ವ್ಯಾಕ್ಸಿನ್ ಕಳ್ಳ ದಂಧೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಮತ್ತು ಸಿಬ್ಬಂದಿ ಪೊಲೀಸ್ ಬಲೆಗೆ

2:24 PM, Friday, May 21st, 2021
Share
1 Star2 Stars3 Stars4 Stars5 Stars
(No Ratings Yet)
Loading...

Pushpikaಬೆಂಗಳೂರು:   ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಡಾ.ಪುಷ್ಪಿತಾ(25) ಮತ್ತು ಸಿಬ್ಬಂದಿ ಪ್ರೇಮಾ (34) ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಡಾ. ಪುಷ್ಪಿತಾ ಳು. ಆಸ್ಪತ್ರೆಗೆ ಬರುತ್ತಿದ್ದ ಲಸಿಕೆಗಳನ್ನು ಪ್ರೇಮಾ ಅನ್ನಪೂರ್ಣೇಶ್ವರಿ ನಗರದಲ್ಲಿರುವ ತನ್ನ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು. ಬಳಿಕ ಮನೆಯಲ್ಲಿಯೇ ಅಕ್ರಮವಾಗಿ ಲಸಿಕೆ ನೀಡುವ ದಂಧೆ ಆರಂಭಿಸಿದ್ದಳು ಎನ್ನಲಾಗಿದೆ.

ಏ.23 ರಿಂದಲೂ ತಲಾ 500 ರೂ. ಪಡೆದು ಇವರು ಲಸಿಕೆಯನ್ನು ವಿತರಿಸುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಆಧಾರಿಸಿ ಲಸಿಕೆ ಪಡೆಯುವ ನೆಪದಲ್ಲಿ ಮನೆಗೆ ತೆರಳಿದ್ದ ಪೊಲೀಸರು, ರೆಡ್ ಹ್ಯಾಂಡಾಗಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 1 ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸಿರೀಂಜ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಜನರು  ಫೋನ್ ಮೂಲಕ ವ್ಯಾಕ್ಸಿನ್ ಬುಕ್ ಮಾಡಿ ಅವರ ಹೆಸರನ್ನು ಹೇಳುತ್ತಿದ್ದರು. ವೈದ್ಯೆ ನೋಟ್ ಬುಕ್ ಅಲ್ಲಿ ಅವರ ಹೆಸರು ಬರೆದುಕೊಳ್ಳುತ್ತಿದ್ದಳು. ಬಳಿಕ ವ್ಯಾಕ್ಸಿನ್‍ಗಾಗಿ ಸಾಲು ನಿಂತವರಲ್ಲಿ ಇವರ ಹೆಸರು ಕೇಳಿ, ನೋಟ್ ಬುಕ್ ನಲ್ಲಿ ರಿಜಿಸ್ಟರ್ ಆಗಿದ್ದರೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತಿತ್ತು.

ಈ ವೈದ್ಯೆ  ಹೆಸರು, ಆಧಾರ್ ನಂಬರ್ ಇಟ್ಟುಕೊಂಡು ಹೋಗಿ ಮನೆಯಲ್ಲಿ ವ್ಯಾಕ್ಸಿನ್ ನೀಡುತ್ತಿದ್ದರು. ಬಳಿಕ ಮರು ದಿನ ಆಸ್ಪತ್ರೆಗೆ ಹೋಗಿ ಕೋವಿನ್ ಆ್ಯಪ್ ನಲ್ಲಿ ಎಂಟ್ರಿ ಆಗುತ್ತಿತ್ತು. ಕೋವಿನ್ ಅಪ್ ನಲ್ಲಿ ಸಹ ವಯಸ್ಸಿನ ಲೆಕ್ಕ ತಪ್ಪು ಹಾಕಿದ್ದು, 23 ವರ್ಷದವರಿಗೆ ವ್ಯಾಕ್ಸಿನೇಷನ್ ಮಾಡಿದರೂ ವಯಸ್ಸು ಎಂಟ್ರಿ ಮಾಡುವಾಗ ಮೋಸ ಮಾಡುತ್ತಿದ್ದರು.

ಡಾಕ್ಟರ್ ಪುಷ್ಪಿತಾ ಸ್ನೇಹಿತರೂ ಕೂಡ ಇದೇ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಇನ್ನುಳಿದ ಸ್ನೇಹಿತ ಡಾಕ್ಟರ್ ಗಳು ಕೂಡ ಇದೇ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರತಿ ದಿನ ಸರ್ಕಾರದ ವ್ಯಾಕ್ಸಿನ್ ನಲ್ಲಿ ವೈದ್ಯೆ ಮತ್ತು ಸಿಬ್ಬಂದಿ 30 ಸಾವಿರ ಜೇಬಿಗಿಳಿಸಿಕೊಳ್ಳುತ್ತಿದ್ದರು. 25 ದಿನಗಳಿಂದ ಸರ್ಕಾರಿ ವ್ಯಾಕ್ಸಿನ್ ನ್ನು ಕದ್ದು ಡಾ.ಪುಷ್ಪಿತಾ ಮತ್ತು ಪ್ರೇಮಾ ಹಣ ಸಂಪಾದನೆ ಮಾಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English