾಲಿವುಡ್‌ನ ಅಮೀರ್ ಖಾನ್‌ನ ಧಾರ್ಮಿಕ ಗುರು ಮೌಲಾನಾ ತಾರೀಕ್ ಜಮೀಲ್ ಮಾತನಾಡುತ್ತ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗು ಇತರ ದೇಶಗಳ ಎಲ್ಲಾ ಮುಸಲ್ಮಾನರೂ ಹಿಂದುಗಳ ಸಂತಾನವೇ ಆಗಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ತಾನು ಕೂಡ ಹಿಂದುಗಳ ಸಂತಾನ, ಹಿಂದುಗಳ ವಂಶಸ್ಥನೆಂದು ಘೋಷಿಸಿಕೊಂಡಿದ್ದು ತಾನು ಪ್ರಥ್ವಿರಾಜ್ ಚೌಹಾಣ್ ವಂಶಜನೆಂದೂ ಹೇಳಿಕೊಂಡಿದ್ದಾರೆ.

ತಾರೀಕ್ ಜಮೀಲ್ ಮುಸಲ್ಮಾನರ ತುಂಬಿದ ಸಭೆಯಲ್ಲಿ ಇಸ್ಲಾಮಿಕ್ ಪ್ರವಚನ ನೀಡುತ್ತಿದ್ದರು, ಮಾತನಾಡುವ ಸಂದರ್ಭದಲ್ಲಿ ಅವರು ನಾವಂತೂ ಪೃಥ್ವಿರಾಜ್ ಚೌಹಾಣ್‌ನ ವಂಶಸ್ಥರೇ ಆಗಿದ್ದೇವೆ ಅನ್ನೋದನ್ನ ಮರೀಬೇಡಿ ಎಂದಿದ್ದಾರೆ. ತಾರೀಕ್ ಜಮೀಲ್ ತಮ್ಮನ್ನ ತಾವು ಪೃಥ್ವಿರಾಜ್ ಚೌಹಾಣ್‌ನ ವಂಶದ ಕುಡಿಯೇ ಆಗಿದ್ದೇನೆ ಎಂದೂ ಘೋಷಿಸಿದ್ದಾರೆ.

ತಾರೀಕ್ ಜಮೀಲ್ ಮಾತನಾಡುತ್ತ ನಮ್ಮೆಲ್ಲರ (ಮುಸಲ್ಮಾನರ) ಪೂರ್ವಜರೂ ಹಿಂದೂಗಳೇ ಎಂದು ತಾರೀಕ್ ಜಮೀಲ್ ಒಪ್ಪಿಕೊಂಡಿದ್ದಾರೆ ಹಾಗು ನಾವೆಲ್ಲಾರೂ ಹಿಂದುಗಳ ಸಂತಾನ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅವರು ಮುಂದೆ ಮಾತನಾಡುತ್ತ “ನೀವು ಎಷ್ಟೇ ಬಾರಿ ನಿಮ್ಮ‌ ಮಜಹಬ್ (ಮತ) ಬದಲಿಸಿಕೊಳ್ಳಿ ಆದರೆ ನಿಮ್ಮ ಪೂರ್ವಜರನ್ನ ಹಾಗು ಅವರ ಧರ್ಮ ಹಿಂದೂ ಧರ್ಮವನ್ನ ಮಾತ್ರ ಬದಲಿಸೋಕೆ ಸಾಧ್ಯವಿಲ್ಲ” ಎಂದಿದ್ದಾರೆ.

ಜಿಂದ್, ಹರಿಯಾಣಾ: ಜಿಲ್ಲೆಯ ಧಮ್ತಾನ್ ಸಾಹಿಬ್ ಗ್ರಾಮದಲ್ಲಿ ಆರು ಮು-ಸ್ಲಿಂ ಕುಟುಂಬಗಳ 35 ಸದಸ್ಯರು ಬುಧವಾರ ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದ್ದಾರೆ. ಗ್ರಾಮದ ಸರ್ಪಂಚ್ ಮತ್ತು ಗ್ರಾಮದ ಜನರ ಸಮ್ಮುಖದಲ್ಲಿ ಹವನ ಮಾಡಿಸುವ ಮೂಲಕ ಅವರನ್ನ ಹಿಂದೂ ಧರ್ಮಕ್ಕೆ ಬರ ಮಾಡಿಕೊಳ್ಳಲಾಯಿತು. ನಂತರ ಎಲ್ಲಾ ಸದಸ್ಯರು ಜನಿವಾರ ಧರಿಸಿದರು. ಹಿಂದೆ ದಾನೋಡ ಕಲಾನ್ ಗ್ರಾಮದಲ್ಲಿ, ಆರು ಮುಸ್ಲಿಂ ಕುಟುಂಬಗಳ ಸುಮಾರು 35 ಸದಸ್ಯರು ಮಾರ್ಚ್ 18 ರಂದು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದರು.

ಮುಸ್ಲಿಂನಿಂದ ಹಿಂ-ದೂ ಧರ್ಮಕ್ಕೆ ವಾಪಸ್ಸಾದ ದಿನೇಶ್, ಗ್ರಾಮದ ಮಿರಾಸಿ ಬರ್ದಾರಿ ಯಿಂದ ಮುಸ್ಲಿಂ ಕುಟುಂಬಗಳು ತಮ್ಮ ಜೀವನವನ್ನು ಹಿಂದೂ ರೀತಿಯಲ್ಲಿ ಬದುಕುತ್ತಿರುವುದರಿಂದ ತಮ್ಮನ್ನು ತಾವು ಹಿಂದೂ ಎಂದು ಘೋಷಿಸಿಕೊಳ್ಳಬೇಕು ಎಂದು ನಿರ್ಧರಿಸಿದರು. ಅವರು ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜಿಸುತ್ತಿದ್ದರು, ಎಲ್ಲಾ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದೆವು. ಹಿಂದೂ ಕುಟುಂಬಗಳೊಂದಿಗೆ ಸಹೋದರತ್ವವಿದೆ, ಮುಸ್ಲಿಂ ಧರ್ಮದ ಪ್ರಕಾರ ಅಂತಿಮ ವಿಧಿಗಳನ್ನು ನಡೆಸಲಾಗುತ್ತಿತ್ತು. ತಾವು ಹಿಂದೂ ಆಗಿದ್ದೇವು ಎಂದು ನಮ್ಮ ಪೂರ್ವಜರಿಂದ ಕೇಳಿದ್ದೇವು. ಮೊಘಲ್ ಆಳ್ವಿಕೆಯಲ್ಲಿ ನಮ್ಮ ಪೂರ್ವಜರು ಮುಸ್ಲಿಮರಾಗಿದ್ದರು. ಅದರೆ ನಾವು ಎಂದಿಗೂ ರೋ’ಜಾ ಇರುತ್ತಿರಲಿಲ್ಲ ಮತ್ತು ಮಸೀದಿಯಲ್ಲಿ ಕಲ್ಮಾ ಓದಲಿಲ್ಲ. ನಾವು ಮುಸ್ಲಿಮರು ಎಂಬ ಗೊಂದಲ ಜನರಲ್ಲಿ ಇತ್ತು. ಹಿಂದೂ ಧರ್ಮ ಅಪ್ಪಿಕೊಂಡ ನಜೀರ್ ಕುಟುಂಬದಲ್ಲಿ ಬಲ್ಬೀರ್, ಸದ್ದೀಕ್, ದಿನೇಶ್, ರಾಜೇಶ್, ಸತ್ಬೀರ್ ಮತ್ತು ಶಿರ್ಫು ಇದ್ದಾರೆ.

muslimಯಾರದೋ ಒತ್ತಡಕ್ಕೆ ಮಣಿದು ನಾವು ಹಿಂದೂ ಧರ್ಮವನ್ನು ಒಪ್ಪಿಕೊಂಡಿಲ್ಲ ಬದಲಿಗೆ ಸ್ವಯಂಪ್ರೇರಣೆಯಿಂದ ಹಿಂದೂ ಧರ್ಮವನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ಪೂರ್ವಜರು ಮೊಘಲ್ ಆಳ್ವಿಕೆಗಿಂತ ಮುಂಚೆ ಹಿಂದೂಗಳಾಗಿದ್ದರು. ಈಗ ನಾವು ಹಿಂದೂ ಆಚಾರ ವಿಚಾರದಂತೆ ಜೀವನ ನಡೆಸುತ್ತಿದ್ದೇವೆ. ನಮ್ಮ ಸಮಾಜದ ಹಿಂದಿನ ಜನರು ವಿದ್ಯಾವಂತರಾಗಿರಲಿಲ್ಲ, ಅವರಿಗೆ ಹಳೆಯ ವಿಷಯಗಳು ತಿಳಿದಿರಲಿಲ್ಲ. ಈಗ ನಾವು ನಮ್ಮ ಮೂಲ ಹಿಂ-ದೂ ಧರ್ಮಕ್ಕೆ ಮರಳಿದ್ದೇವೆ. ನಮ್ಮ ಆರು ಕುಟುಂಬದ 35 ಸದಸ್ಯರು ಹಿಂದೂ ಧರ್ಮವನ್ನು ಸ್ವೀಕರಿಸಿದ್ದು, ಜನಿವಾರವನ್ನ ಸಹ ಧರಿಸಿದ್ದೇವೆ ಎಂದು ದಿನೇಶ್ ಹೇಳಿದರು.

ಹಿಂದೂ ಧರ್ಮಕ್ಕೆ ಮರಳಿದ್ದಾರೆ ಎಂದು ಧಮ್ತಾನ್ ಗ್ರಾಮದ ಸರ್ಪಂಚ್ ಜೈಪಾಲ್ ಹೇಳಿದ್ದಾರೆ. ನಜೀರ್ ಕುಟುಂಬವು ಗ್ರಾಮದ ಹಿರಿಯರು ಮತ್ತು ವೃದ್ಧರ ಸಮ್ಮುಖದಲ್ಲಿ ಹಿಂದೂ ಧರ್ಮಕ್ಕೆ ಮರಳುವ ಬಗ್ಗೆ ಮಾತನಾಡಿದರು. ಅದು ಅವರ ಸಾಂವಿಧಾನಿಕ ಹಕ್ಕು, ನಜೀರ್ ಕುಟುಂಬದ ಜನರು ಹವನದಲ್ಲಿ ಆಹುತಿ ಅರ್ಪಿಸುವ ಮೂಲಕ ಜನಿವಾರವನ್ನ ಧರಿಸಿದ್ದಾರೆ. ಎಲ್ಲಾ ಜಾ-ತಿ ಮತ್ತು ಧರ್ಮದ ಜನರು ಭ್ರಾತೃತ್ವದೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English